ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿಯ ವತಿಯಿಂದ ಸೆ.25 ರಿಂದ ಮಹಿಳೆಯರಿಗೆ ವಿವಿದ ಸ್ಪರ್ಧೆಗಳನ್ನ ಹಮ್ಮಿಕೊಳ್ಳಲಾಗಿದೆ.
ನಗರದ ವೀರಶೈವ ಕಲ್ಯಾಣ ಮಂದಿರ & ನಿಂಜಲಿಂಗಪ್ಪ ಸಭಾ ಭವನ ಅವರಣದಲ್ಲಿ ದಿನಾಂಕ:25/09/2024 ರಂದ ಬೆಳಿಗ್ಗೆ 09-00 ಗಂಟೆಗೆಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಥ್ರೋಬಾಲ್, ಮ್ಯುಸಿಕಲ್ ಛೇರ್, ಪಾಸಿಂಗ್ ದ ಬಾಲ್, ಹಗ್ಗಜಗ್ಗಾಟ, ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಗೆ ಶಿವಮೊಗ್ಗ ನಗರದ ಎಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಬೇಕಾಗಿ ಮಹಿಳಾ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಆಯುಕ್ತರೂ ಆದ ಶ್ರೀಮತಿ ಕವಿತಾ ಯೋಗಪ್ಪನವರ್ ರವರು ತಿಳಿಸಿರುತ್ತಾರೆ