ಸುದ್ದಿಲೈವ್/ಚಂದ್ರಗುತ್ತಿ
ಐ ಆಮ್ ದ ಗವರ್ನಮೆಂಟ್ ಯೂ ಆರ್ ನಾಟ್ ದ ಗವರ್ನಮೆಂಟ್ ಎಂದು ಸಚಿವ ಮಧು ಬಂಗಾರಪ್ಪ ಗುಡುಗಿದ್ದಾರೆ.
ಅವರು ಚಂದ್ರಗುತ್ತಿಯ ಕಾರ್ಯನಿರ್ವಾಹಣಾಧಿಕಾರಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ದೇವಸ್ಥಾನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಸಭೆಯಲ್ಲಿ ತಿಳಿಸಿದರು.
ದೇವಸ್ಥಾನದ ಸುತ್ತಮುತ್ತ ಕುಂಕುಮ ಮಾರಾಟ ಮಾಡುವ ವಿಚಾರದಲ್ಲಿ ಅಭಿವೃದ್ಧಿ ಸಭೆಯ ಕೊನೆಯ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಮತ್ತು ಸದಸ್ಯರ ನಡುವೆ ವಾದ ಪ್ರತಿವಾದ ನಡೆದಿದೆ.
ಅಲ್ಲಿ ಮಳಿಗೆಗೆಗಳಲ್ಲಿ ಮಾಲೀಕರುಗಳು ಗುತ್ತಿಗೆ ಹಿಡಿದು ಅಂಗಡಿ ನಡೆಸುತ್ತಾರೆ. ದೇವಸ್ಥಾನದ ಆವರಣದಲ್ಲಿ ಕುಂಕುಮ ಮಾರಾಟಕ್ಕೆ ಬಹಳ ಬೇಡಿಕೆ ಇದೆ. ಆದರೆ ಕೆಲವರು ಅಲ್ಲಲ್ಲೇ ಕೈಯಲ್ಲಿ ಕುಂಕುಮ ಹಿಡಿದು ಮಾರಾಟ ಮಾಡುತ್ತಾರೆ. ಅಂಗಡಿ ಮಾಲೀಕರು ಅಲ್ಲಲ್ಲಿ ಕುಂಕುಮ ಮಾರಾಟ ಮಾಡುವವರ ವಿರುದ್ಧ ಆಕ್ಷೇಪಣೆ ಇದೆ. ನಾವು ಹಣಕಟ್ಟಿ ವ್ಯಾಪಾರ ಮಾಡ್ತೀವಿ. ಕೆಲವರು ಬಂಡವಾಳಿಲ್ಲದೆ ಹಣ ಮಾಡಿಕೊಂಡು ಹೋಗುತ್ತಾರೆ. ದೊಡ್ಡ ದೊಡ್ಡಹಣ ತೆತ್ತಿ ಮಳಿಗೆ ಹಿಡಿಯುತ್ತೀವಿ ಕೈಯಲ್ಲಿ ಮಾರಾಟ ಮಾಡುವಷ್ಟು ಹಣ ಸಂಪಾದಿಸೊಲ್ಲ. ಹಾಗಾಗಿ ಅವರನ್ನ ನಿರ್ಬಂಧಿಸಿ ಎಂಬುದು ಅಂಗಡಿ ಮಾಲೀಜರ ವಾದವಾಗಿದೆ.
ಈ ಬಗ್ಗೆ ಸಚಿವರ ಮುಂದೆ ಸಭೆಯಲ್ಲೂ ಚರ್ಚೆಗೆ ಬಂದಿದೆ. ಕೈಯಲ್ಲಿ ಮಾರಾಟ ಮಾಡುವವರು ಬಡವರು ಇನ್ನೂರು ಮುನ್ನೂರು ರೂ. ಹಣ ಮಾಡಿಕೊಂಡು ಹೋಗುತ್ತಾರೆ. ಇವರು ಬಡವರು ಇವರನ್ನ ಇಲ್ಲಿಂದ ಹೊರಹಾಕಿದರೆ ಹೊಟ್ಟೆಪಾಡು ಯಾರು ನೋಡಬೇಕು ಎಂಬುದು ಗ್ರಾಪಂ ಮತ್ತು ಉಪಾಧ್ಯಕ್ಷರ ವಾದವಾಗಿತ್ತು
ಆದರೆ ಆಡಳಿತ ಮಂಡಳಿಯಿಂದ ಮಳಿಗೆ ಹಿಡಿಯುವವರ ರಕ್ಷಣೆಗೆ ಆಡಳಿತ ಮಂಡಳಿಯ ಇಒ ನಿಂತಿದ್ದರು. ಇವರ ನಡುವಿನ ಹೋರಾಟ ಸಭೆಯಲ್ಲಿ ಸಣ್ಣದಾದ ಆರೋಪ, ಆಕ್ಷೇಪ, ವ್ಯಕ್ತಿಗತವಾದ ವಾದಕ್ಕೆ ಸಭೆ ವೇದಿಕೆಯಾಗಿತ್ತು. ಈ ಮಧ್ಯೆ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಅವರು ಅಧಿಕಾರಿಗಳಿಗೆ ಮಾತನಾಡಲು ಹೊರಟಾಗ ಸಚಿವ ಮಧು ಬಂಗಾರಪ್ಪನವರೇ ಅಧಿಕಾರಿಗಳ ಬೆನ್ನಿಗೆ ನಿಂತು ಮಾತನಾಡಿದರು.
ಚರ್ಚೆಯ ಕೊನೆಯಲ್ಲಿ ಆಡಳಿತ ಅಧಿಕಾರಿ ಇಒರ ವಿರುದ್ಧ ಗರಂ ಆಗಿ ಮಾತನಾಡಿದ್ದು ಸಭೆಯ ಗಮನ ಸೆಳೆದಿತ್ತು. ಐ ಅಮ್ ದ ಗವರ್ನಮೆಂಟ್, ಯೂ ಆರ್ ನಾಟ್ ಗವರ್ನಮೆಂಟ್, ಕಾನೂನು ಮಾಡುವರು ನಾವು, ಅದನ್ನ ಪಾಲಿಸುವವರು ನೀವು. ಅರ್ಜಿ ಇಟ್ಟುಕೊಂಡು ಜನ ಬರೋದು ನನ್ನ ಬಳಿ ನಿಮ್ಮ ಬಳಿ ಅಲ್ಲ ಎಂಬುದನ್ನ ಹೇಳಿ ಮಧು ಇಬ್ಬರನ್ನೂ ಚಿವುಟಿ ತೂಗುವ ಪ್ರಯತ್ನ ಮಾಡಿದ್ದಾರೆ.
ಈ ಮಧ್ಯೆ ಕೈಯಲ್ಲಿ ಕುಂಕುಮ ಮಾರಾಟ ಮಾಡುವರಿಗೆ ಹುಣ್ಣಿಮೆ ದಿನ ಪೊಲೀಸ್ ಠಾಣೆಯಿಂದ ಆಡಳಿತ ಕಚೇರಿ ನಡುವೆ ಕುಂಕುಮ ಮರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದಿರುವೆ ಎಂದು ಇಒ ಹೇಳಿರುವುದನ್ನ ಸಭೆ ಕೊಂಚ ಒಪ್ಪಿಕೊಂಡಂತೆ ಕಂಡು ಬಂದಿತ್ತು.