ಸುದ್ದಿಲೈವ್/ಶಿವಮೊಗ್ಗ
ಇತ್ತೀಚೆಗೆ ಕರ್ನಾಟಕ ರಾಜ್ಯ ಪೇಂಕಾಕ್ ಸಿಲಾಟ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ 10 ನೇಯ ಕರ್ನಾಟಕ ರಾಜ್ಯ ಪೆಂಕಾಕ್ ಸಿಲಾತ್ ಕ್ರೀಡಾಕೂಟ 2024 ರಲ್ಲಿ ಶಿವಮೊಗ್ಗ ಜಿಲ್ಲಾ ಪೆಂಕಾಕ್ ಸಿಲಾತ್ ಸ್ಪೋರ್ಟ್ಸ್ ಅಸೋಸಿಯೇಷನ್ ನಾ ಕ್ರೀಡಾಪಟುಗಳು 2 ಚಿನ್ನ ಸೇರಿದಂತೆ 2 ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ
ವಿವರ ಇಂತಿದೆ :
ಪ್ರಥಮ್ ಹೆಗ್ಡೆ. ಪ್ರಿ ಟೀನ್ 36 ರಿಂದ 38 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುತ್ತಾನೆ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ. ಸೊರಬ. ಇಶಾಂತ್ ಪಿ ಜ್ಞಾನವಾಹಿನಿ ಇಂಗ್ಲಿಷ್ ಸ್ಕೂಲ್ ಚೀಲೂರು ಮೆಕ್ಕನ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾನೆ
ಹಾಗೆ ಇದೆ ವಿದ್ಯಾಸಂಸ್ಥೆಯ ಮಿಥುನ್ ಹೆಚ್ಆರ್ ಹಾಗೂ ಟ್ಯಂಡಿಂಗ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ. ನಿಶಾಂತ್ ಪಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸೊರಬ ತಾಲೂಕು ಈ ಕ್ರೀಡಾಪಟು ಕೂಡ ಬೆಳ್ಳಿಯ ಪದಕವನ್ನು ಪಡೆದಿರುತ್ತಾನೆ.
ಎಲ್ಲಾ ವಿಜೇತರಿಗೂ ಶಿವಮೊಗ್ಗ ಜಿಲ್ಲಾ ಸಿಲಾತ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರು ಆದಂತಹ ಕುಮಾರ್ ವಿ ನಾಯ್ಡು ಹಾಗೂ ಚಂದನ್ ಪಟೇಲ್ ಪ್ರಧಾನ ಕಾರ್ಯದರ್ಶಿಗಳು ಮತ್ತು ತರಬೇತುದಾರರು ಆದಂತಹ ಚಂದ್ರಕಾಂತ್ ಜಿ ಭಟ್ ರವರು ಅಭಿನಂದಿಸುತ್ತಾರೆ.