ಸೆ.21 ರಂದು ಪದವೀಧರ ಸಹಕಾರ ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ


ಕುವೆಂಪು ರಸ್ತೆಯಲ್ಲಿರುವ ಪದವೀಧರ ಸಹಕಾರ ಸಂಘ ನಿಯಮಿತದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಸೆ.21 ರಂದು ಸರ್ಜಿ ಕನ್ವೆನ್ಷನಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. 


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷರಾದ ಎಸ್ಪಿ ದಿನೇಶ್, ಶಿವಮೊಗ್ಗ ನಗರದ ಪ್ರತಿಷ್ಠಿತ ಸಹಕಾರ ಸಂಘವಾಗಿರುವ ನಮ್ಮ ಸಂಘವು ಸುಮಾರು 53 ವರ್ಷಗಳ ಹಿಂದೆ ಶಿವಮೊಗ್ಗ ನಗರದ ಪದವೀಧರರ ಶಿಕ್ಷಕರು, ವರ್ತಕರು, ವಕೀಲರು, ವೃತ್ತಿ ಬಾಂಧವರುಗಳೆಲ್ಲರೂ ಸೇರಿ ಮೈಸೂರಿನ ದಿ. ಗ್ರಾಜುಯೇಟ್ ಕೋ-ಆಪ್ ಬ್ಯಾಂಕಿಗೆ ಭೇಟಿ ನೀಡಿ. ಆ ಸಂಸ್ಥೆಯ ವ್ಯವಹಾರವನ್ನು ಅಧ್ಯಯಿನಿಸಿ, ಶಿವಮೊಗ್ಗ ನಗರದಲ್ಲೊಂದು ಇಂತಹ ಸಹಕಾರ ಸಂಘ ಪ್ರಾರಂಭಿಸುವುದರಿಂದ ಎಲ್ಲಾ ಪದವೀಧರರಿಗೆ ಸಹಕಾರವಾಗಿದೆ.  


ಒಮ್ಮನಸ್ಸಿನಿಂದ ನಗರದ ಡಿ.ವಿ.ಎಸ್. ಸಂಸ್ಥೆಯ ಒಂದು ಸಣ್ಣ ಕೊಠಡಿಯಲ್ಲಿ 1971 ಸೆಪ್ಟೆಂಬರ್ 27 ರಂದು ಪ್ರಾರಂಭಿಸಿ, ಯಶಸ್ವಿಯಾಗಿ 53 ವರ್ಷ ಪೂರೈಸಿ, ರಾಜ್ಯ ಮತ್ತು ಜಿಲ್ಲಾ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಪಡೆಯುವುದರೊಂದಿಗೆ ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು. 


ಸಂಘವು ಪ್ರಾರಂಭವಾದ ವರ್ಷದಲ್ಲಿ ನ್ಯಾಯವಾದಿಗಳಾದ ದಿ. ಆರ್.ಆರ್.ರುದ್ರಪ್ಪನವರು ಅಧ್ಯಕ್ಷರಾಗಿ, ಶ್ರೀಯುತ ವಿ. ದೇವೇಂದ್ರರವರು ಉಪಾಧ್ಯಕ್ಷರಾಗಿ ಹಾಗೂ ನಿಷ್ಟಾವಂತ ಆಡಳಿತ ಮಂಡಳಿಯದರೊಂದಿಗೆ ಭದ್ರ ಬುನಾದಿ ಹಾಕಿ ಕೊಟ್ಟಿರುವ ಎಲ್ಲಾ ಗಣ್ಯರಿಗೆ ಅನಂತ ವಂದನೆಗಳನ್ನ ತಿಳಿಸಿದರು. 


ಸಂಘವು ಪ್ರಾರಂಭದಲ್ಲಿ ಕೇವಲ 163 ಸದಸ್ಯರಿಂದ ರೂ. 8276-00ಗಳ ಷೇರು ಬಂಡವಾಳದೊಂದಿಗೆ ರೂ.1001-00 ಠೇವಣಿ ಸಂಗ್ರಹಣೆ,  ಹಾಗೂ 5400-00 ರೂ.ಗಳ ಸಾಲ 34-00 ರೂ.ಗಳ ನಿವ್ವಳ, ಲಾಭಗಳನ್ನ ಗಳಿಸಿರುತ್ತದೆ. ಈ ಅಂಕಿ ಅಂಶಗಳನ್ನ  ಇಂದಿನ ಅಂದರೆ   2024ರ ಮಾರ್ಚಿಗೆ ಹೋಲಿಸಿದರೆ ಸದಸ್ಯರ ಸಂಖ್ಯೆ 7081 ಆಗಿದೆ. 


288.82 ಲಕ್ಷಗಳ ಷೇರು ಬಂಡವಾಳ ಹೊಂದಿದೆ. 65.48 ಕೋಟಿಗಳ ನಿವ್ವಳ ಠೇವಣಿ ಸಂಗ್ರಹಿಸಿ 54.73 ಕೋಟಿ ರೂ.ಗಳ ಸಾಲ ನೀಡುವುದರೊಂದಿಗೆ  214.49 ಕೋಟಿ ವಹಿವಾಟು ನಡೆದಿದೆ. ರೂ. 7:41 ಕೋಟಿ ರೂಗಳ ಒಟ್ಟು ಆದಾಯ ಗಳಿಸಿದೆ. 1,29,16,136-25 ಗಳ ದಾಖಲೆ ನಿವ್ವಳ ಲಾಭವನ್ನ ಗಳಿಸಿದೆ ಎಂದರು.


ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿಯು ಅತ್ಯುತ್ತಮವಾಗಿದ್ದು, NPA ಪ್ರಮಾಣವು ಶೇಕಡ .5 ರಷ್ಟಿಸುತ್ತವೆ. ಇವಲ್ಲದೆ ಸತತವಾಗಿ ಕಳೆದ 6 ವರ್ಷಗಳಿಂದ ರೂ. 1 ಕೋಟಿಗೂ ಅಧಿಕ ಲಾಭವನ್ನು ಗಳಿಸಿರುವುದಕ್ಕೆ ಆಡಳಿತ ಮಂಡಳಿಯ ಸದಸ್ಯರಿಗೆ ಸಿಬ್ಬಂದಿ ವರ್ಗದವರಿಗೆ ಮತ್ತು ಸಂಘದ ಗೌರವಾನ್ವಿತ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. 


ಕಳೆದ ಸರ್ವಸದಸ್ಯರ ಸಭೆಯಲ್ಲಿ ತಿಳಿಸಿದಂತೆ ನಮ್ಮ ಸಂಘದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಕೃಷಿ ನಗರದಲ್ಲಿ ಸಂಘದ ಹೆಸರಿಗೆ ಖರೀದಿಸಿರುವ ನಿವೇಶನದಲ್ಲಿ ಸಂಘದ ನೂತನ ಕಾಯಾ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಆರ್ ಸಿಸಿ ಕೆಲಸ ಮುಗಿದಿದ್ದು, ಮಿನಿ ಸಭಾಂಗಣ ಮಹಡಿಯಲ್ಲಿನ ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿದೆ. ಸಂಘದ ಶಾಖಾ ಕಟ್ಟಡದಲ್ಲಿ ಸೇಫ್ ಡೆಪಾಸಿಟ್ ಲಾಕರ್‌ಗಳನ್ನು ಅಳವಡಿಸಲಾಗುತ್ತಿದ್ದು ದಿ: 24-00-2021 ರಿಂದ ಲಾಕರ್ ಬುಕ್ಕಿಂಗ್ ಆರಂಭವಾಗಿರುತ್ತದೆ.  ಸದಸ್ಯರುಗಳು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳ ಬಹುದು ಎಂದರು. 


ಸಂಘದ ಈ ಎಲ್ಲಾ ಅಭಿವೃದ್ಧಿಗೆ ಸದಸ್ಯರಾದ ತಾವುಗಳು, ಸಹಕಾರ ಇಲಾಖೆಯವರು, ಸನ್ನದು ಲೆಕ್ಕಪರಿಶೋಧಕರು, ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಯವರು ನೀಡಿರುವ ಸಹಕಾರವನ್ನು ಸ್ಮರಿಸುತ್ತಾ, ಈ ಕಾರ್ಯಕ್ರಮಗಳು ಸುಗಮವಾಗಿ ನೆರೆವೇರಿಸಲು ನಿಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು