ಎರಡು ಪ್ರತ್ಯೇಕ ಪ್ರಕರಣ-ಮಹಿಳೆ ಮತ್ತು ಯುವತಿಯ ತಂಟೆಗೆ ಹೋಗಿ ದೂರು ದಾಖಲಿಸಿಕೊಂಡವರು

 


ಸುದ್ದಿಲೈವ್/ಶಿವಮೊಗ್ಗ


ಮಹಿಳೆಯರ ರಕ್ಷಣೆ, ಭದ್ರತೆ ಬಗ್ಗೆ ಇಡೀ ದೇಶದಲ್ಲೆಡೆ ಚರ್ಚೆ ಆರಂಭವಾಗಿದೆ. ಈ ನಡುವೆ ಶಿವಮೊಗ್ಗದ ಮಹಿಳೆ ಮತ್ತು ಯುವತಿಯೊಂದಿಗಿನ ಅನುಚಿತ ವರ್ತನೆ ವಿಚಾರದಲ್ಲಿ ಒಂದೇ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.


ಮದುವೆಯಾಗಿ ಗಂಡನನ್ನ‌ ಕಳೆದುಕೊಂಡಿರುವ ಕಾಮಾಕ್ಷಿ ಬೀದಿ ಮಹಿಳೆ ಒಬ್ಬರಿಗೆ ಸಾವರ್ ಲೈನ್ ನಲ್ಲಿರುವ ದರ್ಶನ್ ಎಂಬುವನು ಮದುವೆಯಾಗು ಎಂದು ಕಾಡಿಸುತ್ತಿರುವುದಾಗಿ ಮಹಿಳೆ‌ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.


ದರ್ಶನ್ ಮಹಿಳೆ ಮನೆಗೆ ಬಂದು ಬಕೆಟ್ ನಿಂದ ಮನೆಗೆ ನೀರು ಹಾಕಿದ್ದು, ಆಗ ಮಹಿಳೆಯು ಮನೆಯಿಂದ ಹೆದರಿ ಸವಾರ್ ಲೈನ್ ರಸ್ತೆಯ ಎಸ್,ಎಸ್ ಪೇಟ್ ಎದುರು ನಡೆದುಕೊಂಡು ಹೋಗುವಾಗ  ಕಲಿನಿಂದ ಬೀಸಿ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿರುವುದಾಗಿ ದೂರಿನಲ್ಲಿ ದಾಖಲಾಗಿದೆ.  ಇದರಿಂದ ಪಿರ್ಯಾದಿಗೆ ರಕ್ತಗಾಯವಾಗಿದ್ದು,


ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಾಗಿದೆ.


ಇದೇ ರೀತಿ ಮತ್ತೊಂದು ಪ್ರಕರಣ ದಾಖಲಾಗಿದೆ. ಯುವತಿಯೋರ್ವಳ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಜೈಲಿನಲ್ಲಿದ್ದರೂ ಆತನ ಸಹಚರರಿಂದ ಕೇಸ್ ವಾಪಾಸ್ ಪಡೆಯುವಂತೆ ತೊಂದರೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.


ಯುವತಿಯೊಂದಿಗೆ ಅನುಚಿತ ವರ್ತನೆಯಲ್ಲಿ ದಸ್ತಗಿರ್ ಎಂಬಾತನ ವಿರುದ್ಧ ಈ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣದಲ್ಲಿ ದಸ್ತಗಿರ್ ಜೈಲು ಸಹ ಸೇರಿದ್ದಾನೆ.


ಆದರೆ ಆತನ ಸಹಚರರಾದ ಹಾರೂನ್, ಸಾಹೀಲ್, ತೋಫಿಕ್, ಅರ್ಬಾಜ್, ತನು ಹಾಗೂ ಸಲ್ಲು ಎಂಬುವರು ಯುವತಿ ಮತ್ತು ಯುವತಿ ಕುಟುಂಬಕ್ಕೆ ಧಮ್ಕಿ, ಹಣದ ಬೇಡಿಕೆ ಹಾಗೂ ಕೇಸ್ ವಾಪಾಸ್ ಪಡೆಯುವಂತೆ ಬೆದರಿಕೆ ಹಾಕಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಈ ವಿಚಾರವಾಗಿ ಯುವತಿಯ ಮಾವನಿಗೆ ಈ ಗ್ಯಾಂಗ್ ಎಫ್ಐಆರ್ ಹಿಂಪಡೆಯುವಂತೆ ಬೆದರಿಕೆ ಹಾಕಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು