ಭೂ ಮಾಫಿಯಾಗೆ ಕಡಿವಾಣ ಹಾಕಿ-ರಿಯಾಜ್ ಅಹಮದ್



ಸುದ್ದಿಲೈವ್/ಶಿವಮೊಗ್ಗ,ಆ.೧೨


ಶಿವಮೊಗ್ಗದಲ್ಲಿ ಭೂಮಾಫೀಯಾ ಹೆಚ್ಚಾಗಿ ನಡೆಯುತ್ತಿದ್ದು, ಅಧಿಕಾರಿಗಳು ಅವೈಜ್ಞಾನಿಕವಾಗಿ ಭೂ ಪರಿವರ್ತನೆ ಮಾಡಿ ಬಡಾವಣೆಗಳ ನಿರ್ಮಿಸಲು ಅವಕಾಶ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ, ರಿಯಾಜ್ ಅಹಮ್ಮದ್ ಆರೋಪಿಸಿದ್ದಾರೆ.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿಗಳು ಬಗರ್‌ಹುಕುಂ ಸಾಗುವಳಿದಾರರಿಗೆ ಬಡವರ ನಿವೇಶನಕ್ಕೆ ಭೂಮಿಯನ್ನು ಕೊಡುವುದಿಲ್ಲ. ಆದರೆ, ಬಡಾವಣೆ ನಿರ್ಮಿಸಲು ಭೂ ಪರಿವರ್ತನೆ ಮಾಡಿಕೊಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೋಟ್ಯಾಂತರ ರೂ. ಭೂ ಮಾಫೀಯಾ ನಡೆಯುತ್ತಿದ್ದು, ಸರ್ಕಾರದ ಸಂಪತ್ತು ಲೂಟಿಯಾಗುತ್ತಿದೆ ಎಂದು ಆರೋಪಿಸಿದರು. 


ಉದಾಹರಣೆಗೆ ಊರುಗಡೂರು ಗ್ರಾಮದ ಸರ್ವೆ ನಂ. ೩೭/೧ರಲ್ಲಿ ೫.೯ ಗುಂಟೆ ಎಕರೆ ಇನಾಮ್ ಜಮೀನ್ ಇದ್ದು, ಇದು ಸರ್ಕಾರಕ್ಕೆ ಸೇರಿರುತ್ತದೆ. ಆದರೆ ಈ ಜಮೀನನ್ನು ಸರ್ಕಾರಿ ಅಧಿಕಾರಿಗಳು ಲ್ಯಾಂಡ್ ಡೆವಲರ‍್ಸ್ಗಳ ಜೊತೆ ಸೇರಿ ಅವೈಜ್ಞಾನಿಕವಾಗಿ ಲಾವಣ್ಯ ಲತಾ ಎಂಬುವವ ಹೆಸರಿಗೆ ಭೂಪರಿವರ್ತನೆ ಮಾಡಿ ನಿವೇಶನ ಮಾಡಲು ಅನುಮತಿ ನೀಡಿದ್ದಾರೆ. ಇದರಿಂದ ಸುಮಾರು ೫೦ ಕೋಟಿ ರೂ. ಸರ್ಕಾರದ ಸಂಪತ್ತು ನಷ್ಟವಾಗಿದೆ ಎಂದರು.

ಹೀಗೆಯೇ ಶಿವಮೊಗ್ಗದಲ್ಲಿ ಹಲವು ಕಡೆ ನೂರಾರು ಎಕರೆ ಜಮೀನು ಭೂ ಪರಿವರ್ತನೆ ಯಾಗಿದೆ. ತಕ್ಷಣವೇ ಇಂತಹ ಜಮೀನುಗಳನ್ನು ಪತ್ತೆ ಹಂಚಿಸರ್ಕಾರಕ್ಕೆ ವಾಪಾಸ್ಸು ನೀಡಬೇಕು ಮತ್ತು ಸರ್ಕಾರಿ ಜಮೀನುಗಳಿಗೆ ತಂತಿಬೇಲಿ ಅಳವಡಿಸಿ ಇದು ಸರ್ಕಾರದ್ದು ಎಂದು ನಾಮಫಲಕ ಅಳವಡಿಸಬೇಕು. ಸರ್ಕಾರದ ಆಸ್ತಿಯನ್ನು ರಕ್ಷಿಸಬೇಕು, 


ಈ ಬಗ್ಗೆ ಹಲವು ಬಾರಿ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗೋಷ್ಟಿಯಲ್ಲಿ ನಾದೀಮ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close