ಸೊರಬ ಕ್ಷೇತ್ರದ ಅಭಿವೃದ್ಧಿ ಶೂನ್ಯ-ಸಚಿವರ ವಿರುದ್ಧ ಕುಮಾರ್ ಬಂಗಾರಪ್ಪ ವಾಗ್ದಾಳಿ



ಸುದ್ದಿಲೈವ್/ಸೊರಬ


ಈಗಿನ ಶಾಸಕರ ಆಡಳಿತ ವೈಫಲ್ಯದಿಂದ, ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಮ್ಮ ಸಹೋದರನ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.


ಶನಿವಾರ ಬಿಜೆಪಿ ಕಚೇರಿ ಸೊರಬದಲ್ಲಿ ಸೆಪ್ಟೆಂಬರ್ 2 ರಿಂದ ಆರಂಭವಾಗುವ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು



ಕ್ಷೇತ್ರದಲ್ಲಿ ಶಾಸಕರು ಹೊಸದಾಗಿ ಯಾವ ಹೊಸ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯವನ್ನ ಬೇರೆಯವರ ಹೆಸರಿನಲ್ಲಿ ಬದಲಾಯಿಸಿ ಅದೇ ಕೆಲಸ ಮಾಡ್ತಾ ಇದ್ದಾರೆ. ಯಾವ ಉದ್ಘಾಟನೆ ಕಾರ್ಯ ಮಾಡುತ್ತಿಲ್ಲವೆಂದು ಆರೋಪಿಸಿದರು. 


ಸಚಿವರು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿರುವುದಾಗಿ ವಾಗ್ದಾಳಿ ನಡೆಸಿರುವ ಕುಮಾರ ಬಂಗಾರಪ್ಪ, ಬಗುರ್ ಹುಕುಂ ಸಾಗುವಳಿ ಸುಧಾರಕ ಎಂದು ಹೇಳಿಕೊಂಡ ಕ್ಷೇತ್ರ ಶಾಸಕರು ಯಾವ ಸಮಿತಿಯ ಸಭೆ ಕರೆಯದೆ ಹೊಸ ಹಕ್ಕು ಪತ್ರ ನೀಡಿಲ್ಲ. 


ತಾಲೂಕಿಗೆ ಬಂದ ಅಧಿಕಾರಿಗಳು ಇವರ ಜೊತೆ ಕೈಜೋಡಿಸಿದ್ದಾರೆ. ಪಿಡಬ್ಲೂಡಿ ಇಲಾಖೆಯಲ್ಲಿ ಅಮಾನತ್ತುಗೊಂಡ ಅಧಿಕಾರಿಯನ್ನ ತಂದು ಕೂರಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಳೆ ಸೊರಬದಲ್ಲಿ ಎರಡು ಕೆರೆ ಏರಿಗೆ ರಸ್ತೆಗೆ ಲೈಟ್ ಕಂಬಕ್ಕೆ ಕೋಟ್ಯಾಂತರ ರೂ. ಹಣ ತರಲಾಗಿತ್ತು. ಅದರಲ್ಲಿ ಒಂದು ಕೆರೆ ಏರಿ ನಿರ್ಮಿಸಿ ಇನ್ನೊಂದು ಕೆರೆ ನಿರ್ಮಾಣದ ಹಣವನ್ನ ಗುಳುಂ ಮಾಡಲಾಗಿದೆ.


ಕೆರೆ ಏರಿ ನಡುವೆ ರಸ್ತೆ ನಿರ್ಮಿಸಿ ಲೈಟ್ ಕಂಬ ತರಲಾಗಿತ್ತು. ಲೈಟ್ ಕಂಬಗಳು ಎಲ್ಲಿವೆ ಎಂದು ಹುಡುಕಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಂಸದ ರಾಘವೇಂದ್ರರವರ ಗೆಲುವಿನ ನಂತರ ಸಹೋದರ ಮತ್ತು ಅಕ್ಕ, ಭಾವನ ವಿರುದ್ಧ ವಾಗ್ದಾಳಿ ನಡೆಸಿದ್ದ ಕುಮಾರ್ ಬಂಗಾರಪ್ಪ ಮತ್ತೊಮ್ಮೆ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಸಹೋದರನ ವಿರುದ್ಧ ಗುಡುಗಿದ್ದಾರೆ. ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನ  ಹರಿಬಿಟ್ಟಿದ್ದಾರೆ.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close