ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮಹಿಳೆಯೋರ್ವರಿಗೆ ಮುಂಬೈಪೊಲೀಸರೆಂದು ನಂಬಿಸಿ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಆರೋಪಿಸಿ 79,139 ರೂ. ವಂಚಿಸಿರುವ ಘಟನೆ ನಡೆದಿದೆ.
ಶಿವಮೊಗ್ಗದ ಮಹಿಳೆಗೆ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಗೆ ಕರೆಮಾಡಿ, ಅಪರಿಚಿತ ವ್ಯಕ್ತಿಯು ನಿಮಗೆ ಕೋರಿಯರ್ ಬಂದಿದೆ. 5 ಕೆಜಿ ಬಟ್ಟೆ, 4 ಪೆನ್ ಡ್ರೈವ್ ಮತ್ತು ಎಟಿಎಂ ಬಂದಿದೆ ಎಂದು ತಿಳಿಸಿದ್ದಾನೆ. ನಮಗೆ ಯಾವ ಕೋರಿಯರ್ ಮಾಡಿಲ್ಲ ಎಂದು ಮಹಿಳೆ ಉತ್ತರಿಸಿದ್ದಾರೆ.
ಅದು ಕಾನೂನು ಬಾಹಿರ ಕೋರಿಯರ್ ಆಗಿದೆ. ನೀವು ಪೊಲೀಸ್ ಠಾಣೆಗೆ ಭೇಟಿ ಮಾಡಬೇಕು. ಎಂದು ಆತನೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿ ಮುಂಬೈ ಪೊಲೀಸ್ ಎನ್ ಸಿಬಿಗೆ ಕರೆ ಮಾಡುವುದಾಗಿ ಹೇಳಿ ಯಾವನೋ ಪೊಲೀಸರೆಂದು ಮಾತನಾಡಿಸಿದ್ದಾನೆ. ಪ್ರದೀಪ್ ಪೊಲೀಸ್ ಎಂಬ ಐಡಿ ಕಾರ್ಡ್ ಕಳುಹಿಸಿ ವಿಡಿಯೋ ಕಾಲ್ ಮಾಡಿದ್ದಾನೆ
ಪೊಲೀಸ್ ಎಂದು ಹೇಳಿಕೊಂಡವ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕಾನೂನುಬಾಹಿರ ಚಟುವಟೆಕೆ ನಡೆದಿದೆ. ನಿಮಗೆ ಈತ ಗೊತ್ತ ಎಂದು ಯಾವನದೋ ಫೊಟೊ ತೋರಿಸಿದ್ದಾರೆ. ಆತ ಪರಿಚಯವಿಲ್ಲವೆಂದು ಮಹಿಳೆ ತಿಳಿಸಿದ್ದಾರೆ. ಈತನಿಂದಲೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಮಹಿಳೆಗೆ ನಂಬಿಸಿ ಅಕೌಂಟ್ ಗೆ 79,132 ರೂ ಕಳುಹಿಸಿ ಎಂದು ಹೇಳಿ ಅಕೌಂಟ್ ಗೆ ಹಣಹಾಕಿಸಿಕೊಂಡಿದ್ದಾರೆ.
ಹಣ ಹಾಕಿದ ಮಹಿಳೆಗೆ ಅನುಮಾನ ಬಂದು ವಾಪಾಸ್ ಮೊಬೈಲ್ ಗೆ ಬಂದ ಅಪರಿಚಿತನ ನಂಬರ್ ಗೆ ಕರೆ ಮಾಡಿದಾಗ ಕರೆಹೋಗದೆ ಇದ್ದಕಾರಣ ಮಹಿಳೆ ತುಂಗ ನಗರ ಪೊಲೀಸ್ ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ-https://www.suddilive.in/2024/08/blog-post_91.html