ಪಾಲಿಕೆ ಸದಸ್ಯರಿಂದ ಮೆಡಿಕಲ್ ಕ್ಲೈಮು--35 ಸದಸ್ಯರ ವಿರುದ್ಧ ಕಾನುನು ಹೋರಾಟಕ್ಕ ಆಪ್ ಸಜ್ಜು



ಸುದ್ದಿಲೈವ್/ಶಿವಮೊಗ್ಗ


ಮಹಾನಗರ ಪಾಲಿಕೆಯ ಹಿಂದಿನ ಸದಸ್ಯರು ಮೆಡಿಕಲ್ ಕ್ಲೈಮ್ ಮಾಡಿಕೊಂಡಿರುವುದು ಕಾನೂನು ಬಾಹಿರವಾಗಿದೆ ಕ್ಲೈಮ್ ಮಾಡಿಕೊಂಡ ಏಳು ಜನರಿಗೆ ಲೋಕಾಯುಕ್ತ ದೂರು ಸಲ್ಲಿಸಲಾಗದೆ 


ಸುದ್ದಿಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ಮನೋಹರ ಗೌಡ, ಪ್ರಭಾಕರ್ ಗೆ ಫೈಲ್ಸ್,  ಗನ್ನಿಗೆ ಕಣ್ಣು ಆಪರೇಷನ್ ಮಂಜುನಾಥ್ ಗೆ ಹಾರ್ಟ್ ಸರ್ಜರಿ ಎಂದು ಕ್ಲೈಮ್ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಲೋಕಾಯುಕ್ತರ ವರದಿಗೆ ಕಾಯಲಾಗುತ್ತಿದೆ. 


ಲೋಕಾಯುಕ್ತ ವರದಿ ತರೆಸಿಕೊಂಡು ನಂತರ ಇವರ ವಿರುದ್ಧ ಮೊಕದ್ದಮೆ ಹೂಡಲಾಗುತ್ತಿದೆ. 35 ಜನ ಸದಸ್ಯರಿಂದ ಭ್ರಷ್ಠಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ 1.70 ಲಕ್ಷ ರೂ. ಹಣ ಅವ್ಯವಹಾರ ನಡೆದಿದೆ. 


1.70 ಲಕ್ಷ ರೂ ಮೆಡಿಕಲ್ ಕ್ಲೈಮ್ ಗೆ ಸರ್ಕಾರದ ಅನುಮತಿ ಇಲ್ಲದಿದ್ದರೂ ಸದಸ್ಯರು ನಡಾವಳಿ ಪಾಸ್ ಮಾಡಿಕೊಂಡು ಹಣ ಪಡೆದಿದ್ದಾರೆ. ಆಯುಕ್ತರು ಆಡಿಟಿಂಗ್ ಗೆ ಸಮಸ್ಯೆ ಬಿದ್ದಲ್ಲಿ ಹಣ ವಸೂಲಿ‌ಮಾಡುವುದಾಗಿ ತಿಳಿಸಿದ್ದಾರೆ. ಕೆಲವರು ಇದರಲ್ಲಿ ಹಣ ವಾಪಾಸ್ ಮಾಡಿದ್ದಾರೆ. 


ಹಣ ವಾಪಾಸ್ ಮಾಡಿ ಒಳ್ಳೆಯವರೆಂದು ಬಿಂಬಿಸಿಕೊಳ್ಳುವ ಯತ್ನ ನಡೆಯುತ್ತಿದೆ. ಆದರೆ ಇದರ ವಿರುದ್ಧ ಆಮ್ ಆದ್ಮಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಲಾಗುತ್ತದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close