ಸೋಮವಾರ, ಸೆಪ್ಟೆಂಬರ್ 2, 2024

ಭದ್ರಾವತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್ ಹಾಕಿ-7 ದಿನಗಳಕಾಲ ಗಡುವು ನೀಡಿದ ಭದ್ರಾವತಿ ಹಿತರಕ್ಷಣ ವೇದಿಕೆ




ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ತಾಲೂಕಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಸಂಪೂರ್ಣ ಮಟ್ಟ ಹಾಕಲು 7 ದಿನಗಳ ಗಡುವು ನೀಡಿದ ಭದ್ರಾವತಿ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು.


 ಈ ದಿನ ಬೆಳಗ್ಗೆ ಭದ್ರಾವತಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಕಾರ್ಯಕರ್ತರು ಕೈಗಳಿಗೆ ಕಂಕಣವನ್ನು ಕಟ್ಟಿ ಭದ್ರಾವತಿ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸುವ ಪಣತೊಟ್ಟಿದ್ದಾರೆ. 


ಅಲ್ಲದೆ ಮುಂದುವರೆದು ಈ ದಿನ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳಿಗೂ ಆಗ್ರಹ ಪತ್ರವನ್ನು ನೀಡಿ,  ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಉಕ್ಕಿನ ನಗರಿ ಎಂದು ಪ್ರಸಿದ್ದಿ ಯಾಗಿದ್ದ ಭದ್ರಾವತಿ ನಗರವು ಅಕ್ರಮ ಕಾನೂನುಬಾಹಿರ ಚಟುವಟಿಕೆಗಾರರ ಅಡಗು ತಾಣವಾಗಿದೆ. ಭದ್ರಾವತಿ ಮತ್ತು ಸುತ್ತಮುತ್ತಲಿನ ಭದ್ರಾವತಿ ತಾಲೂಕಿಗೆ ಸಂಬಂಧಪಟ್ಟ ಹಳ್ಳಿಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ದಿನನಿತ್ಯದ ಬಳಕೆಯ ಹಾಲು ತರಕಾರಿ ಕೈಗೆಟುಕುವಂತೆ, ಓಸಿ ಮಟ್ಕಾ ಬರೆಯುವವರು ಸಹ ಸಿಗುತ್ತಿದ್ದಾರೆ. ಎಂದರೆ ಎಷ್ಟು ಬಿಗಿ ಕಾನೂನಿನ ವ್ಯವಸ್ಥೆ ಭದ್ರಾವತಿಯಲ್ಲಿ ಇದೆ ಎಂದು ವೇದಿಕೆ ಆರೋಪಿಸದೆ.  



ಭದ್ರಾವತಿಯ ಬಹುತೇಕ ಕಡೆಗಳಲ್ಲಿ ಇಸ್ಪೀಟ್ ದಂಧೆಯು ಜೋರಾಗಿ ನಡೆಯುತ್ತಿದೆ. ನಂಜಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ, ಉಬ್ರಾಣಿ ರಸ್ತೆಯ ಅರಣ್ಯ ಭಾಗದಲ್ಲಿ, ದಾನವಾಡಿ ಮತ್ತು ಕಲ್ಲಾಪುರ ಭಾಗಕ್ಕೆ ಸೇರಿದ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮತ್ತು ಮುಂತಾದ ಸ್ಥಳಗಳಲ್ಲಿ ಇಸ್ಪೀಟ್ ದಂಧೆಯು ನಡೆಯುತ್ತಿದ್ದು. ಕೆಲವು ಅಧಿಕಾರಿಗಳು ಇಸ್ಪೀಟ್ ದಂಧೆ ನಿಂತಿದೆ ಎಂದು ಹೇಳಿದರು ಸಹ ನೆಪ ಮಾತ್ರಕ್ಕೆ ಹೇಳಿಕೆಯಾಗಿದೆ ಹೊರತು ಭದ್ರಾವತಿಯಲ್ಲಿ ಇಸ್ಪೀಟ್ ದಂಧೆ ನಿಲ್ಲುತ್ತಿಲ್ಲ. 


ಬೇರೆ ಬೇರೆ ಜಿಲ್ಲೆಗಳಿಂದ ಬಂದು ಭದ್ರಾವತಿಯ ಅರಣ್ಯ ಭಾಗಗಳಲ್ಲಿ ಇಸ್ಪೀಟ್ ಆಡುವ ಮಟ್ಟಿಗೆ ಭದ್ರಾವತಿಯಲ್ಲಿ ಇಸ್ಪೀಟ್ ದಂದೆ ಬೆಳೆದು ನಿಂತಿದೆ. ಇಸ್ಪೀಟ್ ದಂಧೆಯಲ್ಲಿ ಸಾಲ ಮಾಡಿಕೊಂಡು ಜೀವವನ್ನು ಕಂಠಿ ಎಂಬ ವ್ಯಕ್ತಿ ಕಳೆದುಕೊಂಡಿರುವ ಪ್ರಕರಣವು ಸಹ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಲವಾರು ಯುವಕರು ಆನ್ಸೆನ್ ಗೇಮ್ನಲ್ಲಿ ಹಣ ಕಳೆದುಕೊಂಡು ಬದುಕನ್ನು ತೊರೆಯುವ ಮಟ್ಟಿಗೆ ಪರಿಸ್ಥಿತಿ ಎದ್ದು ನಿಂತಿದೆ. 


ಭದ್ರಾವತಿಯಲ್ಲಿ ಗಾಂಜಾ ದಂಧೆಯೂ ಸಹ ಹೇರಳವಾಗಿ ನಡೆಯುತ್ತಿದ್ದು. ಬಹುತೇಕ ಯುವಕರು ಗಾಂಜಾ ಸೇವನೆಗೆ ತುತ್ತಾಗಿದ್ದಾರೆ. ಹಲವಾರು ಪ್ರಕರಣಗಳು ದಾಖಲಾದರೂ ಸಹ ಗಾಂಜಾ ಸೇದುವ ಯುವಕರ ಗುಂಪು ಕಡಿಮೆ ಆಗಿಲ್ಲ. ವಾರದ ಬಡ್ಡಿಗೆ ಹಣವನ್ನು ಪಡೆದು ಜೂಜಾಟಕ್ಕೆ ಯುವಕರು ಮುಗಿಬಿದ್ದು ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. 


ಸದರಿ ವಿಚಾರಗಳಂತೆ ಭದ್ರಾವತಿಯ ಯುವ ಪೀಳಿಗೆಯು ಬಹುತೇಕ ದಾರಿ ತಪ್ಪುತಿದ್ದು. ಯುವಕನರನ್ನು ಹೆತ್ತ ತಂದೆ ತಾಯಿಯಂದಿರ ಜೀವನ ಚಿಂತಾ ಜನಕವಾಗಿದೆ. ಈ ಕೂಡಲೇ ತಾವುಗಳು ಗಮನ ಹರಿಸಿ ಸಂಬಂಧ ಪಟ್ಟ ಇಲಾಖೆಗೆ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಭದ್ರಾವತಿ ತಾಲೂಕಿನಲ್ಲಿ ಸಂಪೂರ್ಣ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ನಿಲ್ಲಿಸಲು ಮುಂದಾಗ ಬೇಕೆಂದು ತಮ್ಮಲ್ಲಿ ವೇದಿಕೆ ಎಸ್ಪಿ ಮತ್ತು ಡಿಸಿಗೆ ನೀಡಿದ ಮನವಿಯಲ್ಲಿ ವಿನಂತಿಸಲಾಗಿದೆ.‌ 


ಮುಂದಿನ ಏಳು ದಿನಗಳಲ್ಲಿ ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ನಿಲ್ಲದೆ ಹೋದರೆ ಮುಂದಿನ ಪೀಳಿಗೆಗೆ ಸುಭದ್ರ ಭದ್ರಾವತಿಯನ್ನು ನೀಡುವ ನಿಟ್ಟಿನಲ್ಲಿ ಭದ್ರಾವತಿ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರೆ ಅಕ್ರಮ ಚಟುವಟಿಕೆಗಳು ನಡೆಯುವ ಸ್ಥಳ ದಲ್ಲೇ ನಿಂತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಾನೂನಾತ್ಮಕವಾಗಿ ಸಂಬಂಧಪಟ್ಟ ಇಲಾಖೆಯವರನ್ನು ಸ್ಥಳಕ್ಕೆ ಕಲರೆಸಿ ಹೋರಾಟ ನಡೆಸಲಾಗುತ್ತದೆ ಎಂದು ಆಗ್ರಹಿಸಲಾಗಿದೆ.


 ಇದೇ ಸಮಯದಲ್ಲಿ ಭದ್ರಾವತಿ ಹಿತ ರಕ್ಷಣ ವೇದಿಕೆ ಅಧ್ಯಕ್ಷರಾದ ಯೇಸುಕುಮಾರ್  ಮತ್ತು ಉಪಾಧ್ಯಕ್ಷರಾದ ತೀರ್ಥೇಶ್, ಭರತ್ ಕುಮಾರ್,  ಸಾಮಾಜಿಕ ಹೋರಾಟಗಾರರಾದ ದೇವರಾಜ್ ಅರಳಿಹಳ್ಳಿ, ಪ್ರಸನ್ನ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ