ಗುರುವಾರ, ಸೆಪ್ಟೆಂಬರ್ 12, 2024

ರಾಗಿಗುಡ್ಡದಲ್ಲಿ 14 ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ-ಬಿಗಿ ಬಂದೋಬಸ್ತ್




ಸುದ್ದಿಲೈವ್/ಶಿವಮೊಗ್ಗ


ರಾಗಿಗುಡ್ಡದಲ್ಲಿ ಇಂದು ಏಕಕಾಲದಲ್ಲಿ 14 ಗಣಪತಿ ವಿಗ್ರಹಗಗಳನ್ನ ವಿಸರ್ಜಿಸಲಾಗುತ್ತಿದೆ. 14 ಗಣಪತಿಗಳ  ವಿಸರ್ಜನೆಯ ಬೆನ್ನಲ್ಲೇ ಹಾಗೂ ಕಳೆದು ಬಾರಿಯ ಮಿಲಾದ್ ಮೆರವಣಿಗೆಯ ವೇಳೆ ನಡೆದ ಕಹಿ ಘಟನೆ ಹಿನ್ನಲೆಯಲ್ಲಿ ಪೊಲೀಸರ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. 


ಛತ್ರಪತಿ ಶಿವಾಜಿ ಯುವಕರ ಸಂಘ, ತಿಲಕ್ ಭಾಯ್ಸ್, ಭುವನೇಶ್ವರಿ ಯುವಕರ ಸಂಘ, ಭಗತ್ ಸಿಂಗ್ ಯುವಕರ ಸಂಘ, ವಿಶ್ವಪ್ರಿಯ ಗಣಪತಿ ಯವಕರ ಸಂಘ, ಕುವೆಂಪು ಯುವಕರ ಸಂಘ, ಮಾರಿಕಾಂಬ ಯುವಕರ ಸಂಘ, ಸಿದ್ದಿ ವಿನಾಯಕ ಸ್ಟಾರ್ ಯುವಕರ ಸಂಘ ಸೇರಿದಂತೆ 14 ಪ್ರತಿಷ್ಠಾಪನಾ ಗಣಪತಿ ಮೂರ್ತಿಗಳನ್ನ ವಿಸರ್ಜಿಸಲಾಗುತ್ತಿದೆ. 



ರಾಗಿಗುಡ್ಡದ ಸರ್ಕಲ್ ಗೆ ಹೋಗಿ ನಂತರ ಕೆಳಗೆ ಬಂದು ಚಾನೆಲ್ ನಲ್ಲಿ ವಿಸರ್ಜಿಸಲಾಗುತ್ತಿದೆ.‌ ಸಿದ್ದಿ ವಿನಾಯಕ ಸ್ಟಾರ್ ಯುವಕರ ಸಂಘದ 28 ನೇ ವರ್ಷದ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ವಿಸರ್ಜನೆಯ ನಂತರ ಗಣಪತಿ ಮೂರ್ತಿ ವಿಸರ್ಜನೆಯ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ. 3000 ಜನರಿಗೆ ಪ್ರಸಾದ ವಿತರಣೆ ನಡೆಯಲಿದೆ. 


ಬಿಗಿ ಬಂದೋಬಸ್ತ್


ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆಯುವ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 04 ಪೊಲೀಸ್  ಉಪಾಧೀಕ್ಷಕರು, 14 ಪೋಲಿಸ್ ನಿರೀಕ್ಷಕರು, 26 ಪೊಲೀಸ್ ಉಪನಿರೀಕ್ಷಕರು, 56 ಸಹಾಯಕ ಪೊಲೀಸ್ ನಿರೀಕ್ಷಕರು, 



416 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 232 ಗೃಹರಕ್ಷಕ ದಳ ಸಿಬ್ಬಂದಿಗಳು, 01-RAF  ತುಕಡಿ 03 ಡಿಎಆರ್ ತುಕಡಿ ಮತ್ತು 05 ಕೆಎಸ್ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. 


ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ,  ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಮತ್ತು  ಎ. ಜಿ. ಕಾರ್ಯಪ್ಪ ಅವರಿಂದ ಶಿವಮೊಗ್ಗ ಜಿಲ್ಲೆರವರು ಪೊಲೀಸ್ ಕವಾಯಿತು ಮೈದಾನ ಶಿವಮೊಗ್ಗದಲ್ಲಿ ಬ್ರೀಫಿಂಗ್ ನಡೆಸಲಾಯಿತು. ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ