ಸುದ್ದಿಲೈವ್/ಶಿವಮೊಗ್ಗ
ನಗರದ ಪ್ರಮುಖ ಓಸಿ ಬಿಡ್ಡರ್‌ಗಳನ್ನ ಗಡಿಪಾರಿಗೆ ಪೊಲೀಸ್ ಇಲಾಖೆ ಉಪವಿಭಾಗಾಧಿಕಾರಿ (ಎಸಿ) ಸತ್ಯನಾರಾಯಣ ಅವರಿಗೆ ಪಸ್ತಾವನೆ ಸಲ್ಲಿಸಿದ್ದು ಏಳು ಜನರ ಗಡಿಪಾರಿಗೆ ಸಿದ್ದತೆ ನಡೆದಿದೆ.
ಏಸಿ ಆದೇಶವೇನಾದರೂ ಈ ಕಡತಕ್ಕೆ ಮೊಹರು ಬಿದ್ದರೆ, 7 ಜನ ಓಸಿ ಬಿಡ್ಡರ್‌ಗಳು ಗಡಿಪಾರಾಗಲಿದ್ದಾರೆ. ಈಗಾಗಲೇ 53 ಜನ ಕಾನೂನು ಬಾಹಿರ ಚಟುವಟಿಕೆಯಲ್ಲಿದ್ದವರು ಗಡಿಪಾರಾಗಿದ್ದಾರೆ.
53 ಜನ ಹೊರತು ಪಡಿಸಿ 7 ಜನ ಬಿಡ್ಡರ್‌ಗಳ ಗಡಿಪಾರಿಗೆ ಪತ್ರ ಬರೆಯಲಾಗಿದೆ. ದೊಡ್ಡಪೇಟೆ ಪೊಲೀಸರಿಂದ ಶಿಫಾರಸ್ಸಾಗಿರುವ ಶನ್ನು, ಅಮ್ಜದ್ ಹಾಗೂ ನದೀಮ್‌ರ ಹೇಸರು ಗಡಿಪಾರು ಪಟ್ಟಿಯಲ್ಲಿ ಕೇಳಿಬಂದಿದೆ. ದೊಡ್ಡಪೇಟೆ ಪೊಲೀಸರು ಈ ಮೂವರ ಹೆಸರನ್ನ ಡಿವೈಎಸ್ಪಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಡಿವೈಎಸ್ಪಿಯವರು ಶಿವಮೊಗ್ಗ ಏಸಿಗೆ ಈ ಮೂವರ ಹೆಸರನ್ನ ಶಿಫಾರಸು ಮಾಡಿದ್ದಾರೆ. ಎಸಿ ಸತ್ಯನಾರಾಯಣ್ ಅವರ ಟೇಬಲ್ ಮೇಲೆ ಏಳು ಜನರ ಗಡಿಪಾರಿಗೆ ಕುಳಿತಿದೆ. ವಿಚಾರಣೆ ಹಾಗೂ ಮೊದಲಾದ ಕಾರ್ಯಾಚರಣೆ ನಂತರ ಗಡಿಪಾರು ಮಾಡಲಾಗುತ್ತದೆ. ಗಡಿಪಾರಿಗೆ ಮೂವರ ಕಾನೂನು ಬಾಹಿರ ಚಟುವಟಿಕೆ ಎಂದು ಹೇಳಲಾದರೂ ಈ ಮೂವರ ಗಡಿಪಾರಿನ ಹಿಂದೆ ಬಹಳ ಆಸಕ್ತಕರ ಸ್ಟೋರಿಯೇ ಅಡಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನದೀಮ್, ಅಮ್ಜದ್ ಮತ್ತು ರಫೀಕ್ ಯಾನೆ ಶನ್ನು ಮೂವರ ವಿರುದ್ಧ ಕೇವಲ ಓಸಿ ನಡೆಸುತ್ತಿರುವ ಆರೋಪ ಮಾತ್ರವಲ್ಲ. ಅಪರಾಧ ಪ್ರಕರಣಗಳಲ್ಲೂ ಇವರು ಭಾಗಿಯಾಗಿರುವುದರಿಂದ ಈ ಮೂವರನ್ನ ಗಡಿಪಾರು ಮಾಡಲಾಗುತ್ತಿದೆ. ಪಟ್ಟಿಯಲ್ಲಿ ಬಿಡ್ಡರ್ ಸಂದೀಪನ ಹೆಸರು ಸಹ ಇದೆ ಎಂಬ ಮಾಹಿತಿ ಕೇಳಿ ಬಂದಿದೆ.
ಇತ್ತೀಚೆಗೆ ರಂಜಾನ್ ಹಬ್ಬದ ವೇಳೆ ಸೆನ್ ಠಾಣೆಯ ಎಎಸ್ಐನ್ನ ಲೋಕಾಯುಕ್ತರು ಹಿಡಿದಿದ್ದರು. ದೂರುದಾರರು ಸಹ ಈ ಮೂವರು ಓಸಿ ಬಿಡ್ಡರ್‌ಗಳಲ್ಲಿ ಒಬ್ಬರಾಗಿದ್ದರು. ಈ ವಿಚಾರದಲ್ಲಿ ಕೆಲ ವಿಷಯಗಳ ಹೊರಗೆ ಬಂದಿದ್ದವು. ಈ ವಿಚಾರದಲ್ಲಿಯೂ ಮೂವರನ್ನ ಗಡಿಪಾರು ಮಾಡಲು ಪ್ರಮುಖ ಅಂಶ ಎಂದು ಹೇಳಲಾಗುತ್ತಿದೆ. ಇಲಾಖೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಗಡಿಪಾರು ಶಿಫಾರಸು ದಿನನಿತ್ಯದ ಕಾರ್ಯ ಎಂದು ಹೇಳುತ್ತಿದೆ.
ಅದರಂತೆ ಇತರೆ ನಾಲ್ವರೂ ಓಸಿ ಬಿಡ್ಡರ್ ಗಳು ಸಹ ಗಡಿಪಾರಿಗೆ ಸೇರ್ಪಡೆಯಾಗಿದ್ದಾರೆ. ಓಸಿ ಬಿಡ್ಡಿಂಗ್ ಜೊತೆ ಇವರೆಲ್ಲ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದರಿಂದ ಗಡಿಪಾರಿಗೆ ಶಿಫಾರಸ್ಸಾಗಿದೆ. ಶನ್ನು ಬಳ್ಳಾರಿ ಜಿಲ‌್ಲೆಗೆ, ಅಮ್ಜದ್ ಬೆಳಗಾವಿ ಜಿಲ್ಲೆಗೆ ಹಾಗೂ ನದೀಮ್‌ನ್ನ ಹಾಸನ್ ಜಿಲ್ಲೆಗೆ ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗಿದೆ. ಇವರಿಗೆ 6 ತಿಂಗಳವರೆಗೆ ಗಡಿಪಾರು ಮಾಡಲು ಶಿಫಾರಸ್ಸಾಗಿದೆ. ಎನ್ನಲಾಗುತ್ತಿದೆ.
ಈ ವಿಚಾರದಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿಕೆ ಉತ್ತಮ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಈ ಮೂವರು ಓಸಿ ಬಿಡ್ಡರ್‌ಗಳು ಕೇವಲ ಓಸಿ ನಡೆಸಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇವರು ಅಪರಾಧ ಚಟುವಟಿಕೆಯಲ್ಲಿದ್ದು ಗಾಂಜಾ ಪೆಡ್ಲರ್ ಗಳಿಗೆ ಸಪೋರ್ಟ್ ಆಗಿದ್ದರು ಎಂಬ ಮಾಹಿತಿ ಕೇಳಿ ಬಂದಿದೆ. ಇಲಾಖೆಯ ಗಡಿಪಾರು ಶಿಫಾರಸ್ಸನ್ನ ಏಸಿಯವರು ಮನ್ನಣೆ ಮಾಡಿ ಕ್ರಿಮನಲ್‌ಗೆ ಗಡಿಪಾರಾಗುವಂತೆ ಮಾಡಬೇಕಿದೆ.
ಸಂದೀಪ ಎಲ್ಲಿದ್ದಾನೆ?
ಪ್ರತ್ಯುತ್ತರಅಳಿಸಿಸಂದೀಪ ಎಲ್ಲಿದ್ದಾನೆ ಅವನೂ ಒಸಿ ಬೇಡರ್
ಪ್ರತ್ಯುತ್ತರಅಳಿಸಿಮತ್ತು ಪ್ರಕಾಶ್ ಬೇಡರ್ ಅವರು ಎಲ್ಲಿದ್ದಾರೆ
ಪ್ರತ್ಯುತ್ತರಅಳಿಸಿ