ಕುಲಾಂತರಿಯ ವಿರುದ್ಧ ಸೆ.26 ರಿಂದ ಅಭಿಯಾನ-ಕೆ.ಟಿ.ಗಂಗಾಧರ್



ಸುದ್ದಿಲೈವ್/ಶಿವಮೊಗ್ಗ

ಆಹಾರದಲ್ಲಿ ಕುಲಾಂತರಿಯನ್ನ ತರಬೇಕು ಎಂಬುದರ ಕುರಿತು ನಡೆದ ಷಡ್ಯಂತ್ರ್ಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು, ಈ ಬಗ್ಗೆ ಸೆ.26 ರಿಂದ ರಾಜ್ಯ ರೈತ ಸಂಘ ಬೀದಿಗಿಳಿದು ಕುಲಾಂತರಿ ತಳಿಗಳನಗನ್ನ ಉತ್ಪಾದಿಸುವುದರ ವಿರುದ್ಧ ಅಭಿಯಾನವನ್ನೇ ಆರಂಭಿಸುವುದಾಗಿ ರಾಜ್ಯ ರೈತ ಸಂಘದ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.   

ಅಂತರಾಷ್ಟ್ರೀಯ ಬಂಡವಳಶಾಹಿಗಳ ಹುನ್ನಾರದಿಂದ ದೇಶದಲ್ಲಿ ಕುಲಾಂತರಿಗಳನ್ನ ತರುವ ಪ್ರಯತ್ನ ನಡೆದಿತ್ತು. 22 ವರ್ಷಗಳ ಕಾಲ  ಸುಪ್ರೀಂ ಕೋರ್ಟ್ ನಡೆದು ನಡೆದ ವಾದ ಪ್ರತಿವಾದಗಳಿಂದ ಜುಲೈನಲ್ಲಿ ಸುಪ್ರೀಂ ಕೋರ್ಟ್ ಸೂಕ್ತ ಆದೇಶವನ್ನ ಹೊರಡಿಸಿದೆ. ಇದನ್ನ ಸೆ.26 ರಿಂದ ದೇಶದಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ.  

ರಾಷ್ಟ್ರೀಯ ಸುರಕ್ಷಿತ ರಚನೆ, ಪರಿಸರ ಅರಣ್ಯ ಹವಮಾನ ಇಲಾಖೆ, ಎಲ್ಲಾ ಪರಿಸರ ವಾದಿಗಳೊಂದಿಗೆ ಹಾಗೂ ರೈತರಜೊತೆ ಚರ್ಚಿಸಿ ಕುಲಾಂತರಿಗಳನ್ನ ಬೆಳೆಸುವ ಬಗ್ಗೆ ಕಾನೂನು ರಚಿಸಲು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಸೆ.26 ಕುಲಾಂತರಿ ಬೇಡ ಎಂಬ ಅಭಿಯಾನ ನಡೆಸಲಿದ್ದೇವೆ ಎಂದರು. 

ಪ್ರಾಣಿ ಪಕ್ಷಿಗಳ ರಕ್ತ ತೆಗೆದು ಸಸ್ಯಗಳ ಮೇಲೆ ಜಿನಿಟಿಕಲ್ ಇಂಜಿನಿಯರ್ ಮೂಲಕ ಕುಲಾಂತರಿ ತಳಿಗಳನ್ನ ರಚಿಸುವ ಪ್ರಯತ್ನ ಇದಾಗಿದೆ.  ಇದನ್ನ ವಿದೇಶದಲ್ಲಿ ಬ್ಯಾನ್ ಮಾಡಲಾಗಿದೆ. ಭಾರತದಾದ್ಯಂತ ವೈಮಾನಿಕ ಕೃಷಿ ಮತ್ತು ಆಹಾರ ಇರುವ ಬಗ್ಗೆ ಕುಲಾಂತರಿ ಬೇಕಾ ಬೇಡವ ಎಂಬ ಚರ್ಚೆ ಆಗಿದೆ. ಭಾರತ ಸರ್ಕಾರ ಸಾರಸಗಟಾಗಿ ತಿರಸ್ಕರಿಸಬೇಕಿದೆ ಎಂದು ತಿಳಿಸಿದರು. 

ಭಾರತ ಸರ್ಕಾರ ಅಡಿಕೆಯನ್ನ ಆಮದು ಮಾಡಿಕೊಳ್ಳಲು ತೆರಿಗೆ ನಿಗದಿಪಡಿಸಿಲ್ಲ.‌ ಇದನ್ನ ಸರ್ಕಾರ ಪರಿಶೀಲಿಸಬೇಕು. ಇದು ಕರ್ನಾಟಕ ಅಡಿಕೆ ಬೆಳೆಗಾರರಿಗೆ ಅನಾನುಕೂಲವಾಗುವಂತೆ ಮಾಡಿದೆ.  ತೆರಿಗೆ ಹಾಕಬೇಕಿದೆ ಎಂದು ಒತ್ತಾಯಿಸಿದರು. 

ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ಬೀಜೋತ್ಪಾದನ ನಿಗಮವನ್ನ ಬೇರೆ ಉದ್ಯಮಕ್ಕೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೃಷಿ ಉತ್ಪನ್ನಗಳ ಬೀಜಗಳ ಬ್ಯಾಂಕ್ ತೆರೆಯಬೇಕಾದ ಸಮಯದಲ್ಲಿ ನಿಗಮಗಳನ್ನ ರದ್ದು ಮಾಡಿ ಬೇರೆಯವರಿಗೆ ನೀಡುವುದು ಸರಿಯಲ್ಲ. ಬೀಜೋತ್ಪಾದನೆ ನಿಗಮವನ್ನ ಮರುಸ್ಥಾಪಿಸಬೇಕು. ಬೀಜ ನಿಗಮದ 5-6 ಎಕರೆ ಜಾಗವನ್ನ ಪಾನೀಯ ನಿಗಮಕ್ಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನ ಕೈಬಿಡಬೇಕೆಂದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close