ಸೋಮವಾರ, ಸೆಪ್ಟೆಂಬರ್ 9, 2024

ಹಾಲಲಕ್ಕವಳ್ಳಿಯನ್ನು ಪುನರ್ವಸಿತ ಗ್ರಾಮವೆಂದು ಘೋಷಿಸಿ ಅಭಿವೃದ್ಧಿ ಮಾಡುವಂತೆ


ಸುದ್ದಿಲೈವ್/ಶಿವಮೊಗ್ಗ


ಹಾಲಲಕ್ಕವಳ್ಳಿಯನ್ನು ಪುನರ್ವಸಿತ ಗ್ರಾಮವೆಂದು ಘೋಷಿಸಿ ಅಭಿವೃದ್ಧಿ ಮಾಡುವಂತೆ ಮಲೆನಾಡು ರೈತರು ಹೋರಾಟ ಸಮಿತಿ ಆಗ್ರಹಿಸಿದೆ. 


ತಾಲ್ಲೂಕಿನ  ನಿದಿಗೆ ಹೋಬಳಿಯ   ಹಾಲಲಕ್ಕವಳ್ಳಿ ಗ್ರಾಮವನ್ನು ಪುನವರ್ಸತಿ ಗ್ರಾಮವೆಂದು ಅಧಿಕೃತವಾಗಿ ಘೋಷಿಸಿ ತುಂಗಾ ಅಣೆಕಟ್ಟು ಯೋಜನೆಯಿಂದ ಬಾಧಿತರೆಂದು ಪರಿಗಣಿಸಿ ಸರ್ಕಾರವು ಅಗತ್ಯ ಮೂಲಭೂತ ಸೌಕರ್ಯ ನೀಡಲು ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮಲೆನಾಡ ರೈತರ ಹೋರಾಟ ಸಮಿತಿಯ ಅಧ್ಯಕ್ಷ ತೀ. ನಾ.ಶ್ರೀನಿವಾಸ ಆಗ್ರಹಿಸಿದ್ದಾರೆ. 


ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ  ಮಲೆನಾಡು ರೈತರ ಹೋರಾಟ ಸಮಿತಿ ಅಧ್ಯಕ್ಷ ತಿ. ನಾ. ಶ್ರೀನಿವಾಸ, ಗ್ರಾಮವು 1951 ರ ತುಂಗಾ ಅಣೆಕಟ್ಟು ನಿರ್ಮಿತ ಸಂದರ್ಭದಲ್ಲಿನ ಸಂತ್ರಸ್ತರಿಗೆ ಮತ್ತು ಭೂಹೀನರಿಗೆ ಪುನರ್ವಸತಿ ಗ್ರಾಮವಾಗಿದೆ.  ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯ ಅಣಿಕಟ್ಟು ಇದಾಗಿದ್ದು, ಈವರೆವಗೂ ಅರಣ್ಯ ಇಲಾಖೆಯು ತನ್ನ ಜಾಗವೆಂದು ಪರಿಗಣಿಸುತ್ತಿದೆ ಎಂದರು.


1951 ರ ತುಂಗಾ ಅಣೆಕಟ್ಟು ಯೋಜನಾ ವರದಿಯಲ್ಲಿ ಹಾಲಲಕ್ಕವಳ್ಳಿಯಲ್ಲಿ ತುಂಗಾ ಮುಳುಗಡೆ ಸಂತ್ರಸ್ತರಿಗೆ,  ಭೂಹೀನರಿಗೆ ಮಂಜೂರಾತಿ, ಗ್ರಾಮ ನಿರ್ಮಾಣ, ದೇವಸ್ಥಾನ, ಶಾಲೆ, ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. 1951 ರಿಂದಲೂ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಾಲಲಕ್ಕವಳ್ಳಿಯಲ್ಲಿ ಸುಮಾರು 690 ಎಕರೆ ತರಿ ಮತ್ತು ಖುಷ್ಕಿ ಜಮೀನು ಕಂದಾಯ ಇಲಾಖೆಯಿಂದ ಮಂಜೂರಾತಿ ನೀಡಲಾಗಿದೆ ಎಂದರು.


ತುಂಗಾ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಗೆ ಮಂಜೂರು ನೀಡಲಾಗಿದೆ.  ಕೆಲವು ಜಮೀನುಗಳಿಗೆ ಪಕ್ಕಾಪೋಡಿ ದುರಸ್ತಿ ಆಗಿದೆ. 1980 ರ ಹೊಸ ಅರಣ್ಯ ಕಾಯ್ದೆ ಜಾರಿಗಿಂತಲೂ ಮುಂಚಿತ ಈ ಜಮೀನುಗಳು ಮಂಜೂರಾಗಿದೆ. ಈಗ ಅರಣ್ಯ ಇಲಾಖೆಯವರು ಅರ್ಧ ಎಕರೆ ಯಿಂದ 3 ಎಕರೆ ಜಮೀನು ಹೊಂದಿದವರಿಗೂ, ಪಕ್ಕಾ ಫೋಡಿ ಆದವರಿಗೂ ಎ.ಸಿ ಕೋರ್ಟ್‌ಗೆ ಮೂಲ ಮಂಜೂರಾತಿ ರದ್ದುಗೊಳಿಲು ವಾಜ್ಯ ಹೂಡಿದ್ದಾರೆ ಎಂದರು.


ಕರ್ನಾಟಕ ಸರ್ಕಾರದ ಅರಣ್ಯ ಮಂತ್ರಿಗಳಿಗೆ, ಹಾಗೂ ಶಿವಮೊಗ್ಗ ಸಿಸಿಎಫ್ ಕಛೇರಿಗೆ ಸಲ್ಲಿಸಿದ ಡಿ-ನೋಟಿಫಿಕೇಶನ್ ಅರ್ಜಿ ಪರಿಶೀಲನಾ ಹಂತದಲ್ಲಿದೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.


ಹಾಲಲಕ್ಕವಳ್ಳಿ ಗ್ರಾಮ ಸರ್ವೆ ನಂ.18,19 ಮತ್ತು 20 ರ ಭೂಮಿಯನ್ನು  ತುಂಗಾ ಅಣಿಕಟ್ಟು ನಿರಾಶ್ರಿತರ ಮತ್ತು ಭೂಹೀನರಿಗೆ ಮಂಜೂರಾತಿ ಎಂಬ ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಜಮೀನುಗಳಿಗೆ ಡಿ ನೋಟಿಫಿಕೇಶನ್ ಮಾಡಿಕೊಡಲು ಮತ್ತು ಎ.ಸಿ.ಎಫ್ ಮತ್ತು ಎ.ಸಿ ಕೋರ್ಟ್‌ನಲ್ಲಿ ಅರಣ್ಯ ಇಲಾಖೆ ವತಿಯಿಂದ ವಾಜ್ಯ ಹೂಡುವುದನ್ನು ನಿಲ್ಲಿಸಲು ಹಾಗೂ ಈಗ ಹೂಡಿರುವ ವಾಜ್ಯಗಳನ್ನು ನೀಡಲಾದ ನೋಟೀಸುಗಳನ್ನು ಹಿಂಪಡೆಯಲು ಆಗ್ರಹಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ