ಸುದ್ದಿಲೈವ್/ಶಿವಮೊಗ್ಗ
ಬಿಜೆಪಿ ಮುಖಂಡ ಪುರುಷೋತ್ತಮರ ಸಾವಾದ ದಿನ ರಾತ್ರಿ ಬೊಮ್ಮನ್ ಕಟ್ಟೆಯಲ್ಲಿರುವ ಅವರ ಮನೆಗೆ ಹೋಗಿ ವಾಪಾಸ್ ಆಗುವಾಗ ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಏಕಾಏಕಿ ದಾಳಿ ನಡೆಸಿರುವುದಾಗಿ ಆರೋಪಿಸಿದ್ದಾರೆ.
ವಿನಯ್ ಮತ್ತು ಕಿರಣ್ ಎಂಬುವರ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್ ನಲ್ಲಿ ಬಂದವರನ್ನ ಚಳಿ ಮಂಜ ಮತ್ತು ರಾಜೇಶ್ ಯಾನೆ ಕಪಡ ರಾಜೇಶ್ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಕಿರಣ್ ನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.