ಸುದ್ದಿಲೈವ್/ಶಿವಮೊಗ್ಗ
ನಗರದ ಐತಿಹಾಸಿಕ ಗಣಪತಿಯನ್ನ ಇಂದು ಬೆಳಗ್ಗಿನ ಜಾವ 4-15 ಕ್ಕೆ ಸುಮಾರಿಗೆ ತುಂಗ ನದಿಯಲ್ಲಿ ವಿಸರ್ಜಿಸಲಾಗಿದೆ. 'ಹೋಗ್ತಾನಪ್ಪ ಹೋಗ್ತಾನೆ ಗಣೇಶ ಹೋಗ್ತಾನೆ, ಜೈ ಶ್ರೀರಾಮ್' ಘೋಷಣೆಯೊಂದಿಗೆ ಹಿಂದೂ ಮಹಾಸಭಾ ಗಣಪತಿಯನ್ನ ಭೀಮನ ಮಡುವಿನಲ್ಲಿ (ಕೋಟೆ ಭೀಮೇಶ್ವರ ದೇವಸ್ಥಾನದ ಹಿಂಬಾಗದ ನದಿಯಲ್ಲಿ) ವರ್ಜಿಸಲಾಗಿದೆ. ನಗರದೆಲ್ಲಡೆ ನಡೆದ ಗಣಪತಿಯ ವಿಸರ್ಜನ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ.
ಸೆ.17 ರಂದು ಬೆಳಿಗ್ಗೆ 11-10 ಕ್ಕೆ ಶಾಂತಿಯುತವಾಗಿ ಭೀಮೇಶ್ವರ ದೇವಸ್ಥಾನದಿಂದ ಹೊರಟ ರಾಜಬೀದಿ ಉತ್ಸವ ಮಧ್ಯಾಹ್ನ 3 ಗಂಟೆಗೆ ರಾಮಣ್ಣಶ್ರೇಷ್ಠಿ ಪಾರ್ಕ್ ತಲುಪಿದೆ. 5 ಗಂಟೆಗೆ ಬಜಾರ್‌ನ ಸುನ್ನಿ ಜಾನೀಯ ಮಸ್ಜಿದ್ ರಸ್ತೆ ದಾಟಿದ ಗಣಪ 7-40 ಕ್ಕೆ ಎಎ ವೃತ್ತ ದಾಟಿದೆ.
8-50 ಕ್ಕೆ ಗೋಪಿ ವೃತ್ತ ತಲುಪಿದರೂ ಸುಮಾರು 11ಗಂಟೆಗೆ ದುರ್ಗಿಗುಡಿ ರಸ್ತೆ ತಲುಪಿದೆ. ದುರ್ಗಿಗುಡಿ ರಸ್ತೆಯಲ್ಲಿ ಗಣಪತಿಗೆ ಸಂಘ ಸಂಸ್ಥೆಯಿಂದ ನೋಟಿನ ಹಾರ ಹಾಕಲಾಗಿದೆ. ನಂತರ ಸುಮಾರು 12 ಗಂಟೆಗೆ ಜೈಲ್ ರಸ್ತೆ ಸರ್ಕಲ್ ತಲುಪಿದೆ. ಇಲ್ಲಿ ಹೂವಿನ ಹಾರ ಡೊಳ್ಳು ಹುಲಿಕುಣಿತಗಳು ನಡೆದಿದೆ. ಕುವೆಂಪು ರಸ್ತೆಯ ಮೂಲಕ ಶಿವಮೂರ್ತಿ ವೃತ್ತದ ಕಡೆ ಸಾಗುವಾಗ ಮ್ಯಾಕ್ಸ್ ಆಸ್ಪತ್ರೆಯವರು ಹೂವಿನ ಮಾಲೆ ಮತ್ತು ಡೊಳ್ಳು ಕುಣಿತ ವಿಶೇಷವಾಗಿತ್ತು. ನಂಜಪ್ಪ ಆಸ್ಪತ್ರೆಯವತಿಯಿಂದಲೂ ಹಾರ ಹಾಕಲಾಯಿತು.
ಇಲ್ಲಿ ವೇದಿಕೆ ನಿರ್ಮಿಸಿ ಹುಲಿಕುಣಿತ ಹಾಗೂ ವಿವಿಧ ಭಂಗಿಯ ಹುಲಿಯ ಪ್ರದರ್ಶನ ಗಮನಸೆಳೆದಿದೆ. ನಂತರ ಜಿಪಂ ಹತ್ತಿತ ಚಂದ್ರಗಿರಿ ಹಾಸ್ಪಿಟಲ್ ಅವರಿಂದ ಹೂವಿನ ಮಾಲೆ ಹಾಕಲಾಯಿತು. ಇದಾದ ನಂತರ ಮೆರವಣಿಗೆ ಶಿವಮೂರ್ತಿ ವೃತ್ತ ತಲುಪಿದ್ದು ಬೆಳಿಗ್ಗಿನ ಜಾವ ಸುಮಾರು 2 ಗಂಟೆಗೆ. ಇಲ್ಲಿ ಮೆಟ್ರೋ ಹಾಸ್ಪಿಟಲ್ ಅವರಿಂದ ಹೂವಿನ ಹಾರ ಸಂಗೀತ ಕಾರ್ಯಕ್ರಮ ನಡೆದಿದೆ.
ಇಲ್ಲಿಂದ ಹೊರಟ ಗಣಪತಿ ಮೆರವಣಿಗೆ ಡಿಸಿ ಕಚೇರಿ ರಸ್ತೆ, ಮಹಾವೀರ ವೃತ್ತದ ಮೂಲಕ ಕಾನ್ವೆಂಟ್ ರಸ್ತೆಗೆ 3-15 ರ ಸುಮಾರಿಗೆ ತಲುಪಿ ಇಂದು ಬೆಳಗ್ಗಿನ ಜಾವ 4-15 ಕ್ಕೆ ಗಣಪತಿಯನ್ನ ಭೀಮನ ಮಡುವಿನ ತುಂಗ ನದಿಯಲ್ಲಿ ವಿಸರ್ಜಿಸಲಾಗಿದೆ. ಶಾಂತಿಯುತವಾಗಿ ಮತ್ತು ಜಾತ್ರೆಯ ವಾತವರಣಕ್ಕಿಂತಲೂ ಮಿಗಿಲಾಗಿ 80 ನೇ ವರ್ಷದ ಹಿಙದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಸಂಪನ್ನಗೊಂಡಿದೆ.