ಶುಕ್ರವಾರ, ಆಗಸ್ಟ್ 9, 2024

ಸಕುಟುಂಬ ಸಮೇತರಾಗಿ ಠಾಣೆಗೆ ತೆರಳಿ ಪೊಲೀಸರನ್ನ ಸನ್ಮಾನಿಸಿದ ಶಿಕ್ಷಕಿ



ಸುದ್ದಿಲೈವ್/ಶಿವಮೊಗ್ಗ


KSRTC ಬಸ್ ನಲ್ಲಿ ಪ್ರಯಾಣಿಸುವಾಗ ಬಂಗಾರದ ಒಡವೆಯನ್ನ ಕಳೆದುಕೊಂಡಿದ್ದ ಶಿಕ್ಷಕಿಯ ಚಿನ್ನಾಭರಣವನ್ನ ದೊಡ್ಡಪೇಟೆ ಪೊಲೀಸರು ಕಾನೂನಾತ್ಮಕವಾಗಿ ಹಿಂದಿರುಗಿಸಿದ್ದರು. ಕಳೆದ ವಸ್ತುವನ್ನ ವಾಪಾಸ್ ಕೊಡಿಸಿದ್ದಕ್ಕೆ ದೊಡ್ಡಪೇಟೆ ಪೊಲೀಸರನ್ನೇ ನಾಗರ ಪಂಚಮಿ ದಿನ‌ ಠಾಣೆಗೆ ಬಂದು ಪೊಲೀಸರನ್ನ  ಸನ್ಮಾನಿಸಿರುವ ಅಪರೂಪದ ಘಟನೆ ಒಂದು ಕ್ಷಣ ಮಂತ್ರಮುಗ್ದರನ್ನಾಗಿಸಿದೆ‌ 


ಖಾಸಗಿ ಶಾಲೆಯ ಶಿಕ್ಷಕಿ ಶೋಭಾಕುಮಾರಿ w/o ರಾಘವೇಂದ್ರ ರವರು  ಜೂನ್ 23 ರಂದು ತಮ್ಮ ಸಂಭಂದಿಕರ ಮದುವೆಗೆ ಮೈಸೂರಿಗೆ ಹೋಗಲು ಶಿವಮೊಗ್ಗ ksrtc ಬಸ್ ನಿಲ್ದಾಣಕ್ಕೆ ಬಂದು ಬಸ್ ಹಿಡಿದು  ಬಸ್ ನಲ್ಲಿ ಪ್ರಯಾಣ ಮಾಡುವಾಗ ಚಿನ್ನಾಭರಣ  ಕಳ್ಳತನವಾಗಿತ್ತು.‌ 


ಬರುವ ಸಣ್ಣಪುಟ್ಟ ಹಣದಲ್ಲಿ ಶಿಕ್ಷಕಿ 62 ಗ್ರಾಂ ಚಿನ್ನಾಭರಣವನ್ನ ಮಾಡಿಸಿಕೊಂಡಿದ್ದರು. ಈ ಆಭರಣವನ್ನ ಮಾಡಿಸುವಾಗ ಹಣಹೊಂದಿಸಿಕೊಂಡಿದ್ದ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಕ್ಷಣಾರ್ಧದಲ್ಲಿ ಮೈಮೇಲೆ ಇದ್ದ ಆಭರಣ ಕಳೆದು ಹೋಗುತ್ತೆ ಎಂದರೆ ಎಂಥಹವನಿಗೂ ಕಣ್ಣೀರು ತರಿಸುತ್ತೆ. 


ಆದರೆ ಕಳೆದ ಆಭರಣ ಮತ್ತೆ ಕೈಗೆ ಸಿಗುತ್ತೆ ಎಂಬ ಆಸೆ ಯಾರಲ್ಲೂ ಇರಲ್ಲ. ಅದೇ ಅನುಭವದಲ್ಲಿದ್ದ ಶಿಕ್ಷಕಿಗೆ  ದೊಡ್ಡಪೇಟೆ ಠಾಣೆ ಪೊಲೀಸರು ಆರೋಪಿತರನ್ನು ಬಂಧಿಸಿ ಯಥಾವತ್ತಾಗಿ ಬಂಗಾರದ ಒಡವೆ ಗಳನ್ನು ವಶಪಡಿಸಿ ಕೊಂಡಿದ್ದ ವಿಷಯ ಕೇಳಿದ ಶಿಕ್ಷಕಿಗೆ ಅದೇನೋ ಸಂಭ್ರಮ. ಅದೇನೋ ಸಂತೋಷ....


ಕಳೆದ ಆಭರಣವನ್ನ  ಶೋಭಕುಮಾರಿಯವರಿಗೆ ನ್ಯಾಯಾಲಯದ ಆದೇಶದಂತೆ ಚಿನ್ನಾಭರಣವನ್ನ ಬಿಡುಗಡೆ ಮಾಡಲಾಗಿತ್ತು.  ಭಾವನಾತ್ಮಕ ವಾಗಿ ಸ್ವೀಕರಿಸಿದ ಶಿಕ್ಷಕಿ ಇಂದು ಕುಟುಂಬ ಸಮೇತರಾಗಿ ಠಾಣೆಗೆ ಬಂದು ಚಿನ್ನಾಭರಣವನ್ನ  ಪತ್ತೆ ಮಾಡಿದ ಕಾರ್ಯವನ್ನು ಪ್ರಶಂಶಿಸಿ  ಪತ್ತೆ ಕಾರ್ಯದಲ್ಲಿ ತೊಡಗಿದ ಪೊಲೀಸರನ್ನ ಸನ್ಮಾನಿಸಿದ್ದಾರೆ. ತುಂಬು ಹೃದಯದಿಂದ ಥ್ಯಾಂಕ್ಸ್ ಹೇಳಿದ್ದಾರೆ. 


police job is thankless job ಅನ್ನೋ ಕಾಲದಲ್ಲಿ ಅವರ ಕೆಲಸವನ್ನು ಗುರುತಿಸಿ ಶಿಕ್ಷಕಿಯೊಬ್ಬರು ಕುಟುಂಬ ಸಮೇತರಾಗಿ ಠಾಣೆಗೆ ಬಂದು ಸನ್ಮಾನಿಸಿ ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ