ನಾನು ಶೇಷಾದ್ರಿಪುರಂನ ಡಾನ್, ನೀನೆಲ್ಲೇ ಹೋದರು ಹುಡುಕಿ ಹೊಡೆಯುತ್ತೀನಿ...!


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಶೇಷಾದ್ರಿಪುರಂನಿಂದ ಹಾದು ಹೋಗು ಹೊನ್ನಾಳಿ ರಸ್ತೆಯಲ್ಲಿರುವ ಮಾರಿ ಬನದಲ್ಲಿ ಸ್ಕೂಟಿ ಮೇಲೆ ಹೊರಟ ಯುವಕರನ್ನ ರಾಬರಿಗೆ ಯತ್ನಿಸಲಾಗಿದೆ. ರಾಬರಿಗೆ ಅಡ್ಡಿಯುಂಟಾದ ಪರಿಣಾಮ ಯುವಕರನ್ನ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನ ನಡೆಸಿರುವ ಘಟನೆ ವರದಿಯಾಗಿದೆ. 

ಎನ್ ಟಿ ರಸ್ತೆಯಿಂದ ರಾಗಿಗುಡ್ಡದಲ್ಲಿರುಚ ಸ್ನೇಹಿತನ ಮನೆಗೆ ಹೊರಡಲು ಹೊರಟಿದ್ದ ವರುಣ್ ಮತ್ತು ಸುಭಾಶ್ ಪ್ರಭು ಎಂಬ ಯುವಕರು ಸ್ಕೂಟಿಯಲ್ಲಿ ಶೇಷಾದ್ರಿಪುರಂನ ಫ್ಲೈ ಓವರ್ ಕೆಳಗಿನಿಂದ ಮಾರಿಬನವನ್ನ ದಾಟಿ ಹೋಗುವಾಗ ಇಬ್ಬರು ಅಪರಿಚಿತರು ತಡೆದಿದ್ದಾರೆ. 

ಸುಭಾಶ್ ಪ್ರಭುವಿನ ಜೇಬಿಗೆ ಕೈಹಾಕಿ ಮೊಬೈಲ್ ಎಗುರಿಸಲು ಮುಂದಾಗಿದ್ದ ವ್ಯಕ್ತಿಯನ್ನ ಪ್ರಭು ತಡೆದಿದ್ದಾನೆ. ಈ ವೇಳೆ ನನ್ನನ್ನೇ ತಡೆಯುತ್ತೀಯ ಎಂದು ಗದರಿಸಿ ಪ್ರಭುವನ್ನ ಹಲ್ಲೆ ಮಾಡಿದ್ದಾರೆ. ಪ್ರಭು ತಪ್ಪಿಸಿಕೊಂಡಾಗ ವರುಣ್ ಮೇಲೆ ಹಲ್ಲೆ ನಡೆದಿದೆ. ವರುಣ್ ತಪ್ಪಿಸಿಕೊಳ್ಳಲಾಗದೆ ಒದ್ದಾಡಿದ್ದಾನೆ. 

ಪ್ರಭು ಕತ್ತಲೆಯಲ್ಲಿ ನಿಂತು ತನ್ನ ಇನ್ನಿತರ ಸ್ನೇಹಿತರನ್ನ ಕರೆಯಿಸಿಕೊಂಡಿದ್ದಾನೆ. ಈ ವೇಳೆ ರಾಬರಿ ನಡೆಸಲು ಬಂದಿದ್ದ ಇಬ್ಬರು ಅಪರಿಚಿತರು ವರುಣ್ ನನ್ನ ಘಾಸಿಗೊಳಿಸಿ ವಾಹನವನ್ನ ಜಕಂಗೊಳಿಸಿ ಪರಾರಿಯಾಗಿತ್ತು. 

ಸ್ನೇಹಿತರೆಲ್ಲ ಸೇರಿ ಆತನನ್ನ ಎತ್ತಿಕೊಂಡು ಹೋಗುವಾಗ ಶೇಷಾದ್ರಿಪುರಂ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬನು ನಾನು ಶೇಷಾದ್ರಿಪುರಂ ಡಾನ್ ನೀನು ಶಿವಮೊಗ್ಗದಲ್ಲಿ ಎಲ್ಲಿ ಹೋದರೂ ಹುಡುಕಿ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ವರುಣ್‌ನನ್ನ ಮೆಗ್ಗಾನ್‌ಗೆ ದಾಖಲಿಸಲಾಗಿದೆ. ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close