ಹಬ್ಬಕ್ಕೆ ಡಿಜೆ ಬಳಕೆ ನಿಷೇಧ, 1300 ಜನ ರೌಡಿಗಳ ವಿರುದ್ಧ ಖಡಕ್ ಕಾರ್ಯಾಚರಣೆ-ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹೇಳಿಕೆ


ಸುದ್ದಿಲೈವ್/ಶಿವಮೊಗ್ಗ


ಖಾಲಿ ಜಾಗ ಮತ್ತು ಕತ್ತಲಿನಲ್ಲಿ ಕುಳಿತು ಗಾಂಜಾ ಪ್ರಕರಣವನ್ನ ಪತ್ತೆಮಾಡಲಾಗಿದೆ 250 ಜನರಿಗೆ ಗಾಂಜಾ ಪರೀಕ್ಷೆಗೆ ಒಳಪಡಿಸಲಾಗಿದೆ. 68 ಜನರಿಗೆ ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ತಿಳಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗಾಂಜಾ ವಿರುದ್ಧದ ಕಾರ್ಯಾಚರಣೆ ನಡೆಸಲಾಗಿದೆ.  45 ದಿನಗಳಲ್ಲಿ   10 ಪ್ರಕರಣಗಳು ದಾಖಲಾಗಿದ್ದು, 19 ಜನರಿಗೆ ಗಾಂಜಾ ಪತ್ತೆಯಾಗಿದೆ.  1199 ಮೊಹಲ್ಲಾ ಸಭೆಗಳನ್ನ ನಡೆಸಲಾಗಿದ್ದು. 644 ಜನ ಬ್ಯಾಡ್ ಕ್ಯಾರೆಕ್ಟರ್ ಎಂದು ಗುರುತಿಸಲಾಗಿದೆ. 


ಕಳೆದ 3 ವರ್ಷದಲ್ಲಿ ವಿಡಿಯೋ ಗ್ರಫಿಯನ್ನ ತಪಾಸಣೆ ಮಾಡಲಾಗುತ್ತಿದೆ.‌ 206 ಜನ ಹೆಣ್ಣುಮಕ್ಕಳ ಜೊತೆ ಅಸಭ್ಯತೆ ನಡೆತೆ, ಹಿರಿಯರ ವಿರುದ್ಧ ಅಗ್ರೆಸಿವ್ ನೆಸ್ ಎಂದು ಗುರುತಿಸಲಾಗಿದೆ. 1188 ಏರಿಯಾ ಡಾಮಿನೇಷನ್ ಮಾಡಲಾಗಿದೆ.  9 ಸಾವಿರ ಜನರಿಗೆ ಪೆಟ್ಟಿ ಕೇಸ್,  ಕೋಪ್ಡಾ ಮತ್ತು ರ್ಯಾಶ ಡ್ರೈವಿಂಗ್ ಪ್ರಕರಣಗಳನ್ನ ದಾಖಲಿಸಲಾಗಿದೆ. 


ಡ್ರೋನ್ ಮೂಲಕ ವಿಡಿಯೋ ಮಾಡಿ ಅಪ್ರಾಪ್ತರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವುದು ತಿಳಿದಿದ್ದು ಅವರಿಗೆ ಎಚ್ಚರಿಕೆ ಕೈಗೊಳ್ಳಲಾಗಿದೆ. ಗಣಪತಿ ಮತ್ತು ಈದ್ ಮೆರವಣಿಗೆ ಕುರಿತಂತೆ  ಮೆರವಣಿಗೆ ಸಾಗುವ ಹಾದಿಯಲ್ಲಿ 350 ಸಿಸಿ ಟಿವಿಗಳನ್ನ ಅಳವಡಿಸಲಾಗಿದೆ.  ಖಾಸಗಿ ಜನರಿಂದ 500 ಸಿಸಿ ಟಿವಿ ಹಾಕಲಾಗಿದೆ. 


ಎಲ್ಲಾ ತಾಲೂಕಿನಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭದ್ರಾವತಿಯಲ್ಲಿ 120, ಸಾಗರದಲ್ಲಿ 70 ಹಾಗೂ  ಶಿರಾಳಕೊಪ್ಪದಲ್ಲೂ 25 ಸಿಸಿ ಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ, ನಾಳೆ ಒಂದು ಆರ್ ಎಎಫ್ ತುಕಡಿ ಬರಲಿದೆ, ಹಬ್ಬಗಳ ಬಂದೋಬಸ್ತ್ ಗೆ   ksrp 15,  ಡಿಎಆರ್ 8 ವಾಹನ ಬರ್ತಾಯಿದೆ. 1000 ಹೋಮ್ ಗಾರ್ಡ್, ಹೆಚ್ಚುವರಿಯಾಗಿ 1500 ಜನರನ್ನ ನೇಮಿಸಿಕೊಳ್ಳಲಾಗಿದೆ. 



ಜಿಲ್ಲೆಯಲ್ಲಿ 1300 ರೌಡಿಶೀಟರ್ ಗಳೆಂದು  ಜಿಲ್ಲೆಯಲ್ಲಿದ್ದಾರೆ 80 ಜನ ನ್ಯಾಯಾಂಗ ಬಂಧನದಲ್ಲಿದ್ದರೆ,  53 ಜನರನ್ನ ಗಡಿಪಾರು ಮಾಡಲಾಗಿದೆ. ಇದರಲ್ಲಿ 8 ಜನರನ್ನ ಗಣಪತಿ ಹಬ್ಬಕ್ಕಾಗಿ ಗಡಿಪಾರು ಮಾಡಲಾಗಿದೆ.  ಉಳಿದವರಿಗೆ ಎಚ್ಚರಿಕೆ ನೀಡಲಾಗಿದೆ. ಕಳೆದವರ್ಷದಂತೆ ವಾಲಂಟೈರ್ ಗಳು ಮುಂದುಬಂದಿದ್ದಾರೆ. ಜಿಲ್ಲೆಯಲ್ಲಿ ಸಧ್ಯಕ್ಕೆ 450 ಜನಕ್ಕೂ ಹೆಚ್ಚು ಜನ ವಾಲೆಂಟೈರ್ ಗಳು ಮುಂದೆ ಬಂದಿದ್ದಾರೆ. ಈ ಸಂಖ್ಯೆ ಹೆಚ್ಷಾಗಲಿದೆ. ನ್ಯಾಯಾಲಯದ ಆದೇಶದಂತೆ  ಡಿಜೆ ಬಳಕೆ ನಿಷೇಧಿಸಲಾಗಿದೆ ಎಂದು ಹೇಳಿದರು. 


ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಕಾರ್ಯಪ್ಪ, ಡಿವೈಎಸ್ಪಿ ಸುರೇಶ್, ಬಾಬು ಆಂಜನಪ್ಪ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close