ಸುದ್ದಿಲೈವ್/ಶಿವಮೊಗ್ಗ
ಇಂದು ಶ್ರಾವಣ ಶುಕ್ರವಾರ, ಶಕ್ತಿ ದೇವತೆಗಳ ಅಲಂಕಾರಗಳು ನಡೆಯಲಿದೆ. ಇಂದು ಕೋಟೆ ಮಾರಮ್ಮನ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರ, ನಾಗರ ಪಂಚಮಿ ಹಬ್ಬ ಒಟ್ಟಿಗೆ ಬಂದ ಕಾರಣ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ದೇವಿಯ ಆಶೀರ್ವಾದಕ್ಕೆ ಪಾತ್ರರಾದರು.
ಶ್ರಾವಣದ ಮೊದಲನೇ ವಾರದ ಶುಕ್ರವಾರವಾದ ಕಾರಣ ದೇವಿಗೆ ಮಧುರೆ ಮೀನಾಕ್ಷಿ ದೇವಿ ಅಲಂಕಾರ ನಡೆದಿದೆ. ಅಭಿಷೇಕ ನಡೆದಿದೆ. ಶ್ರಾವಣದ ನಾಲ್ಕು ಶುಕ್ರವಾರ ವಿಶೇಷ ಅಲಂಕಾರ ನಡೆಯಲಿದೆ. ಇಂದು ಮೊದಲ ಶ್ರಾವಣ ಶುಕ್ರವಾರವಾಗಿದೆ.
ನಾಗರಪಂಚಮಿ ಮತ್ತು ಮೊದಲನೇ ಶ್ರಾವಣ ಶುಕ್ರವಾರವಾದುದರಿಂದ ದೇವಸ್ಥಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇಙದು ಬೆಳಿಗ್ಗೆ 6-30ಕ್ಕೆ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ವತಿಯಿಂದ ನಾಗಕಟ್ಟೆ ಪೂಜೆ, ಅಮ್ಮನವರಿಗೆ ಅಭಿಷೇಕ ಅಲಂಕಾರ ನಡೆಯಲಿದೆ.
ನಂತರ ನಡೆದಿದ್ದೇ ಮೀನಾಕ್ಷಿ ದೇವಿಯ ಅಲಂಕಾರ. ದೇವಸ್ಥಾನದ ಅರ್ಚಕರಾದ ಅಮೃತ ಅಗಸ್ತ್ಯರಿಂದ ಪೂಜಾ ಕೈಂಕರ್ಯಗಳು ನಡೆದಿದೆ.