ಹೈಬೀಮ್ ಹೆಡ್ ಲೈಟ್ ಗಳ ವಿರುದ್ಧ ಕಾರ್ಯಾಚರಣೆ



ಸುದ್ದಿಲೈವ್/ಶಿವಮೊಗ್ಗ


ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರ ಸೂಸುವ ಮತ್ತು ಕಣ್ಣು ಕುಕ್ಕುವ (Dazzling and Glaring) ಎಲ್ಇಡಿ ದೀಪಗಳನ್ನು ಅಳವಡಿಸುವರ ವಿರುದ್ಧ ಶಿವಮೊಗ್ಗ ಪೊಲೀಸರು ಖಡಕ್ ಬಿಸಿ ಮುಟ್ಟಿಸಿದ್ದಾರೆ.  


ಈ ಕಾರ್ಯಾಚರಣೆ ಆರಂಭ ಶೂರತ್ವನೋ ಅಥವಾ ನಿರಂತರವಾಗಿ ಉಳಿಯಲಿದೆಯೋ ಕಾದು ನೋಡಬೇಕಿದೆ. ಎದುರಿನಿಂದ ಬರುವ  ವಾಹನಗಳ ಮತ್ತು ಇತರ ವಾಹನಗಳ ಚಾಲಕರುಗಳಿಗೆ ರಸ್ತೆ ಗೋಚರತೆ ಕಡಿಮೆಯಾಗಿ ತೀವ್ರ ತೊಂದರೆಯುಂಟಾಗಿತ್ತು, 


ರಸ್ತೆ ಅಪಘಾತಗಳು ಸಂಭವವಿದ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತ ದೃಷ್ಠಿಯಿಂದ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ,  ಮತ್ತು  ಎ ಜಿ ಕಾರ್ಯಪ್ಪ,ರವರ ಮಾರ್ಗದರ್ಶನದಲ್ಲಿ, ಆಯಾ ಪೊಲೀಸ್ ಉಪಾಧೀಕ್ಷಕರ ಮೇಲ್ವಿಚಾರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸ್ ಉಪ ನಿರೀಕ್ಷಕರ ತಂಡಗಳು  ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 


ದಿನಾಂಕಃ 01-07-2024  ರಿಂದ ಇಲ್ಲಿಯವರೆಗೆ Central Motor Vhicle Act ನ ಅಡಿಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾಗಿರುವ ಹೆಡ್ ಲೈಟ್ ಗಳನ್ನು ಅಳವಡಿಸದೇ ಹೆಚ್ಚು ಪ್ರಖರ ಬೆಳಕು ಹೊರ ಸೂಸುವ ಮತ್ತು ಕಣ್ಣು ಕುಕ್ಕುವ (Dazzling and Glaring) ಎಲ್ಇಡಿ ದೀಪಗಳನ್ನು ಅಳವಡಿಸಿ  ನಿಯಮಗಳನ್ನು ಉಲ್ಲಂಘನೆ ಮಾಡಿದ ವಾಹನದ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಶಿವಮೊಗ್ಗ –ಎ ಉಪ ವಿಭಾಗ ವ್ಯಾಪ್ತಿಯಲ್ಲಿ 38 ಪ್ರಕರಣಗಳು, ಶಿವಮೊಗ್ಗ – ಬಿ ಉಪ ವಿಭಾಗ ವ್ಯಾಪ್ತಿಯಲ್ಲಿ  471 ಪ್ರಕರಣಗಳು, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯಲ್ಲಿ  388 ಪ್ರಕರಣಗಳು, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯಲ್ಲಿ  350 ಪ್ರಕರಣಗಳು, ಸಾಗರ ಉಪ ವಿಭಾಗ ವ್ಯಾಪ್ತಿಯಲ್ಲಿ 172 ಪ್ರಕರಣಗಳು ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ  146 ಪ್ರಕರಣಗಳು ಸೇರಿ,  ಒಟ್ಟು 1565  ಪ್ರಕರಣಗಳನ್ನು ದಾಖಲಿಸಲಾಗಿದೆ. 


ಹೆಚ್ಚು ಪ್ರಖರ ಬೆಳಕು ಹೊರ ಸೂಸುವ ಮತ್ತು ಕಣ್ಣು ಕುಕ್ಕುವ (Dazzling and Glaring) ಎಲ್ಇಡಿ ದೀಪಗಳನ್ನು ವಾಹನಗಳಿಂದ ತೆಗೆಸಿ ಕ್ರಮ ಕೈಗೊಳ್ಳಲಾಗಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close