10 ವರ್ಷದ ಮಗುವಿನ ಅಪಹರಣಕ್ಕೆ ಯತ್ನ


ಸುದ್ದಿಲೈವ್/ಭದ್ರಾವತಿ

ಬೈಕ್ ನಲ್ಲಿ ಬಂದು 10 ವರ್ಷದ ಮಗುವನ್ನ ಅಪಹರಿಸಲು ಯತ್ನಿಸಿದ ಪ್ರಕರಣ ಇತ್ತೀಚೆಗೆ ನಡೆದಿರುವುದು ವರದಿಯಾಗಿದೆ. 

ಭದ್ರಾವತಿಯ ಪ್ರತಿಷ್ಠಿತ ಶಾಲೆಗೆ ಹೋಗಿ ಬರುತ್ತಿದ್ದ 10 ವರ್ಷದ ಹೆಣ್ಣು ಮಗುವು ತಂದೆಯ ಪರಿಚಯಸ್ಥರ ಆಟೋದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಳು. ಇತ್ತೀಚೆಗೆ ಸಂಜೆ ಶಾಲೆಯಿಂದ ಬಂದ ಮಗು ಮನೆಯ ಹತ್ತಿರ ಆಟೋದಿಂದ ಇಳಿದಿದೆ.

ಆ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿ ಅಪ್ಪ ಹೇಳಿದ್ದಾರೆ ಸರ್ಕಲ್ ವರೆಗೆ ಬಿಡಬೇಕೆಂದು ಬಾ ಹೋಗೋಣ ಎಂದಿದ್ದಾನೆ. ಮಗು ಬರಲ್ಲ ಎಂದಿದೆ. ಚಾಕಲೇಟ್ ಕೊಡಿಸುತ್ತೇನೆ ಎಂದು ಹೇಳಿದ್ದಾನೆ ಚಾಕ್ಲೇಟ್ ಬೇಡ ಎಂದಿದೆ. ಕೈಯಿಂದ ಹಿಡಿದುಕೊಳ್ಳಲು ಬಂದಾಗ ಮಗು ತಪ್ಪಿಸಿಕೊಂಡಿದೆ. 

ಮಗುವನ್ನ ಅಪಹರಣ ಮಾಡಲೆಂದು ಬಂದ ವ್ಯಕ್ತಿ ದಪ್ಪವಿದ್ದು, ಆತನ ಬೈಕ್ ಮತ್ತು ಇತರೆ ಬಗ್ಗೆ ಮಾಹಿತಿಗಳಿಲ್ಲ. ತಂದೆ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close