ಕೆರಗೆ ಬಿದ್ದ 108 ಅಂಬ್ಯುಲೆನ್ಸ್-ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂಧನ

ಸುದ್ದಿಲೈವ್/ಶಿವಮೊಗ್ಗ

ಹೋರಿ ಹಬ್ಬದ ಹೋರಿಗಳ ಲೋಕಗಳೆ ಬೇರೆ. ಅಲ್ಲಿ ಹೋರಿಗಳಿಗೆ ನಾಮಕರಣ ಮಾಡಲಾಗಿರುತ್ತದೆ. ಕೇಸರಿ, ಈಸೂರ ದಂಗೆ, ಮಲ್ನಾಡ್ ಎಕ್ಸ್ ಪ್ರೆಸ್, 108 ಅಂಬ್ಯೂಲೆನ್ಸ್ ಎಂಬ ವಿಚಿತ್ರ ಹೆಸರುಗಳೆ ಇಲ್ಲಿನ ಹೆಸರುಗಳ ವಿಶೇಷವಾಗಿದೆ. 

ಶಿವಮೊಗ್ಗ ತಾಲೂಕಿನ ಆಯನೂರು ಬಳಿ ಇರುವ ಇಟ್ಟಿಗೆ ಹಳ್ಳಿ ಗ್ರಾಮದ ಮಲ್ನಾಡ್ ಯೋಗೇಶ್ ಅವರಿಗೆ ಸೇರಿದ, 108 ಆಂಬುಲೆನ್ಸ್ ಎಂಬ ಹೋರಿಯು ಇಂದು ಆಯನೂರು ಬಳಿಯ ಗೌಡನಕೆರೆಯಲ್ಲಿ ಬಿದ್ದು ಸಾವನಪ್ಪಿದ ಧಾರಣ ಘಟನೆ ಇಂದು ನಡೆದಿದೆ.

ಇಟ್ಟಿಗೆಹಳ್ಳಿ 108 ಆಂಬುಲೆನ್ಸ್ ಎಂದರೆ ಸಾಕು, ಜನರ ಮನಸ್ಸಿಗೆ ಬರುವುದು ಈ ಹೋರಿ ಮಾತ್ರ, ಯಾಕೆಂದರೆ ದೀಪಾವಳಿಯ ಹಬ್ಬದ ನಂತರ ಸುತ್ತಮುತ್ತ ಎಲ್ಲೇ ಹೋರಿ ಬೆದರಿಸುವ ಸ್ಪರ್ಧೆ ಇದ್ದರೆ ಸಾಕು, ಈ ಹೋರಿ ಅಲ್ಲಿ ಪ್ರತ್ಯಕ್ಷವಾಗುವುದು ವಾಡಿಕೆ. 

ಹೀಗೆ ಅನೇಕ ಸ್ಪರ್ಧೆಗಳಲ್ಲಿ ತನ್ನದೇ ಛಾಪು ಮೂಡಿಸಿ ನೂರಾರು ಪ್ರಶಸ್ತಿಯನ್ನು ತನ್ನದಾಗಿಸಿದ 108 ಆಂಬುಲೆನ್ಸ್ ಇಂದು ಧಾರುಣ ಅಂತ್ಯ ಕಂಡಿದ್ದು, ಇದರಿಂದ ಸಾವಿರಾರು ಅಭಿಮಾನಿಗಳು ಹೋರಿಯನ್ನು ನೋಡಲು ಇಟ್ಟಿಗೆಹಳ್ಳಿ ಗ್ರಾಮಕ್ಕೆ ಧಾವಿಸುತ್ತಿದ್ದಾರೆ, ಹಾಗೂ ಇಡೀ ಗ್ರಾಮಕ್ಕೆ  ಗ್ರಾಮವೇ ಸೂತಕದ ಛಾಯೆ ಹರಡಿದೆ.    ಅಭಿಮಾನಿಗಳ ಮೌನರೋಧನೆ ಮುಗಿಲು ಮುಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket