ಸುದ್ದಿಲೈವ್/ಶಿವಮೊಗ್ಗ
ಕೂಡಲಿ ಮಠದ ಶಾರದಾಂಬೆ ದೇವಿಗೆ ಮಾಡಿಸಿರುವ ಚಿನ್ನದ ಪಾದುಕೆಗಳು ಕಳವಾಗಿದ್ದು ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಠದ ರಮೇಶ್ ಹುಲ್ಮನಿಯವರು ದೂರು ದಾಖಲಿಸಿದ್ದಾರೆ.
ಕೂಡ್ಲಿ ಶ್ರೀಮಠದಲ್ಲಿ ಪರಂಪರಗತವಾಗಿ ಬಂದಿರುವ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಯು (ಒಂದು ದೊಡ್ಡ ವಿ ಮುದ್ರೆ ಇನ್ನೊಂದು ಸಣ್ಣ ಮುದ್ರೆ ಜೊತೆಗೆ ಶ್ರೀ ಮನ್ನಾರಾಯಣ ಸ್ಮೃತಯ ಅನ್ನುವ ಬೆಳ್ಳಿಯ ಸೀಲು) ಸುರಕ್ಷಿತವಾಗಿ ಬಿರುವಿನಲ್ಲಿಡಲಾಗಿತ್ತು, ಆ.08 ರಂದು ಶ್ರೀಮಠದ ಭಕ್ತರೋರ್ವರು ಪೂಜೆಗೆ ಎಂದು ಬೀಗ ಕೇಳಿದಾಗ ಪೀಠಾಧಿಪತಿಗಳಾದ ಶ್ರೀಮಹಾಸ್ವಾಮಿಗಳ ಬಳಿ ಇದ್ದ ಬೀಗವನ್ನು ಉಪಯೋಗಿಸಿ ತೆಗೆಯಲು ಹೋದಾಗ ಆ ಬೀಗವು ಬಳಸಲು ಬಾರದೆ ಇರುವುದು ಕಂಡು ಬಂದಿದೆ.
ನಂತರ ಶ್ರೀ ಮಠದ ಅರ್ಚಕರು ಇದರ
ಬೀಗದ ಕೈ ಇಲ್ಲಿ ಇದೆ ಎಂದು ತಂದು ಕೊಟ್ಟಿರುತ್ತಾರೆ. ನಂತರ ರಮೇಶ್ ಹುಲಮನಿಯವರು ತಾವು ಬೀರುವನ್ನು ತೆಗೆದಾಗ ಸುವರ್ಣ ಪಾದುಕೆಯು ಇರಲಿಲ್ಲ.
ಕಳೆದ ವರ್ಷ ಜುಲೈ 23 ರಿಂದ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳವರು ಹಿಂದಿನ ಚಾರ್ತುಮಾಸ ಹಾಗೂ ನಂತರ ದಿನಗಳಲ್ಲಿ ಅನಾರೋಗ್ಯದ ನಿಮಿತ್ತವಾಗಿ ದಾವಣಗೆರೆಯ ಶಾಖ ಮಠದಲಿ ಹಾಗೂ ಬೆಂಗಳೂರು ನಗರದಲ್ಲಿ ವಾಸವಾಗಿದ್ದರು. ಈ ನಡುವೆ ಸ್ವಾಮಿಗಳ ಖಾಸಗಿ ಉಪಯೋಗದ ದಾಸ್ತಾನು ಕೊಠಡಿ ಬೀಗವನ್ನು ಒಡೆದಿದ್ದು ತಿಳಿದು ಬಂದಿದ್ದರಿಂದ ಹುಲಮನಿಯವರು ಮೂರನೇ ದಿನದಂದು ಮಠಕ್ಕೆ ತೆರಳಿ ಬೇರೆ ಬೀಗವನ್ನು ಹಾಕಿ ಖಾತ್ರಿ ಪಡಿಸಿಕೊಂಡು ಬಂದಿರುತ್ತಾರೆ,
ಕಳೆದ ಎಂಟು ತಿಂಗಳಿಂದ ಶ್ರೀಗಳು ದಾವಣಗೆರೆಯ ಶಾಖ ಮಠದಲ್ಲಿ ಇದ್ದಿದ್ದು ಈ ಮಠದಲ್ಲಿ ಯಾವುದೇ ಆಗು ಹೋಗುವ ವಿಚಾರ ತಮ್ಮ ಗಮನಕ್ಕೆ ಬಂದಿರುವುದಿಲ್ಲ. ನಂತರ ಚಾರ್ತುಮಾಸ ಕಾರ್ಯಕ್ರಮ ನಿಮಿತ್ತ ದಿನಾಂಕ:20/07/2024 ರಂದು ಶ್ರೀ ಮಠಕ್ಕೆ ಬಂದು ವಾಸ್ತವ್ಯವಿದ್ದರು.
ಆಗ ಶಾರದಂಬ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಬ್ಯಾಂಕಿಗೆ ಪಾವತಿ ಮಾಡುವ ಸಮಯ ಮೀರಿದ್ದರಿಂದ ಸದರಿ ಹಣವನ್ನು ಬೀರುವಿನಲ್ಲಿ ಇಡುವಂತೆ ಹೇಳಿ ತಮ್ಮ ಬಳಿ ಇದ್ದ ಬಿರುವಿನ ಬೀಗವನ್ನು ಕೊಟ್ಟಿರುತ್ತಾರೆ. ಆದರೆ ಆ ಬೀಗದ ಕೈಯಿಂದ ಬೀರು ತೆಗೆಯಲು ಆಗಿರುವುದಿಲ್ಲ.
ಆಗ ಮಠದ ಆರ್ಚಕರಾದ ದತ್ತಾತ್ರಿಶಾಸ್ತ್ರಿ ರವರು ಈ ಬೀಗದ ಕೈಯಿಂದ ಬೀರು ಬೀಗ ತೆಗೆಯಿರಿ ಎಂದು ತಮ್ಮ ಬಳಿ ಇದ್ದ ಬೀಗದ ಕೈಯನ್ನು ಕೊಟ್ಟರು ಅದೇ ಬೀಗದ ಕೈಯಿಂದ ಬೀರು ಬೀಗ ತೆಗೆದು ಹಣ ಇಟ್ಟು ಬೀಗ ಹಾಕಲಾಗಿದೆ.
ಆಗ ಶ್ರೀಗಳಿಗೆ ಸಂಶಯ ಬಂದು ಉಳಿದೆರಡು ಬಿರುವಿನ ಬೀಗವನ್ನು ತೆಗೆಸಿನೋಡಿದಾಗ ಬಿರುವಿನಲ್ಲಿಟ್ಟಿದ್ದ ಬಂಗಾರದ ಎರಡು ಪಾದುಕೆಗಳು ಕಾಣೆ ಆಗಿದ್ದು ಕಂಡು ಬಂದಿರುತ್ತದೆ. ನಂತರ ಎಲ್ಲಾರು ಹುಡುಕಾಡಿದರೂ ಅವು ಸಿಕ್ಕಿರುವುದಿಲ್ಲ ಈ ಬಗ್ಗೆ ಗುರುಗಳೊಂದಿಗೆ ಚರ್ಚಿಸಿ ತಡವಾಗಿ ಈದಿನ ಕಾಣೆಯಾಗಿರುವ ಸುಮಾರು ಅಂದಾಜು 1 ಕೆ.ಜಿ 50 ರಿಂದ 60 ಲಕ್ಷ ಮೌಲದ ಬಂಗಾರದ ಪಾದುಕೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೊಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.