ಸುದ್ದಿಲೈವ್/ಶಿವಮೊಗ್ಗ
ಐವಾನ್ ಅಲ್ಲ ಹೈವಾನ್ ಡಿಸೋಜ ಎಂದು ಎಂಎಲ್ ಸಿ ಐವಾನ್ ಡಿಸೋಜರ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶಕ್ಕಾಗಿ ಸ್ವಾತಂತ್ರ್ಯ ತರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿದೆ. ಈ ಪಕ್ಷದ ಎಂಎಲ್ ಸಿ ಹೈವಾನ್ ಡಿಸೋಜಾ ತಮ್ಮ ಪಕ್ಷಕ್ಕೆ ಮಸಿಬಳಿದಿದ್ದಾರೆ. ರಾಹುಲ್ ಗಾಂಧಿ ಮತ್ತಿತರ ನಾಯಕರು ಇದನ್ನ ಇದುವರೆಗೂ ಖಂಡಿಸಿಲ್ಲವೆಂದು ಕಿಡಿಕಾರಿದರು.
ಇಡೀ ದೇಶದ ನಾಯಕರನ್ನ ತಲೆ ತಗ್ಗಿಸುವ ಪ್ರಯತ್ನವನ್ನ ಐವಾನ್ ಮಾಡಿದ್ದಾರೆ. ಅವರನ್ನ ಎಂ ಎಲ್ ಸಿ ಸ್ಥಾನ ಕಿತ್ತು ಹಾಕಬೇಕಿತ್ತು. ರಾಷ್ಟ್ರದ್ರೋಹ ಪ್ರಕರಣದಲ್ಲಿ ಅವರನ್ನ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಈ ದೇಶ ಎಲ್ಲರನ್ನೂ ಸಹಿಷ್ಣುತೆ ಮೆರೆದಿದೆ. ಬಾಂಗ್ಲಾದಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ಅಲ್ಲಿ ಯಾವ ದಂಗೆ ಏಳಲಿಲ್ಲ. ಈಗಿನ ಬಾಂಗ್ಲಾ ಪ್ರಧಾನಿ ಹಿಂದೂಗಳ ಕ್ಷಮೆಕೇಳಿದ್ದಾರೆ. ಆದರೆ ಹೈವಾನ್ ಬಾಂಗ್ಲಾ ದಂಗೆಯನ್ನ ಅಧಿಕಾರ ಉಳಿಸಿಕೊಳ್ಳಲು ಹೇಳಿಕೆ ಕೊಡುತ್ತಿದ್ದಾರೆ.
ಯಾರು ಬಾಂಗ್ಲಾ ದಂಗೆ ಪರ ಮಾತನಾಡಿ ದೇಶಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಲಿದೆ ಎನ್ನತಾರೋ ಅವರೆಲ್ಲ ದೇಶದ್ರೋಹಿಗಳು ಕೃಷ್ಣ ಬೈರೇಗೌಡರೂ ಸೇರಿದಂತೆ ಎಂದು ಕಿಡಿಕಾರಿದರು.
ಬಾಂಗ್ಲಾದಲ್ಲಿ ಕ್ರಿಶ್ಚಿಯನ್, ಬೌಧ್ಧ, ಹಿಂದೂ ಸಿಖ್ ಸಾಯಿಗಳಾದ ಅಲ್ಲಿನ ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ, ಹಿಂಸೆ ಮಾಡಲಾಗಿದೆ. ಇಂತಹ ಕೃತ್ಯವನ್ನ ಭಾರತದಲ್ಲಿ ಮಾಡಲಾಗುವುದು ಎಂದು ಹೇಳಿರುವ ಐವಾನ್ ಡಿಸೋಜಾರನ್ನ ಪಕ್ಷದಿಂದ ವಜಾಗೊಳಿಸಬೇಕು ಎಂದರು.