ಶಿವಾಲಯದಲ್ಲಿ ನಡೆದ ಶಿವಧೀಕ್ಷೆ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ


ನಗರದ ವಿನೋಬ ನಗರದ ಶಿವಾಲಯದಲ್ಲಿ ಬಾಳೆಹೊನ್ನೂರು ಶಾಖಾ ಮಠದ ಸ್ವಾಮಿಜಿ ರೇಣುಕಾ ಶಿವಾಚಾರ್ಯ ಹಾಗೂ  ತಾವರೆಕೆರೆ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿಗಳಿಂದ ಉಚಿತ ಸಾಮೂಹಿಕ ಧೀಕ್ಷೆ ಕಾರ್ಯಕ್ರಮ ನಡೆದಿದೆ.  


ಹೆಚ್ ಪಾರ್ವತಮ್ಮನವರಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ 100 ಜನರು ಶಿವಧೀಕ್ಷೆ ಪಡೆದಿದ್ದಾರೆ. ಪಾರ್ವತಮ್ಮನ ತಾಯಿಯವರು ಇಷ್ಟದಂತೆ,  ಜಂಗಮರು ಮತ್ತು ವೀರಶೈವರು ಒಂದೇ ಎಂದು ಸಾರಲು ಈ ಶಿವಧೀಕ್ಷೆ ವೇದಿಕೆ ಸಾಕ್ಷಿಯಾಗಿದೆ.  


ವೀರ ಶೈವ ಪರಂಪರೆಯಲ್ಲಿ ಧಾರ್ಮಿಕ ಸಂಸ್ಕಾರಕ್ಕೆ ಹೆಚ್ಚು ಒತ್ತುನೀಡಲಾಗಿದೆ, ಶಿವಧೀಕ್ಷೆಯನ್ನ ತಾಯಿಗರ್ಭದಲ್ಲಿರುವಾಗಲೇ ಧಾರಣೆಯಾಗುತ್ತದೆ.  8 ನೇ ತಿಂಗಳಲ್ಲಿ ಧೀಕ್ಷೆ ನೀಡಲಾಗುತ್ತದೆ. ನಂತರ 8 ವರ್ಷ ತುಂಬಿದ ನಂತರ ಎರಡೂ ಧೀಕ್ಷೆ ನೀಡಲಾಗುತ್ತದೆ. ಮಠದೀಶರಿಂದ ಧೀಕ್ಷೆ ನೀಡಲು ಮಹತ್ವ ನೀಡಲಾಗಿದೆ. 


ಧೀಕ್ಷೆ ಪಡೆದವನು  ತ್ರಿಕಾಲ ಪೂಜೆ ನಡೆಸಬೇಕು ಎರಡು ಹೊತ್ತಾದರೂ ಪೂಜೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಮೂರು ಹೊತ್ತಿನ ಪೂಜೆ ಮಾಯವಾಗಿರುವುದರಿಂದ ಸರಳೀಕರಣಿಸಲಾಗಿದೆ. ಕೊರಳಲ್ಲಾದರೂ ಲಿಂಗಧಾರಿಯಾಗಬೇಕು ಎಂಬ ನಿಯಮವಿದೆ.  ಲಿಂಗಾಧಾರಿ ಸದಾಶುಚಿಃ ಎಂಬ ಸಿದ್ದಾಂತ ಶಿಖಾಮಣಿಯಲ್ಲಿ ಬರೆಯಲಾಗಿದೆ. ಬೇರೆಯವರು ಮುಟ್ಟಿದರೆ ಆತ ಪವಿತ್ರನಾಗುವ ನಂಬಿಕೆ ಇದೆ. 


ಶಿವ ಧೀಕ್ಷೆಯ ವೇಳೆ ಗುರುಗಳಿಂದ ಶಿವಪಂಚಾಕ್ಷರಿ ಮಂತ್ರ ಪಠನವಾಗಿರುತ್ತದೆ. 7 ಕೋಟಿ ಮಂತ್ರದಲ್ಲಿ ಶಿವಪಂಚಾಕ್ಷರಿ ಮಂತ್ರ  ಶ್ರೇಷ್ಠವಾಗಿದ್ದು, ಜೀವಪಡೆಯುವನಿಂದ ಹಿಡಿದು ಜೀವ ತ್ಯಜಿಸುವ ವರೆಗೂ ಲಿಂಗಧಾರಣೆ ಜೊತೆಗೆ ಇರುವುದರಿಂದ ಲಿಂಗಾಯಿತ ಸಮುದಾಯಕ್ಕೆ ಈ ಲಿಂಗಧಾರಣೆ ಮಹತ್ವ ಎನಿಸಿಕೊಂಡಿದೆ.‌ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು