ಸುದ್ದಿಲೈವ್/ಶಿವಮೊಗ್ಗ
ಚಿನ್ನಾಭರಣ ಅಂಗಡಿ ಉದ್ಘಾಟನೆಯ ವೇಳೆಯೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಈಶ್ವರಪ್ಪ ರಾಜಕೀಯ ಮಾತನಾಡಿದ್ದಾರೆ. ಶಿವಮೊಗ್ಗದ ರಾಯಲ್ ಆರ್ಕೆಡ್ ನಲ್ಲಿ ಸಿ ಕೃಷ್ಣಯ್ಯ ಚೆಟ್ಟಿ ಚಿನ್ನಾಭರಣದ ಅಂಗಡಿ ಮೂರುದಿನಗಳ ಕಾಲ ಶಿವಮೊಗ್ಗದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಜಿ ಡಿಸಿಎಂ ಈಶ್ವರಪ್ಪ ಉದ್ಘಾಟಿಸಿದ್ದಾರೆ. ಉದ್ಘಾಟನೆಗೂ ಮುನ್ನ 14½ ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್ ನ್ನ ನೋಡಿ ಇಂತಹ ಕಾರ್ಯಕ್ರಮಕ್ಕೆ ಹೆಣ್ಣಮಕ್ಕಳನ್ನ ಕರೆಸುವಂತೆ ಅಲ್ಲಿದ್ದ ಶಾಪ್ ನವರಿಗೆ ತಿಳಿಸಿದ್ದಾರೆ.
ನಂತರ ಮಹಿಳೆಯೊಬ್ಬರನ್ನ ಕರೆಯಿಸಿ ಅವರಿಗೆ ನೆಕ್ಲೆಸ್ ನೋಡಿ ಎಂದು ಸೂಚಿಸಿ ಮಾಧ್ಯಮಗಳಿಗೆ ಫೋಸ್ ಕೊಟ್ಟಿದ್ದಾರೆ. ದಿಡೀರ್ ಎಂದು ಸಿದ್ದರಾಮಯ್ಯನವರ ಮೂಡಾ ಹಗರಣದ ಬಗ್ಗೆ ಮಾತನಾಡಿದ ಈಶ್ವರಪ್ಪ ಸಿಎಂ ಸಿದ್ದರಾಮಯ್ಯನವರ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ನಾನು ಸಿದ್ದರಾಮಯ್ಯನವರ ಮನೆಗೆ 100 ಬಾರಿ ಹೋಗಿ ಬಂದಿರುವೆ. ಸಿಎಂ ಪತ್ನಿ ಎಲ್ಲೂ ರಾಜಕಾರಣದ ಬಗ್ಗೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.ಅಕ್ಷರಶಃ ಗೌರಮ್ಮ ಅವರ ವಿರುದ್ಧ ಆಪಾದನೆ ಬಂದಿದೆ. ಆದಷ್ಟು ಬೇಗ ಹೊರಬರಲಿ ಎಂದು ಮಾಧ್ಯಮಗಳಿಗೆ ಹೇಳ್ತಿದ್ದೀನಿ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.