ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ-ಭದ್ರಾವತಿಯಲ್ಲಿ ಅಭಿವೃದ್ಧಿಗಾಗಿ ಮುಂದಿನ 16 ವರ್ಷಕ್ಕೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಮಾಸ್ಟರ್ ಪ್ಲಾನ್ ತಯಾರಿಸಿದೆ. ಇಜಿಎಸ್ ಸಂಸ್ಥೆಯ ಮೂಲಕ ಯಾವ ರೀತಿ ಅಭಿವೃದ್ಧಿ ಮಾಡಲು ಮುಂದಿನ 2041 ರವರೆಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಮುಂದಿನ 16 ವರ್ಷಕ್ಕೆ ಜನ ಸಂಖ್ಯೆ ಎಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 10 ಲಕ್ಷ ಜನ ಹೆಚ್ಚಾಗಲಿದೆ ಎಂದು ನಿರೀಕ್ಷಸಾಲಾಗಿದ್ದು. 7½ ಶಿವಮೊಗ್ಗ 2½ ಲಕ್ಷ ಜನ ಭದ್ರಾವತಿ ನಗರದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ, ಆರೋಗ್ಯದಲ್ಲಿ ಆಸ್ಪತ್ರೆಗೆ ಒತ್ತು ನೀಡಲಾಗಿದೆ. ರಸ್ತೆಗಳಿಗೆ ಒತ್ತು ನೀಡಲಾಗಿದೆ. ಯಾವ ಯಾವ ಏರಿಯಾ ಒಳಪಡುವಂತಹದ್ದಲ್ಲಿ ದೊಡ್ಡರಸ್ತೆ ಯುಜಿಡಿ ರಚಿಸಲಾಗುತ್ತಿದೆ ಎಂದರು.
ರಿಂಗ್ ರಸ್ತೆ 12 ವರ್ಷ ಹಿಂದೆ ನಡೆದಿದೆ. ರೈಲ್ವೆ ಟ್ರಾಕ್ ನಲ್ಲಿ ವ್ಯವಸ್ಥೆ ಇರಲಿಲ್ಲ. ಈಗ ಸಮಗ್ರ ರಸ್ತೆ, ಒಳಚರಂಡಿ ಮತ್ತು ಮೂಲಭೂತ ಸೌಕರ್ಯಗಳನ್ನ ನಿರ್ಮಿಸಿಕೊಡಲಾಗುತ್ತಿದೆ. ವಾಜಪೇಯಿ ಲೇಔಟ್ ನಲ್ಲಿ 200 ಅಡಿ ರಸ್ತೆ ನಿರ್ಮಿಸಲಿದ್ದೇವೆ. ಮಾಸ್ಟರ್ ಪ್ಲಾನ್ ನಲ್ಲಿ ರಿಂಗ್ ರಸ್ತೆ, ಪ್ರವಾಸೋದ್ಯಮ, ದೇವಸ್ಥಾನ, ಜೋಗಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಉದ್ಯಾನವನದ ನಿರ್ಮಾಣವೂ ಒಳಗೊಂಡಿದೆ. ಹೊಳೆ ಹನಸವಾಡಿ, ಜ್ಞಾನದೀಪ ಶಾಲೆಕಡೆ ಮಾಸ್ಟರ್ ಪ್ಲಾನ್ ಮಾಡಲಿದ್ದೇವೆ. ಒಂದು ತಿಂಗಳಲ್ಲಿ ನಿರ್ಮಿಸಲಾಗುತ್ತಿದೆ. ಊರಗಡೂರಿನಲ್ಲಿ ನಿರ್ಮಾಣಗೊಂಡಿರುವ ನಿವೇಶನಗಳಿಗೆ 7-8 ಸಾವಿರ ಅರ್ಜಿ ಬಂದಿದೆ. 437 ಸೈಟ್ ಹಂಚಲಿದ್ದೇವೆ. 60 ಎಕರೆಯಲ್ಲಿ ಸೈಟ್ ನಿರ್ಮಿಸಲಾಗಿದೆ. 179 ಸೈಟ್ ನಿವೇಶನಗಳಿಗೆ ನೀಡಿರುವ ರೈತರಿಗೆ ನೀಡಲಾಗುತ್ತಿದೆ ಎಂದರು.
ಊರುಗಡೂರಿನ ನಿವೇಶನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗೆ 9% ಜನರಲ್ ಗೆ 50% ಪತ್ರಕರ್ತರಿಗೆ ರಾಷ್ಟ್ರಪ್ರಶಸ್ತಿ ಪಡೆದವರಿಗೆ 5% ಅಂಗ ವಿಕಲರಿಗೆ 3% ಹಿರಿಯ ನಾಗರಿಕರಿಗೆ, ಎಸ್ ಸಿ, ಎಸ್ಟಿ ಸೇರಿದಂತೆ ಮೀಸಲಾತಿ ನೀಡಲಾಗುತ್ತಿದೆ. ಅಪಾರ್ಟ್ ಮೆಂಟ್ ಮಾಡಲಾಗುತ್ತಿದೆ. ಉರುಗಡೂರಿನಲ್ಲಿ 4 ಎಕರೆಯಲ್ಲಿ ಅಪಾರ್ಟ್ ಮೆಂಡ್ ಮಾಡಲಾಗುತ್ತಿದೆ. ಸೋಮಿನಕೊಪ್ಪದಲ್ಲಿ 1½ ಎಕರೆ ಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
156 ಸೋಗನೆ ಸರ್ವೆನಂಬರ್ ನಲ್ಲಿ 100 ಎಕರೆ ಜಮೀನು ನೋಡಲಾಗಿದೆ. ಇನ್ನು 14 ದಿನಗಳಲ್ಲಿ ಸಭೆ ಕರೆದು ನಿವೇಶನ ನಿರ್ಮಿಸಲಾಗುತ್ತಿದೆ. ನಿದಿಗೆ 3 ಎಕರೆ ಜಾಗದಲ್ಲಿ ಬಡಾವಣೆ ಮಾಡಲಾಗುವುದು. 30 ಪಾರ್ಕ್ ಗಳನ್ನ ಭದ್ರಾವತಿ ಶಿವಮೊಗ್ಗದಲ್ಲಿ ಅಭಿವೃದ್ಧಿ 15 ಕೆರೆ ಅಭಿವೃದ್ಧಿ ಪಡಿಸಲಾಗುವುದು.
ವಾಜಪೇಯಿ ಲೇಔಟ್ ನ ಅಕ್ರಮ ಹಂಚಿಕೆ ರದ್ದು ಮಾಡಿದ್ದೇವೆ ಶೀಘ್ರದಲ್ಲಿಯೇ ಮನೆಗಳು ನಿರ್ಮಾಣವಾಗಲಿದೆ. ಮನೆ ಕಟ್ಟದವರಿಗೆ ನೊಟೀಸ್ ನೀಡಲಾಗಿದೆ. 2300 ನಿವೇಶನದಲ್ಲಿ ಮನೆಗಳನ್ನ ಕಟ್ಟಲು ಸೂಚಿಸಲಾಗಿದೆ ಸಮಯ ನೀಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಶಿವಮೊಗ್ಗ ಭದ್ರಾವತಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತುನೀಡಾಗುತ್ತಿದೆ ವಾಜಪೇಯಿಬಲೇಔಟ್ ನಲ್ಲಿ 1500 ಗಿಡ ನೆಡಲಾಗಿದೆ ಎಂದರು.
ಭದ್ರಾವತಿಯಲ್ಲಿ 34 ಎಕರೆ ಜಾಗವಿದೆ ಅಲ್ಲಿನವೇಶನ,ಗೋಪಿಶೆಟ್ಟಿಕೊಪ್ಪದಲ್ಲಿ ಜಾಗ ನಿಗದಿ ಪಡಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ರವಿಕುಮಾರ್, ರೇಣುಕಮ್ಮ, ವಿಶ್ವನಾಥ್ ಮಜ್ಜಿಗೆ ಉಪಸ್ಥಿತರಿದ್ದರು.