ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರ ಸಾಂಸ್ಕೃತಿಕವಾಗಿ ಹಾಗೂ ಸ್ಮಾರ್ಟ್ ಸಿಟಿಯಿಂದ ಸುಂದರ ನಗರವಾಗಿದೆ. ಇದಕ್ಕೆ ಕಾರಣ ಪೌರಕಾರ್ಮಿಕರು. ಪೌರಕಾರ್ಮಿಕರಿಂದ ನಗರವನ್ನ ಸುಂದರವಾಗಿಡಲಾಗಿದೆ. ಅವರಿಗೆ ಸೇರಬೇಕಾದ ಗೃಹಭಾಗ್ಯ ಯೋಜನೆ ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ನಗರಕ್ಕೆ ಪೌರಕಾರ್ಮಿಕರ ಅವಶ್ಯಕತೆ ಇದೆ. ಪ್ರತಿದಿನ ಬೆಳಿಗ್ಗೆ ಅವರ ಸೇವೆ ಅತ್ಯಗತ್ಯವಾಗಿದೆ. ಒಂದು ಹೊತ್ತು ಕೆಲಸ ಮಾಡಲಿಲ್ಲ ಎಂದರೆ ನಗರ ಕಸದಿಂದ ಮುಚ್ಚಿಹೋಗಲಿದೆ.
ನಾನು ಶಾಸಕನಾಗಿದ್ದಾಗ ಅವರಿಗೆ ಮನೆ ನಿರ್ಮಿಸಿಕೊಡಲು ಗೃಹಭಾಗ್ಯ ಯೋಜನೆ ತರಲಾಗಿತ್ತು. ಆದರೆ ಮನೆ ಕಟ್ಟಿಕೊಡಲು ಬೇರೆ ಸರ್ಕಾರ ಬಂದರೂ ಕಾರ್ಯರೂಪಕ್ಕೆ ಬಾರದ ಈ ಯೋಜನೆಗೆ ಹಣ, ಜಾಗವೆಲ್ಲಾ ನೀಡಿದರೂ ಮನೆಹಂಚಲಾಗಿಲ್ಲ. ಒಂದು ವರ್ಷದಲ್ಲಿ ಗುತ್ತಿಗೆದಾರ 169 ಮನೆ ಕಟ್ಟಿಕೊಡಬೇಕು ಎಂದು ಚಾಪಾಕಾಗದಕ್ಕೆ ಸಹಿ ಹಾಕಿದ್ದ.
ಜಿ+2 ಅಡಿ ನಾಲ್ಕು ಭಾಗದಲ್ಲಿ ಮನೆ ಹಂಚಲು ತೀರ್ಮಾನಿಸಲಾಗಿತ್ತು. 17ಕೋಟಿ ರೂ. ಸಹ ಬಿಡುಗಡೆಯಾಗಿತ್ತು. ಟೆಂಡರ್ ಪಡೆದ ವ್ಯಕ್ತಿ ಚಾಪಕಾಗದದಲ್ಲಿ 26/03/2021 ಕ್ಕೆ ಮನೆ ಕಟ್ಟಿಕೊಡುವುದಾಗಿ ಬರೆದುಕೊಟ್ಟಿದ್ದ. ಆದರೆ ಆತನಿಂದ ಕೆಲಸ ಮಾಡಿಕೊಳ್ಳದೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಒಂದು ವರ್ಷದಲ್ಲಿ ಮನೆ ನಿರ್ಮಾಣ ಪೂರ್ಣವಾಗಬೇಕಿತ್ತು. 2024 ಸೆಪ್ಟಂಬರ್ ಕಳೆದರೂ ಪೂರ್ಣವಾಗಿಲ್ಲ. 6 ಎಕರೆ ಜೆಎನ್ ಸಿ ಕಾಲೇಜು ಹಿಂಭಾಗದಲ್ಲಿ ಜಾಗ ನೀಡಲಾಗುತ್ತು. ಮೂರು ಕೋಟಿಯಲ್ಲಿ ಪೌರಕಾರ್ಮಿಕರ ಸಭಾಭವನ ಚಿಕ್ಕಲ್ ನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಸಭಾಭವನ 3.63 ಕೋಟಿ ಬಿಡುಗಡೆಯಲ್ಲಿ 2.65 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ ಲೋಕರ್ಪಣೆಯಾಗಿಲ್ಲ. ಮನೆಗೆ 50% ಕೆಲಸನೂ ಆಗಿಲ್ಲ. ಸಭಾಭವನದ 75% ಕೆಲಸವಾಗಿದೆ ಆದರೆ ಪೂರ್ಣಗೊಂಡಿಲ್ಲ ಎಂದು ದೂರಿದರು.
ಅಧಿಕಾರಿಗಳು ನೋಟೀಸ್ ಕೊಟ್ಟಿರುವುದಾಗಿ ಹೇಳಿದ್ದಾರೆ. ಆದರೆ ನಮ್ಮ ಮನೆಯ ಕಾಮಗಾರಿಯಾದರೆ ಹೀಗೆ ಮಾಡ್ತೀವಾ ಎಂದು ಮಾಜಿ ಶಾಸಕರು ಪ್ರಶ್ನಿಸಿದರು. ನಮ್ಮ ಪಕ್ಷ ಕೂಡ ಬೆನ್ನೆಲುಬಾಗಿ ನಿಲ್ತಿವಿ. ಆಯುಕ್ತರಿಗೆ, ಜಿಲ್ಲಾ ಉಸ್ತುವಾರಿ, ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಗಮನ ಹರಿಸಲು ಮನವಿ ಮಾಡಿಕೊಂಡಿದ್ದಾರೆ.
ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಸರಿಯಾದ ಸಮಯದಲ್ಲಿ ನೀಡಿಲ್ಲ. 17 ಕೋಟಿ ಟೆಂಡರ್ ಆದರೆ 11% ಹಣ ಹೆಚ್ಚಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು. ಕೆಲಸ ಮಾಡುವ ಕೆಲಸ ಆಗಬೇಕಿತ್ತು. ಟೆಂಡರ್‌ದಾರಙ್ನ ಕರೆದುಕೊಂಡು ಬಂದು ಕೆಲಸ ಮಾಡಿಸಲು ಅಧಿಕಾರ ಇದ್ದರೂ ಕೆಲಸ ಆಗುತ್ತಿಲ್ಲ. ಬೇಗ ಮನೆ ಮತ್ತು ಸಭಾಭವನ ಹಂಚಬೇಕು ಎಂದು ಆಗ್ರಹಿಸಿದರು.