ಕಟ್ಟಡ ಕಾರ್ಮಿಕರ ಹಕ್ಕೊತ್ತಾಯದ ಬೃಹತ್ ಬೈಕ್ ರ್ಯಾಲಿ



ಸುದ್ದಿಲೈವ್/ಶಿವಮೊಗ್ಗ


ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶಿವಮೊಗ್ಗ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. ನಂತರ  ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರನ್ನ, ಜಿಲ್ಲಾಧಿಕಾರಿಗಳನ್ನ  ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.‌ 


ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಎಮ್ಆರ್ ಎಸ್, ಬೈಪಾಸ್ ರಸ್ತೆ, ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ವಿನೋಬ ನಗರ, ಉಷಾ ನರ್ಸಿಂಗ್ ಹೋಂ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ.  ಶಿವಮೊಗ್ಗ ಜಿಲ್ಲೆಗೆ ಅಂತರ ರಾಜ್ಯದಿಂದ ಕಾರ್ಮಿಕ ಕೆಲಸಕ್ಕೆ ಎಂದು ಆಗಮಿಸಿರುವ ಕಾರ್ಮಿಕರ ಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಠಾಣೆಯ ವ್ಯಾಪ್ತಿಯಲ್ಲಿ ಪಡೆಯುವ ಕುರಿತು ಮನವಿ ಸಲ್ಲಿಸಲಾಯಿತು. 


ಮನವಿಯಲ್ಲಿನ ಬೇಡಿಕೆಗಳು


1. ಅಂತರ ರಾಜ್ಯದಿಂದ ಕೆಲಸಕ್ಕೆ ಬಂದವರು ಅವರು ಪೂರ್ವಪರ ಯಾವುದೇ ಮಾಹಿತಿ ನೀಡದೆ ಕೆಲವೇ ಕೆಲವು ದಿನ ಕೆಲಸ ಮಾಡಿ ಅಲ್ಲಿಂದ ಸಾಲ ಮಾಡಿ ಕೈಗೆ ಸಿಕ್ಕುವ ವಸ್ತುಗಳನ್ನು ತೆಗೆದುಕೊಂಡು ಹೇಳದೇ ಕೇಳದೆ ಹೋಗುತ್ತಿರುವುದು  ಕುರಿತು.


2.  ಅಂತರ ರಾಜ್ಯದಿಂದ ಕೆಲಸಕ್ಕೆ ಬರುವವರು ಆ ರಾಜ್ಯದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಇಲ್ಲಿ ಕೆಲಸ ಮಾಡಲು ಯಾವುದೇ ಮಾಹಿತಿ ನೀಡದೆ ಇರುವುದರ ಕುರಿತು.


3.  ಸ್ಥಳೀಯವಾಗಿ ಕೆಲಸ ಮಾಡುವಾಗ ಪುರುಷರು ಸ್ಥಳೀಯ ಸ್ತ್ರೀಯರನ್ನು ವರಿಸುವುದು ಹಾಗೂ ಪುಸಲಾಯಿಸಿ ಕರೆದುಕೊಂಡು ಹೋಗುತ್ತಿರುವುದರ ಕುರಿತು.


4.  ನಗರದಲ್ಲಿ ಕಟ್ಟಡ ಕಾಮಗಾರಿ ಮಾಡುವವರು ಕೆಲವು ದಿನಗಳು ಕೆಲಸ ಮಾಡಿ ಬೆಲೆಬಾಳುವ ಮಿಷನರಿ ವಸ್ತುಗಳನ್ನು ಕಳ್ಳತನ ಮಾಡುತ್ತಿರುವುದರ ಕುರಿತು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close