ಕೆಪಿಟಿಸಿಎಲ್ ಅಧಿಕಾರಿಯ ರಾದ್ಧಾಂತ ಪ್ರಕರಣ ಆಗಿದ್ದೇನು?

 


ಸುದ್ದಿಲೈವ್/ಬೆಂಗಳೂರು


ನಿನ್ನೆ ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅವರ ಮುಂದೆ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಒಬ್ಬರು ಕೈ ಮುಗಿದು ಬೇಡಿಕೊಂಡ ಪ್ರಕರಣ ಬುಗೆಲೆದ್ದಿತ್ತು. ಈ ಪ್ರಕರಣ ಇಂದು ನ್ಯಾಯಾಲಯ ಮುಕ್ತಾಯಗೊಳಿಸಿದೆ. 



ನಿನ್ನೆ ಸಾಗರದ ಶಾಸಕರು ಮತ್ತು ಪೊಲೀಸರ ದೌರ್ಜನ್ಯವೆಸುಗುತ್ತಿದ್ದಾರೆ. ನನಗೆ ರಕ್ಷಣೆ ನೀಡಬೇಕೆಂದು ಹೈಕೋರ್ಟ್ ನಲ್ಲಿ ಅರ್ಜಿಯನ್ನೇ ಹಾಕದೆ ರಾದ್ದಾಂತ ಮಾಡಿದ್ದ ಕೆಪಿಟಿಸಿಎಲ್ ನ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅವರ ಪ್ರಕರಣ ಠುಸ್ ಆಗಿದೆ. 


ನಿನ್ಬೆ ರಾದ್ದಾಂತ ನಡೆಸಿದ್ದ ಅಧಿಕಾರಿಗೆ ಅಭಯಹಸ್ತ ನೀಡಿದ ನ್ಯಾಯಾಲಯ ಇಂದು ವಿಚಾರಣೆ ನಡೆಸಿದ್ದಾರೆ.  ನ್ಯಾಯಮೂರ್ತಿಗಳು ಪೊಲೀಸರ ಸ್ಪಷ್ಟೀಕರಣ ಪಡೆದುಕೊಂಡಿದ್ದಾರೆ. ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರದ ಡಿವೈಸ್ಪಿ ಅವರು ಸಿಸಿ ಟಿವಿ ಫೂಟೇಜ್ ಮತ್ತು ಅಬಕಾರಿ ಇಲಾಖೆಗೆ ಶಾಂತಕುಮಾರ ಸ್ವಾಮಿ ಕರೆ ಮಾಡಿ ಗಾಂಜಾ ಪ್ರಕರಣ ಫಿಕ್ಸ್ ಮಾಡಲು ತಿಳಿಸಿರುವ ಆಡಿಯೋ ಸಹವನ್ನ ದಾಖಲಾತಿಯಾಗಿ ನೀಡಿದ್ದಾರೆ. 


ಒಂದು ಹಂತದಲ್ಲಿ ನ್ಯಾ.ನಾಗಪ್ರಸನ್ನ ಅವರು ಇಂಜಿನಿಯರ್ ಗೆ ಖಡಕ್ ಎಚ್ಚರಿಕೆ ನೀಡಿರುವುದಾಗಿ ಸಹ ತಿಳಿದು ಬಂದಿದೆ. ಅರ್ಜಿ ಹಾಕಿಕೊಂಡು ಬನ್ನಿ ಎಂದು ಸಹ ತಿಳಿಸಿರುವುದಾಗಿ ತಿಳಿದು ಬಂದಿದೆ. 


ಶಾಂತಕುಮಾರ ಸ್ವಾಮಿ ಅವರನ್ನ ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಯುವತಿಯ ಮನೆಯ ಅಂಗಳದಲ್ಲಿ ಗಾಂಜಾ ಗಿಡ ಬಿಸಾಗಿ ಬಂದು ಅಬಕಾರಿ ಇಲಾಖೆಗೆ ಕರೆ ಮಾಡಿ ರೈಡ್ ಮಾಡಲು ತಿಳಿಸಿದ್ದನು. ಈ ವಿಚಾರದಲ್ಲಿ ಆತನನ್ನ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಶಾಂತಕುಮಾರ್ ಬಿಡುಗಡೆ ಸಹ ಆಗಿದ್ದು ನಿನ್ನೆ ಹೈಕೋರ್ಟ್ ನ ನ್ಯಾಯಮೂರ್ತಿಗಳ ಮುಂದೆ ರಾದ್ದಾಂತ ನಡೆಸಿ ಶಾಸಕ ಮತ್ತು ಪೊಲೀಸರ ಬಗ್ಗೆನೂ ಆರೋಪ ಮಾಡಿದ್ದನು. ಆದರೆ ಪ್ರಕರಣ ಇಲ್ಲಿಗೆ ಮುಗಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close