ಮಂಗಳವಾರ, ಆಗಸ್ಟ್ 13, 2024

ರಾಷ್ಟ್ರಭಕ್ತ ಬಳಗದ ವತಿಯಿಂದ ಹಕ್ಕೋತ್ತಾಯದ ಪ್ರತಿಭಟನಾ ಮೆರವಣಿಗೆ

 


ಸುದ್ದಿಲೈವ್/ಶಿವಮೊಗ್ಗ


ರಾಷ್ಟ್ರಭಕ್ತರ ಬಳಗದ ಸಂಚಾಲಕ ಈಶ್ವರಪ್ಪ ನೇತೃತ್ವದಲ್ಲಿ ದೈವಜ್ಞ ಕಲ್ಯಾಣ ಮಂದಿರದಿಂದ ಆರಂಭಗೊಂಡ ಹಕ್ಕೊತ್ತಾಯದ ಪ್ರತಿಭಟನೆ ನಗರದ ರಾಜಬೀದಿಗಳಲ್ಲಿ ಸಂಚರಿಸಿ ಮಹಾನಗರ ಪಾಲಿಕೆ ತಲುಪಿದೆ. ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಕೆಳಗೆ ಪ್ರತಿಭಟನಾಕಾರರು ಧರಣಿ ಕುಳಿತಿದ್ದಾರೆ.


ಗೋವಿಂದಾಪುರ ಆಶ್ರಯ ಮನೆಗಳನ್ನ ಪೂರ್ಣಗೊಳಿಸಬೇಕು. ವಿದ್ಯುತ್, ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕಟ್ಟಡ ಕಾರ್ಮಿಕರು ಮತ್ತು ಇನ್ನಿತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು.


ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬರಬೇಕಿದ್ದ ಅನುದಾನವನ್ನ ಕೂಡಲೇ ಬಿಡುಗಡೆಗೊಳಿಸಬೇಕು. ಪರಿಶಿಷ್ಟ ಜಾತಿ/ಪಂಗಡ ಕಾಲೋನಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ ಪರಿಚಯ ಪತ್ರ, ಹಕ್ಕು ಪತ್ರ, ಅಗತ್ಯ ವಿರುವಲ್ಲಿಪಹಣಿ ವಿತರಿಸಬೇಕು.


ಶಿವಮೊಗ್ಗ ನಗರದಲ್ಲಿ ಕಲುಷಿತ ಕುಡಿಯುವ ನೀರಿನ ಸರಬರಾಜು, ಹದಗೆಟ್ಟ ರಸ್ತೆ, ಕಸವಿಲೆವಾರಿಯ ವಿಳಂಬ, ಕುಂಠಿತಗೊಂಡ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಮರುಜೀವ‌ ನೀಡಲು ಶೀಘ್ರವಾಗಿ ಪಾಲಿಕೆಗೆ ಚುನಾವಣೆಯನ್ನ ನಡೆಸಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ  ಅವಕಾಶ ಕಲ್ಪಿಸಬೇಕು ಎಂಬ  ಹಕ್ಕೋದಯ ಮಾಡಲಾಗಿದೆ.



ಪ್ರತಿಭಟನೆಯಲ್ಲಿ ಕೆ.ಈ.ಕಾಂತೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗ ಶಾಸ್ತ್ರಿ, ಪಾಲಿಕೆಯ ಮಾಜಿ ಸದಸ್ಯರಾದ ಇ.ವಿಶ್ವಾಸ್, ಶಂಕರ್ ಗನ್ನಿ, ಮಾಜಿ ನಗರ ಸಭೆ ಅಧ್ಯಕ್ಷ ಶಂಕರ್, ಆ.ಮ.ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ