ಶನಿವಾರ, ಆಗಸ್ಟ್ 3, 2024

ಜನಾನುರಾಗಿ ಸಿಎಂ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರೆ ಸುಮ್ಮನಿರೊಲ್ಲ



ಸುದ್ದಿಲೈವ್/ಶಿವಮೊಗ್ಗ


ಅಲೆಮಾರಿ ಜನಾಂಗ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಮೂಲಸೌಕರ್ಯ ಕಳೆದುಕೊಳ್ಳುತ್ಯಿವೆ ಎಂದು ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಸಂಘಟನೆಯ ಚಾವುಡಿ ಲೋಕೇಶ್ ಆತಂಕ ವ್ಯಕ್ತಪಡಿಸಿದ್ದಾರೆ.


ಸದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಗತೀಕರಣದ ಹೊಡೆತಕ್ಕೆ ಸಮುದಾಯ ನಗರಕ್ಕೆ ವಲಸೆ ಬಂತು. ಸಿಳ್ಳಕ್ಯಾತೆ, ಬುಡಗ ಜಂಗಮ, ಗೋಸಂಗಿ ಮೊದಲಾದ ಜಾತಿಗಳು ಮೀಸಲಾತಿ ಇದ್ದರೂ ಸಹಕಾರ ಪಡೆಯಲಾಗಿಲ್ಲ. ಕೆಲ ಸಮುದಾಯ ಅಲೆಮಾರಿ ಜನಾಂಗ ಎಂದು ಅಲೆಮಾರಿ ಆಯೋಗವನ್ನ ರಚಿಸಿ ಪ್ರತ್ಯೇಕ ಮೀಸಲಾತಿಯನ್ನ ಸಿದ್ದರಾಮಯ್ಯ ನೀಡಿದ್ದಾರೆ. 


ಇಂತಹ ಮುಖ್ಯಮಂತ್ರಿಗಳ ವಿರುದ್ಧ ವಿಪಕ್ಷಗಳು ಆರೋಪಿಸುವ ಮೂಲಕ ವಿಚಾರಣೆಗೆ ಒಳಪಡಿಸಲು ಮುಂದಾಗಿವೆ. ಇದು ಖಂಡನೀಯ. ಇದು ಮುಂದು ವರೆದರೆ ಬೀದಿಗಿಳಿದು ವಿಪಕ್ಷಗಳವಿರುದ್ಧ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು. 

ಇದನ್ನೂ ಓದಿ-https://www.suddilive.in/2024/08/blog-post_3.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ