ಭಕ್ತರ ಗಮನ ಸೆಳೆಯುತ್ತಿದೆ ಓಂ ಹಾಗೂ ಜಠಾಯುಮಾನ ಗಣಪ

ಓಂ ಗಣಪತಿ

ಸುದ್ದಿಲೈವ್/ಶಿವಮೊಗ್ಗ


ನಾಡಿನಲ್ಲೆಡೆ ಗಣೇಶ ಹಬ್ಬದ ಸಂಭ್ರಮ ನಡೆಯುತ್ತಿದೆ. ಈ ನಡುವೆ ಹೊದಲ ಗ್ರಾಮದ ಗಣೇಶ ಗಮನ ಸೆಳೆಯುತ್ತಿದೆ. 

ಜಠಾಯು ವಿರಾಜಮಾನ ಗಣಪ


ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ಇದಾಗಿದೆ. ಜಠಾಯು ಮೇಲೆ ವಿರಾಜಮಾನರಾಗಿರುವ ಗಣೇಶನ ಗಮನ ಸೆಳೆಯುತ್ತಿದೆ. 


ಉಪೇಂದ್ರ ಆಚಾರ್ಯ ಅವರ ಕೈಚಳಕದಿಂದ ನಿರ್ಮಾಣವಾಗಿರುವ ಗಣೇಶನ ಮೂರ್ತಿಯು ಭಕ್ತರ ಗಮನ ಸೆಳೆಯುತ್ತಿದೆ. ಪ್ರತಿ ವರ್ಷ ಹೀಗೆ ವಿಶೇಷ ಗಣಪತಿಯನ್ನ ಕೂರಿಸುವುದು ಈ ಗಣಪತಿ ಪ್ರತಿಷ್ಠಾಪನೆಯ ವಿಶೇಷವಾಗಿದೆ. 

ಓಂ ಗಣಪತಿ ಪ್ರತಿಷ್ಠಾಪನೆ ಸಮಿತಿಯ ಸದಸ್ಯರು
ನ್ಯೂ ಮಂಡ್ಲಿಯಲ್ಲಿ ಸಿದ್ದವಾಗಲಿದೆ ಕಲಾಕೃತಿ

ಈಗಾಗಲೇ ಶಿವಮೊಗ್ಗದ ಐತಿಹಾಸಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಯಾಗಿದೆ. ಎನ್ ಟಿ ರಸ್ತೆಯ ಗಣಪತಿ ವಿರಾಜಮಾನವಾಗಿದೆ. ಶಿವಮೊಗ್ಗದ ಓಂ ಗಣಪತಿ ಸಹ ಗಮನ ಸೆಳೆದಿದೆ. ಅಶೋಕ ರಸ್ತೆಯ ಈ ಓಂ ಗಣಪತಿ ಸರಳವಾಗಿದ್ದರೂ, ಬ್ಯಾಕ್‌ಗ್ರೌಂಡ್ ಗಮನ ಸೆಳೆದಿದೆ. ಗೋವು ಮತ್ತು ನವಿಲಿನ ಜೊತೆ ಬಾಲಕೃಷ್ಣನ ಫೊಟೊ ಭಕ್ತರ ಗಮನ ಸೆಳೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close