ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿಯ ಪ್ರತಿಷ್ಠಾಪನೆ ನೆರವೇರಲಿದೆ. ವೀರ ಸಾವರ್ಕರ್ ಹಿಂದೂ ಸಂಘಟನೆ ಮಹಾಮಂಡಳಿಯ 80 ವರ್ಷದ ಗಣೇಶೋತ್ಸವ ನಡೆಯಲಿದೆ.
ನಾಳೆಯಿಂದ ಸೆ.17 ರ ವರೆಗೆ ವಿಜೃಂಭಣೆಯಾಗಿ ಹಬ್ಬ ನಡೆಯಲಿದೆ. ಕ್ರೋಧಿನಾಮ ಸಂತ್ಸರದ ಭಾದ್ರಪದ ಶುದ್ಧ ಚತುರ್ಥಿಯದಿನವಾದ ನಾಳೆ 11-30 ಕ್ಕೆ ಕುಂಬಾರಗುಂಡಿಯಿಂದ ಗಣಪತಿಯನ್ನ ಸರಳವಾದ ಮೆರವಣಿಗೆಯಲ್ಲಿ ತಂದು ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು.
ಕಳೆದ ವರ್ಷದ ಹಿಂದೂ ಮಹಾಸಭಾ ಗಣಪ |
ಮನೋರಂಜನಾ ಕಾರ್ಯಕ್ರಮಗಳು ಸೆ.8 ರಿಂದ ನಡೆಯಲಿದೆ. ಪ್ರತಿಸಂಜೆ 7 ಗಂಟೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಮೊದಲನೇ ದಿನವಾದ ಸೆ.8 ರಂದು ನೀಲಾವರದ ಯಕ್ಷ ಸಮಹ ಹಾಗೂ ಯಕ್ಷ ಕಲಾಪ್ರತಿಷ್ಠಾನ ಇವರಿಂದ ಪೌರಾಣಿಕ ಪ್ರಸಂಗದ ಯಕ್ಷಗಾನ,
ಸೆ.9 ರಂದು ಶಿವಮೊಗ್ಗದ ದೀಪಿಕಾ ಶ್ರೀಕಾಂತ್ ಮತ್ತು ತಂಡದವರಿಂದ ಸುಗಮ ಸಂಗೀತ, ಸೆ.10 ರಂದು ಶಿವಮೊಗ್ಗ ಸಹೋದರಿಯರಾದ ಕು.ಸೃಷ್ಠಿ ಎಸ್ ವರ್ಮ ಮತ್ತು ಕು.ಸ್ಪೂರ್ತಿವೆಸ್ ವರ್ಮರವರಿಂದ ಸುಗಮ ಸಂಗೀತ, ಸುಗಮ ಸಂಗೀತದ ನಂತರ ರಾತ್ರಿ 8-30 ಕ್ಕೆ ನನನ... ನಮ್ ರಸ್ತೆಯ ಕುರಿತು ಹಾಸ್ಯನಾಟಕ ನಡೆಯಲಿದೆ.
ಶಿವಮೊಗ್ಗದ ಯಕ್ಷ ಸಂವರ್ಧನಾ ಸಭಾದವರಿಂದ ಸೆ.11 ರಂದು ಮೂಲಾಸುರ ವಧೆ ಯಕ್ಷಗಾನ, ಹಾವೇರಿಯ ಶಾರ್ವರೀಶ ನಾಟ್ಯ ಕೇಂದ್ರದ ವಿಧೂಷಿ ಶೃತಿ ಜೋಷಿ ಅವರಿಂದ ಸೆ.12 ರಂದು, ಭರತನಾಟ್ಯ, ಕೇಡಲಸರದ ಶ್ರೀ ಮಹಾಗಣಪತಿ ವೀರಾಂಜನೇಯ ಕಲಾಪ್ರತಿಷ್ಠಾನದ ವತಿಯಿಂದ ಸೆ.13 ರಂದು ಶ್ರೀರಾಮ ದರ್ಶನ ಯಕ್ಷಗಾನ,
ಸೆ.14 ರಂದು ಮುರುಳಿ ಸಾಂಸ್ಕೃತಿಕ ಕಲಾಸಂಘದ ಹೊಸೂರು ಕೆ.ರಾಜ್ ಕುಮಾರ್ ಮತ್ತು ಕೆ.ಎಸ್.ದಾಕ್ಷಯಿಣಿ ರಾಜ್ ಕುಮಾರ್ ಅವರಿಂದ ನಾದಲೀಲೆ, ಸೆ.15 ರಂದು ಧಾರೇಶ್ವರ ಶ್ರೀ ಸಿದ್ದವಿನಾಯಕ ಯಕ್ಷಗಾನ ನಾಟ್ಯ ಸಂಘದ ವತಿಯಿಂದ ಶ್ರೀಕೃಷ್ಣ ಪಾರಿಜಾತ ಯಕ್ಷಗಾನ ನಡೆಯಲಿದೆ.
ಸೆ.16 ರಂದು ಗಣಪತಿಯ ಮಹಾನಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದ್ದು ಇದಕ್ಕೂ ಮುಂಚೆ ವೀರ ಶಿವಮೂರ್ತಿಯ ಪುಣ್ಯ ಸ್ಮರಣೆ ನಡೆಯಲಿದೆ. ಸೆ.17 ರಂದು 1945 ರಿಂದ ಹಿಂದೂ ಮಹಾಸಂಘಟನಾ ಮಹಾಮಂಡಳಿಯ ವತಿಯಿಂದ ಶಿವಮೊಗ್ಗದಲ್ಲಿ 80ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಅದ್ಧೂರಿಯಾಗಿ ನಡೆಸಲು ಕಾರ್ಯಕಾರಿ ಮಂಡಳಿ ತೀರ್ಮಾನಿಸಿದೆ. ಹಿಂದೂ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಕೋರಲಾಗಿದೆ.