ಸಂಸದರ ವಿರುದ್ಧ ಪೆದ್ದ, ಹಡಬೆ ಹಾಗೂ ಭ್ರಷ್ಠ ಎಂದೆ ವಾಗ್ದಾಳಿ ಮುಂದು ವರೆಸಿದ ಸಚಿವ ಮಧು ಬಂಗಾರಪ್ಪ



ಸುದ್ದಿಲೈವ್/ಶಿವಮೊಗ್ಗ


ವಿಐಎಸ್ಎಲ್ ಕಾರ್ಖಾನೆಯನ್ನ ಮುಂದುವರೆಸುತ್ತಾರೆ ಎಂದು ನಂಬಿದ ಭದ್ರಾವತಿ ಜನಕ್ಕೆ ಸುಳ್ಳು ಹೇಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಸದರ ವಿರುದ್ಧ ವಾಗ್ದಾಳಿ ಮುಂದು ವರೆಸಿದ್ದಾರೆ. 


ಬಿಆರ್ ಪಿಯಲ್ಲಿ‌ಮಾತನಾಡಿದ ಅವರು , 15-20 ಸಾವಿರ ಜನ ಕಾರ್ಮಿಕರಿದ್ದ ಕಾರ್ಖಾನೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಈ ಕಾರ್ಖಾನೆ ಪುನಶ್ಚೇತನ ವಾಗಬೇಕೆಂಬ ಆಸೆಯಲ್ಲಿದ್ದ ಜನರಿಗೆ ಬಿಎಸ್ ವೈ ಮತ್ತು ಸಂಸದರ ರಾಘವೇಂದ್ರ ಹಸಿ ಸುಳ್ಳು ಹೇಳಿ ಮತಪಡೆದಿದ್ದಾರೆ ಎಂದು ದೂರಿದರು.


ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಕುಮಾರ ಸ್ವಾಮಿ ಕೇಂದ್ರದ ಸಚಿವರಾದಾಗ ಭದ್ರಾವತಿಗೆ ಕರೆಯಿಸಿ ಇನ್ನೇನು ಕಾರ್ಖಾನೆ ಆರಂಭಿಸಿ ಬಿಡುತ್ತಾರೆ ಎಂದು  ಆಸೆ ಹುಟ್ಟಿಸಿದ್ದರು. ಜೂ.30 ರಂದು ಬಂದಿದ್ದ ಕುಮಾರ ಸ್ವಾಮಿ ಅವರು ಏನೂ ಸಾಧಿಸಲು ಆಗಿಲ್ಲ. ಕಾರ್ಖಾನೆಯನ್ನ ಬಂಡವಾಳ ವಾಪಾಸ್ ಪಡೆಯುವಂತೆ ನಿರ್ಣಯ ಮಾಡಲಾಗಿದೆ. ಇದಕ್ಕೆ ಸಂಸದರು ಕಾರಣ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. 


ನೈಟ್ ಲ್ಯಾಂಡಿಂಗ್ ಆಗಿಲ್ಲ ಎಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಹಣಕೊಡಲಿಲ್ಲ. ನೈಟ್ ಲ್ಯಾಂಡಿಂಗ್ ಇಲ್ಲವೆಂದರೆ ಮುಚ್ಚಲಾಗುತ್ತದೆ ಎಂದು ಹೇಳುವ ಸಂಸದರ ವಿರುದ್ಧ ಗರಂ ಆದ ಸಚಿವರು ಯಾರು ವಿಮಾನ ನಿಲ್ದಾಣ ಮಾಡಲು ಹೇಳಿದ್ದು, ಕಮಲ ಇಡಕ್ಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಕುಮಾರ ಸ್ವಾಮಿ ಅವರು ಬಂದು ಹೋಗಿ ಒಂದು ತಿಂಗಳ ನಂತರ ವಿಐಎಸ್ಎಲ್ ಮುಚ್ಚುವ ಸ್ಥಿತಿಗೆ ಬಂದಿದೆ. ಎಂಪಿಎಂನ್ನೂ ನುಂಗಿ ನೀರು ಕುಡಿಯುವ ಕೆಲಸ ಆಗಬಿಡುತ್ತಿತ್ತು ಎಂಬ ಆತಂಕವನ್ನ ಹೊರಹಾಕಿದರು. 


ಯಾವಿದೇ ಸಾರ್ವಜನಿಕ ವಲಯವನ್ನ ಪುನಶ್ಚೇತನವನ್ನ ಮಾಡಲ್ಲ ಎಂದು ಲೋಕಸಭಾದಲ್ಲಿ ಕೇಙದ್ರ ಸಚಿವರು ಹೇಳಿದ್ದಾರೆ. ಮನವಿ ಯಾರಿಗೆ ಕೊಡಬೇಕು ಎಂಬುದು ಸಂಸದರನ್ನ ಪೆದ್ದ ಎಂದು ಕರೆದಿರುವ ಸಚಿವ ಹಡಬೆ ಹಣ ಹೊಡೆದು ಹಣ ಮಾಡುವುದನ್ನ ಕರಗತ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 


ಸಂಸದರು ಸುಳ್ಳು ಹೇಳಿ ಮತಹಾಕಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಿಜೇಂದ್ರ ಮಾತನಾಡಿರುವುದನ್ನ ಸರಿಪಡಿಸಿಕೊಳ್ಳಲಿ ನಂತರ ನನಗೆ ಹೇಳಲಿ ಎಂದ ಸಚಿವರು ವಾಗ್ದಾಳಿ ಮುಂದುವರೆಸಿದ್ದಾರೆ.  


ಮೂಡ ಹಗರಣ ಖಂಡಿಸಿ ಪಾದಯಾತ್ರೆ ನಡೆಸಿದ ಬಿಜೆಪಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಂದ ಮತ್ತು ಸಹೋದರರಿಂದ ಆಗಿರುವುದು ಶೂನ್ಯ ಸಾಧನೆಯಾಗಿದೆ. ಕೆಪಿಎಸ್ ಶಾಲೆ ಯೋಜನೆಗಳನ್ನ ಸಂಪೂರ್ಣ ಮಾಡಿದ್ದೇನೆ. ಶಿಕ್ಷಕಿಯರನ್ನ ನೇಮಿಸಿಕೊಂಡಿದ್ದೇವೆ. ನಿಮ್ಮ ಸಾಧನೆ ಶೂನ್ಯ ಎಂದು ದೂರಿದರು. 



ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಕೇಂದ್ರ ಸಚಿವರು ಸಂಸತ್ ನಲ್ಲಿ ರಾಜ್ಯ ಸರ್ಕಸರದ ಸಹಭಾಗಿತ್ವ ನೀಡುತ್ತಿಲ್ಲ ಹಾಗಾಗಿ ಕಾರ್ಖಾನೆಯನ್ನ ಮುಂದು ವರೆಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಈ ಸುಳ್ಳಿಗೆ ಸ್ಥಳೀಯ ಸಂಸದರು ಕಾರಣ ಏಜೆಂಟಾಗಿ ಕೆಲಸ ಮಾಡಿದ್ದಾರೆ ಹಾಗಾಗಿ ಆ ಉತ್ತರ ಬಂದಿದೆ ಎಂದರು. 


500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕಮಿಷನ್ ಹೊಡೆದಾಗಿದೆ. ಈಗ ರಾಜ್ಯ ಸರ್ಕಾರ ಹಣ‌ಹಾಕಲಿ ಎಂದರೆ ಹೇಗೆ ಆಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.  ವಿಮಾನ ನಿಲ್ದಾಣ ಕ್ಲೋಸ್ ಆಗಲು ಕಾಂಗ್ರೆಸ್ ಕಾರಣ ಎಂಬ ಸಂಸದರ ಹೇಳಿಕೆಗೆ ಉತ್ತರಿಸಿದ ಮಧು ಬಂಗಾರಪ್ಪ, ಮೊದಲು ಕಂಟ್ರಾಕ್ಟರ್ ಗೆ ಹಣ ಬಾಕಿ ಇದೆ. 103 ಕೋಟಿ ಹಣ ಬಾಕಿ ಇದೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ದೂರಿದರು. 


ಏರ್ ಪೋರ್ಟ್ ಉದ್ಘಾಟನೆಗೆ 21 ಕೋಟಿ  ಹಣ ವ್ಯಯ ಮಾಡಲಾಗಿದೆ. ಎಲ್ಲಿ ಹೊಕ್ಕಂಡಿದ್ದೀರಿ ಬರ್ರಿ ಇಲ್ಲಿ. ನೈಟ್ ಲ್ಯಾಂಡಿಂಗ್ ಮಾಡಿಲ್ಲ ಎಂದಿದ್ದೀರಿ ಬರಿ ಮಾತನಾಡಿ ಎಂದು ಸವಾಲು ಎಸೆದಿದ್ದಾರೆ. 


ಅಂಜನಾಪುರಬ್ಯರೇಜ್ ನಿಂದ ನೀರು ಬೇಸಿಗೆಯಲ್ಲಿ ಕುಡಿಯುವ‌ ನೀರಿನ ಸಮಸ್ಯೆಯಾಗಲಿದೆ ತುಂಗ ಏತ ನೀರವರಿಯಿಂದ ನೀರೆ ಬರಲಿಲ್ಲ. ಅದನ್ನ ನಾವು ಮತ್ತೆ ಹಣ ವ್ಯಯಮಾಡಿ ನೀರು ಉಣಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು