ಮದ್ಯಪಾನಸೇವಿಸಿ ವಾಹನ ಚಾಲನೆ-ದಂಡ

 


ಸುದ್ದಿಲೈವ್/ತೀರ್ಥಹಳ್ಳಿ


ತಾಲೂಕಿನ ಆಗುಂಬೆ ಬಳಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಕಾರು ಚಾಲಕನಿಗೆ ನ್ಯಾಯಾಲಯ ಹತ್ತು ಸಾವಿರ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.


ಎಸ್.ಐ. ನಾಗೇಶ್, ದಿವಾಕರ್, ಅನಿಲ್ ರವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ KA 05-AF-0250 ಸಂಖ್ಯೆಯ ಇನ್ನೋವಾ ಕಾರಿನ ಚಾಲಕ ಮಹೇಶ್ ಎಂಬಾತ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು, ಪ್ರಕರಣ ದಾಖಲಿಸಿ ನ್ಯಾಯಲಯಕ್ಕೆ ವರದಿ ಮಾಡಿದ್ದ ಹಿನ್ನಲೆಯಲ್ಲಿ ದಿನಾಂಕ 27.08.2024 ರಂದು ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ತೀರ್ಥಹಳ್ಳಿ ನ್ಯಾಯಲಯದ ನ್ಯಾಯಾಧೀಶರು 10.000 ರೂ ದಂಡ ವಿಧಿಸಿ ಆದೇಶಿಸಿದ್ದಾರೆ.


ಒಂದೇ ತಿಂಗಳಿನಲ್ಲಿ ಆಗುಂಬೆ ಭಾಗದಲ್ಲಿ ಇದು ಮೂರನೇ ಪ್ರಕರಣ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close