ಐತಿಹಾಸಿಕ ಗಣಪ ಈ ಇಬ್ಬರು ನಾಯಕರನ್ನ ಒಂದು ಮಾಡಿದ್ನಾ?


ಸುದ್ದಿಲೈವ್/ಶಿವಮೊಗ್ಗ


ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ, ಮಾಜಿ ಸಿಎಂ ಬಿಎಸ್‌ವೈ, ಸಂಸದ ರಾಘವೇಂದ್ರರ ವಿರುದ್ಧ ಲೋಕಸಭಾ ಚುನಾವಣೆ ವೇಳೆ ತಿರುಗಿಬಿದ್ದಿದ್ದ ಮಾಜಿ ಡಿಸಿಎಂ ಈಶ್ವರಪ್ಪ, ಇಂದು  ಬಿ.ವೈ.ವಿಜೇಂದ್ರರವರ ಜೊತೆನೇ ಕುಳಿತುಕೊಂಡಿರುವ ಫೊಟೊವೊಂದು ವೈರಲ್ ಆಗಿದೆ. 


ಪುತ್ರ ಕಾಂತೇಶ್‌ಗೆ ಬಿಜೆಪಿಯು ಹಾವೇರಿ ಟಿಕೇಟ್ ನೀಡಲಿಲ್ಲ. ಟಿಕೇಟ್ ಸಿಗದಂತೆ ಅಡ್ಡಿಪಡಿಸಿದ್ದು ಬಿಎಸ್‌ವೈ ಕುಟುಂಬವೇ ಎಂದು ಆರೋಪಿಸಿದ್ದ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ರಾಘವೇಂದ್ರರ ವಿರುದ್ಧ ಕಣಕ್ಕಿಳಿದಿದ್ದರು.‌ ಚುನಾವಣೆ ಮುಗಿದ ನಂತರ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇನೆ ಆದರೆ ಕೆಲಬೇಡಿಕೆಗಳಿವೆ  ಎಂದು ಸಹ ಮಾಧ್ಯಮಗಳಿಗೆ ತಿಳಿಸಿದ್ದರು. 



ಆದರೆ, ಲೋಕಸಭ ಚುನಾವಣೆ ಫಲಿತಾಂಶ ಮುಗಿದು ತಿಂಗಳು ಕಳೆದಿವೆ.‌ ಯಾವ ಬದಲಾವಣೆಯೂ ಕಂಡು ಬಂದಿಲ್ಲ‌. ಆದರೆ ಇಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರರ ಪಕ್ಕದಲ್ಲಿಯೇ ಮಾಜಿ ಡಿಸಿಎಂ ಈಶ್ವರಪ್ಪ ಕುಳಿತುಕೊಂಡಿದ್ದಾರೆ. ಇಂದು ಕೋಟೆರಸ್ತೆಯಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲಿರುವ ಹಿಂದೂ ಮಹಾಸಭಾ ಗಣಪತಿಯ ಮಹಾಮಂಗಳಾರತಿ ಪೂಜೆಯ ವೇಳೆಗೆ ಭಾಗಿಯಾದ ಸಮಯದಲ್ಲಿ ನಾಯಕರನ್ನ ಒಟ್ಟಿಗೆ ಕೂರಿಸಲಾಗಿದೆ. ಈ ಇಬ್ವರ ನಾಯಕರ ಉಪಸ್ಥಿತಿ ಗಮನ ಸೆಳೆದಿದೆ. 


ಈ ಸುದ್ದಿ ರಾಜಕೀಯೇತರವಾಗಿ ನೋಡಲು ಸಾಧ್ಯವೇ ಇಲ್ಲ. ಇಬ್ಬರೂ ರಾಜಕಾರಣದಲ್ಲಿರುವುದರಿಂದ ಇದನ್ನ ರಾಜಕೀಯವಾಗಿಯೇ ನೋಡಲಾಗಿದೆ. ಇಬ್ಬರ ನಡುವೆಯೂ ರಾಜಕೀಯವಾಗಿ ಏನೂ ಮಾತುಕತೆ ನಡೆದಿಲ್ಲವೆನ್ನಲಾಗಿದೆ. ಆದರೆ ಐತಿಹಾಸಿಕ ಗಣೇಶ ಈ ಇಬ್ಬರೂ ನಾಯಕರನ್ನ ಒಂದು ಮಾಡಿದ್ದಾನೆ. ಮತ್ತೆ ಈಶ್ವರಪ್ಪ ಮರಳಿ ಬಿಜೆಪಿಗೆ ಸೇರ್ತಾರಾ ಎಂಬ ಕುತೂಹಲವನ್ನ ಮಾತ್ರ ಹಾಗೆ ಉಳಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು