ಪ್ರಜಾಪ್ರಭುತ್ವ ದಿನದ ಅಂಗವಾಗಿ ಶಿವಮೊಗ್ಗದಲ್ಲಿ 60 ಕಿಮಿ ಮಾನವ ಸರಪಳಿ



ಸುದ್ದಿಲೈವ್/ಶಿವಮೊಗ್ಗ


ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಙಗವಾಗಿ ಇಂದು ಸರ್ಕಾರದ ವತಿಯಿಂದ ನಡೆಯುತ್ತಿರುವ 650 ಕಿಮೀ ದೂರದ ಮಾನವ ಸರಪಳಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ಕಿಮೀ ಮಾನವ ಸರಪಳಿ ರಚಿಸಲಾಗುತ್ತಿದೆ. 


ಅದರ ಅಂಗವಾಗಿ ಶಿವಮೊಗ್ಗದ ಡಿಸಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪನವರಿಂದ  ಉದ್ಘಾಟಿಸಿದರು. ಭದ್ರಾವತಿಯ ಕಾರೇಹಳ್ಳಿಯಿಂದ ಶಿವಮೊಗ್ಗದ ಮಡಿಕೆ ಚೀಲೂರಿನ ವರೆಗೆ ಮಾನವ ಸರಪಳಿ ರಚಿಸಲಾಗಿತ್ತು. 


ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲಾದ ಇಲಾಖೆಯ ಅಡಿಯಲ್ಲಿ ನಡೆದ ಮಾನವ ಸರಪಳಿಯ ಕಾರ್ಯಕ್ರಮದಲ್ಲಿ ಮೊದಲಿಗೆ ನಾಡಗೀತೆ ಹಾಡಲಾಯಿತು. ಸಂವಿಧಾನ ಪ್ರಸ್ತಾವನೆ ಓದಲಾಯಿತು.‌ನಂತರ ಮಾನವ ಸರಪಳಿ ನಡೆಸಲಾಯಿತು. ಈ ವೇಳೆ ಕೈಗಳನ್ನ ಎತ್ತಿ ಜೈಹಿಂದ್ ಜೈ ಕರ್ನಾಟಕ ಎಂದು ಘೋಷಿಸಲಾಯಿತು. 


ಕಾರೇಹಳ್ಳಿಯಿಂದ, ಕೆಂಪೇಗೌಡ ನಗರ, ಬಾರಂದೂರು, ಮೊಸರಹಳ್ಳಿ, ಸುಣ್ಣದಹಳ್ಳಿ, ಮಾರುತಿ ನಗರ, ಭದ್ರಾವತಿ ಬಸ್ ನಿಲ್ದಾಣ, ಹುತ್ತಾಕಾಲೋನಿ, ಐಟಿಐ ಸ್ಟಾಫ್, ಕಡದಕಟ್ಟೆ, 



ಬಿಳಕಿ ಕ್ರಾಸ್, ಜೇಡಿಕಟ್ಟೆ, ಮಾಚೇನಹಳ್ಳಿ, ಡೈರಿ, ಮಲೆನಾಡು ಕ್ಯಾನ್ಸರ್ ಆಸ್ಪತ್ರೆ, ನಿಧಿಗೆ, ಮಲವಗೊಪ್ಪ, ಹರಿಗೆ, ಎಂಆರ್‌ಎಸ್ ಸರ್ಕಲ್, ತುಂಗಾಸೇತುವೆ, ಹೊಳೆಬಸ್ ಸ್ಟಾಪ್, ಕರ್ನಾಟಕ ಸಂಘ, 



ವೀರಮದಕರಿ ವೃತ್ತ, ಎಎ ವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ಮಹಾವೀರ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕೆಇಬಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗೋಂದಿ ಚಟ್ನಹಳ್ಳಿ, ಮೇಲಿನ ಹನಸವಾಡಿ, ಬೇಡರ ಹೊಸಳ್ಳಿ, ಬುಳ್ಳಾಪುರ, ಸೂಗೂರು, ಹೊಳಲೂರು, ಮಡಿಕೆಚೀಲೂರು ತಲುಪಲಿದೆ. ಈ ವೇಳೆ 85 ಸಾವಿರದಿಂದ-1 ಲಕ್ಷ ಜನ ಭಾಗಿಯಾಗಿದ್ದರು. 


ಈ ವೇಳೆ ಮಾತನಾಡಿದ ಸಚಿವ ಮಧುಬಂಗಾರಪ್ಪ ಒಂದೇ ತಾಯಿಯ ಮಕ್ಕಳಂತೆ ಬದುಕಲು ಸಂವಿಧಾನದಲ್ಲಿ ಬರೆಯಲಾಗಿದೆ. ಇಂದು ಇತಿಹಾಸ ಪುಟಕ್ಕೆ ಸೇರುತ್ತೇವೆ.  ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟವನ್ನ ಶಾಶ್ವತವಾಗಿರಿಸೋಣ. ಮಕ್ಕಳು ಸಂವಿಧಾನ ಪೀಠಿಕೆ ಬಾಯಲ್ಲಿರುವುದು ಸಂತೋಷದ ವಿಷಯವಾಗಿದೆ ಎಂದರು. ರಾಷ್ಟ್ರಗೀತೆಯೊಂದಿಗೆ ಕಾರಗಯಕ್ರಮ ಮುಕ್ತಾಯಗೊಂಡಿತು.


ಮಕ್ಕಳಿಗೆ ಸೀಮಿತವಾದ ಪ್ರಜಾಪ್ರಭುತ್ವ ದಿನಾಚರಣೆ


ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ಮಕ್ಕಳು ಮಾತ್ರ ಕಾಣಿಸುವಂತೆ ಈ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳನ್ನೇ ಬಳಸಿಕೊಳ್ಳಲಾಗಿದೆ. ಶಿಕ್ಷಕರನ್ನ, ಸಂಘ ಸಂಸ್ಥೆಯ ಹೊರತು ಪಡಿಸಿ ಬೆರಳೆಣಿಕೆಯಷ್ಟು ಸರ್ಕಾರಿ ಸಿಬ್ವಂದಿಗಳು ಮಕ್ಕಳಿಗಿಂತ ಕಡಿಮೆ ಸಂಖ್ಯೆಯಲ್ಲಿ ಭಾಗಿಯಾಗಿರುವುದು ದುರದೃಷ್ಟಕರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು