ವೃದ್ಧ ದಂಪತಿಗಳ ಮನೆಯ ಮುಂದೆ ಕಲ್ಲು ಎತ್ತಿಹಾಕಿ ವಾಹನ ಜಖಂ-ಕೊಲೆ ಬೆದರಿಕೆ



ಸುದ್ದಿಲೈವ್/ಶಿವಮೊಗ್ಗ


ಮಂಜುನಾಥ ನಿವಾಸಿಯೊಬ್ಬರು ಯಾವುದೋ ಪ್ರಕರಣದಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ವಾಪಾಸ್ ತೆಗೆದುಕೊಳ್ಳಿ ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಧಮ್ಕಿ ಹಾಕಿ ಹೈಡ್ರಾಮಾ ನಡೆಸಿ, ಅವರ ಮನೆಯ ಮುಂಭಾಗದಲ್ಲಿ ನಿಂತಿದ್ದ ಕಾರಿನ ಗ್ಲಾಜು ಹೊಡೆದಿರುವ ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. 



ಅಬ್ದುಲ್ ಸಲಿಂ ಬಿನ್ ಅಬ್ದುಲ್ ಗಫಾರ್, ಇಲಿಯಾಜ್ ನಗರದ ಮೊಹಮದ್ ಹುಸೇನ್  ಮನೆಯ ಗೇಟಿನ ಒಳಗೆ ಅಕ್ರಮ ಪ್ರವೇಶ ಮಾಡಲು  ಗೇಟು ಬಾಗಿಲು ಹೊಡೆದು ಚಾಕುವಿನಿಂದ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ  ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಸೆ.29 ರಂದು ರಾತ್ರಿ 11:50 ರ ಸಮಯದಲ್ಲಿ ಅಬ್ದುಲ್ ಸಲಿಂ  ದ್ವಿಚಕ್ರ ವಾಹನದಲ್ಲಿ ಇಲ್ಯಾಸ್ ನಗರದ 6ನೇ ತಿರುವಿನಲ್ಲಿರುವ ಹುಸೇನ್ ಮನೆಗೆ ಬಂದಿದ್ದು  ಮನೆಯ ಗೇಟಿನ ಮುಂದೆ ವಾಹನ ನಿಲ್ಲಿಸಿ ಯಾರಿಗೂ ಕರೆ ಮಾಡಿ ಗೇಟಿನ ಶಬ್ದ ಕೇಳಿಸುತ್ತಿದ್ದೀಯ ಎಂದು ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದ್ದು,  ಗೇಟು ಬಾಗಿಲು ಹೊಡೆದು ಹಾಕುವ ರೀತಿಯಲ್ಲಿ ಕಾಲಿನ ಮೇಲೆ ಕಲ್ಲಿನಿಂದ ಹೊಡೆದಿದ್ದಾನೆ.  

ನಿದ್ರೆಯಲ್ಲಿದ್ದ ವೃದ್ಧ ದಂಪತಿಗಳು ಗಾಬರಿಯಾಗಿ ಎಚ್ಚೆತ್ತುಕೊಂಡು ಕಿಟಕಿಯಿಂದ  ಯಾರು ಎಂದು ಕೇಳಿದ್ದು  ಅದಕ್ಕೆ ಸಲೀಂ ಅವಚ್ಯಾ  ಶಬ್ದಗಳಿಂದ ಬೈದು ಕರಿಯೋ ಪೊಲೀಸ್ ನವರಿಗೆ ಎಂದು ಚಾಕು ತೋರಿಸಿ ಇದೇ ಚಾಕುವಿನಿಂದ ಕೊಲೆ ಮಾಡುತ್ತೇನೆಂದು ಗದರಿಸಿದ್ದಾನೆ. 

ಶಿವಮೊಗ್ಗ ವಾಸಿ ಖಾಜಿ ಇಮ್ಮಿಯಾಜ್ ರವರ ದಾವೆಗೂ ಸಲೀಂ ಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಸಹ ದೂರು ನೀಡಲಾಗಿದೆ.  ದಾವೆಯನ್ನು ವಾಪಸ್ಸು ತೆಗೆದುಕೊಳ್ಳೋ ಅಥವಾ ಆ ನಿವೇಶನ ನನ್ನ ಹೆಸರಿಗೆ ಬರೆದು ಕೊಡು ಎಂದು ಚಾಕು ತೋರಿಸಿದ್ದಾನೆ. ಇಲ್ಲವಾದಲ್ಲಿ ಇವತ್ತು ಇದೇ ಚಾಕುವಿನಿಂದ ಗಂಡ ಹೆಂಡತಿ ಇಬ್ಬರ ಕೊಲೆಯನ್ನು ಮಾಡುತ್ತೇನೆ ಗದರಿಸಿದ್ದಾನೆ. 


ಗಲಾಟೆ ಶಬ್ದ ಕೇಳಿ ಅಕ್ಕ ಪಕ್ಕದಲ್ಲಿರುವ ನೆರೆ ಹೊರೆಯುವರು ಹೊರಗೆ ಬಂದು ಅಬ್ದುಲ್ ಸಲಿಂ ರವರಿಗೆ  ಯಾಕಪ್ಪ ಕೂಗಾಡುತ್ತಿದ್ದೀಯ ಯಾಕೆ ಬೈಯುತ್ತಿದ್ದೀಯಾ ಯಾಕೆ ಬಾಗಿಲು ಹೊಡೆಯುತ್ತಿದ್ದೀಯ ಯಾಕೆ ಕಾರಿನ ಗಾಜು ಹೊಡೆದಿದ್ದೀಯಾ ಎಂದು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಕರೇಸುತ್ತೇವೆ ಎಂದು ಸಾರ್ವಜನಿಕರು ಸೇರಿಕೊಂಡಾಗ ಅಲ್ಲಿನಿಂದ ಸಲೀಂ ಪರಾರಿಯಾಗಿದ್ದಾಬೆ.  

ವೃದ್ಧ ದಂಪತಿಗಳಿಗೆ ಅಕ್ಕ ಪಕ್ಕದವರು ಸಾಂತ್ವಾನ ಹೇಳಿ ಸಮಾಧಾನ ಪಡಿಸಿ ಮಕ್ಕಳನ್ನು ಕರೆದುಕೊಳ್ಳಲು ಹೇಳಿದ್ದಾರೆ.  ಹುಸೇನ್ ನವರು ಮಗಳಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ವಿಷಯ ತಿಳಿಸಿರುತ್ತಾರೆ.  ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ರಾತ್ರಿ 2:30 ಸಮಯದಲ್ಲಿ  ಮಗಳೊಂದಿಗೆ ಜಿಲ್ಲಾ ಮೇಗನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.‌

ನಾವು ಮನೆಯಲ್ಲಿ ವೃದ್ಧ ದಂಪತಿಗಳು ಒಂಟಿಯಾಗಿದ್ದೇವೆ, ಅಬ್ದುಲ್ ಸಲಿಂ ಪದೇ ಪದೇ ಕೊಲೆ ಬೆದರಿಕೆ ಹಾಕುತ್ತಿದ್ದಾನೆ, ಮುಂದಿನ ದಿನಗಳಲಿ ನಮಗೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಅಥವ ಆರ್ಥಿಕವಾಗಿ ಏನೇ ಹಾನಿಯಾದರೂ ಅಬ್ದುಲ್ ಸಲಿಂ ಅವರೇ ಹೊಣೆಯಾಗಿದ್ದು ಆತನಿಂದ ಸೂಕ್ತ ರಕ್ಷಣೆ ನೀಡಬೇಕು. ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close