ಬಾಂಗ್ಲಾ ಹಿಂದೂಗಳ ರಕ್ಷಣೆಗಾಗಿ ಮಾನವ ಸರಪಳಿ






ಸುದ್ದಿಲೈವ್/ಶಿವಮೊಗ್ಗ


ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ನಮ್ಮೆಲ್ಲರ ಹೊಣೆ  ಬಾಂಗ್ಲಾದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಶಿವಮೊಗ್ಗ ನಗರದ ವತಿಯಿಂದ ಶಿವಮೊಗ್ಗ ನಗರದಲ್ಲಿ ಮೂರು ಕಡೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. 


ಗೋಪಿ ವೃತ್ತದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಜನಜಾಗೃತಿಗೋಸ್ಕರ  "ಮಾನವ ಸರಪಳಿ" ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ,ದೌರ್ಜನಗೋಳಗಾದ ಹಿಂದುಗಳ ರಕ್ಷಣೆಗೆ ಆಗ್ರಹಿಸಲಾಯಿತು.


ಅದೇ ಶಾಸಕ ಚೆನ್ನಬಸಪ್ಪನವರ  ನೇತೃತ್ವದಲ್ಲಿ ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು  ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಮಾನವ ಹಕ್ಕು ಆಯೋಗ ಮುಂದಾಗಲ್ವಾ? ಎಚ್ಚರ... ಎಚ್ಚರ.. ಇದು ಬಾಂಗ್ಲಾ ಹಿಂದೂ ದೇವಾಲಯಗಳಿಂದ ಹೊರಬರುತ್ತಿರುವ ದೇವಸ್ಥಾನದ ಗಂಟೆಯ ಶಬ್ದವಲ್ಲ. ಎಚ್ಚರಿಕೆ ಗಂಟೆ ಎಂದು ವಿವಿಧ ಪ್ಲಕಾರ್ಡ್ ಹಿಡಿದು ಪ್ರತಿಭಟಿಸಲಾಗಿದೆ.‌


ನಗರದ ಬಸ್ ನಿಲ್ದಾಣದ ಅಶೋಕ ವೃತ್ತದಲ್ಲಿಯೂ ಹಿಂದೂ ಸಂಘಟನೆ ಪ್ರತಿಭಟಿಸಲಾಯಿತು.‌ ಬಾಂಗ್ಲಾ ಹಿಂದೂಗಳೆ ಹೆದರದಿರಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನ ಸಾರಲಾಗಿದೆ.‌


ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ವಾಸುದೇವ್, ಬಿಜೆಪಿಯ ಗಿರೀಶ್ ಪಟೇಲ್, ರಾಜೂಗೌಡ, ಅಂಕೂಶ್, ಧೀನ್ ದಯಾಳು, ಕೋಟೆ ರಾಜು, ಮೊದಲಾದವರು ಭಾಗಿಯಾಗಿದ್ದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close