ಬುಧವಾರ, ಆಗಸ್ಟ್ 21, 2024

ಸಿದ್ದರಾಮಯ್ಯನವರನ್ನ ಬಜಾವ್ ಮಾಡಲು ಕಾಂಗ್ರೆಸ್ ರಾಜ್ಯಪಾಲರ ಮೇಲೆ ಮುಗಿಬೀಳುತ್ತಿದೆ-ಮಹೇಶ್



ಸುದ್ದಿಲೈವ್/ಶಿವಮೊಗ್ಗ


ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 15 ತಿಂಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಮಹೇಶ್ ಕೊಳ್ಳೆಗಾಲ ಆರೋಪಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್  ಸ್ವಜ‌ನ ಪಕ್ಷಪಾತ ಮಾಡಿದೆ. ಎಸ್ ಸಿ ಎಸ್ ಟಿ ಮತಗಳನ್ನು ಪಡೆದು ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇರುವ ಹಣವನ್ನು ವಾಲ್ಮೀಕಿ ನಿಗಮದ ಹಣವನ್ನು ಖಾಸಗಿ ಬ್ಯಾಂಕ್ ಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದರು. 


ಇಲಾಖೆಯ ಮಂತ್ರಿ ಸಿಕ್ಕಿ ಹಾಕಿಕೊಂಡು ಜೈಲ್ಲಲ್ಲಿದ್ದಾರೆ. ಸ್ವತಃ ಸಿದ್ದರಾಮಯ್ಯ ನಿಗಮದ ಅವ್ಯವಹಾರ ಒಪ್ಪಿಕೊಂಡಿದ್ದಾರೆ. 187ಕೋಟಿ ಅಲ್ಲ ಕೇವಲ 87 ಕೋಟಿ ಭ್ರಷ್ಟಾಚಾರ ಅಂತಾ ಒಪ್ಪಿಕೊಂಡಿದ್ದಾರೆ. ಮುಡಾದಲ್ಲಿ ತಮ್ಮ ಪತ್ನಿ ಹೆಸರಿಗೆ 14 ನಿವೇಶನ ಪಡೆದುಕೊಂಡಿದ್ದಾರೆ. 


2022.23 ರಲ್ಲಿ 11140 ಕೋಟಿ ಎಸ್ ಸಿ ಎಸ್ ಟಿ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿದ್ದಾರೆ. 2023 - 24 ರಲ್ಲಿ 14 ಸಾವಿರ ಕೋಟಿ ಎಸ್ ಸಿ ಎಸ್ ಟಿ ಹಣ ವರ್ಗಾವಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ ಎಂದರು. 


ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಿದರು. ವಿಪಕ್ಷದ ಧ್ವನಿ ಅಡಗಿಸಲು ಮುಂದಾಗಿದ್ದಾರೆ. ವಿಪಕ್ಷದ ಧ್ವನಿ ಅಡಗಿಸಲು ಸದನ ಮುಂದೂಡಿದರು. ಬಿಜೆಪಿ - ಜೆಡಿಎಸ್ ಭ್ರಷ್ಟಾಚಾರ ಮಾಡಿದ್ದರೆ ದಾಖಲೆ ತರಿಸುವ ಅಧಿಕಾರ ಸರಕಾರಕ್ಕೆ ಇದೆ. ದಾಖಲೆ ತರಿಸಿಕೊಂಡು ಪರಿಶೀಲನೆ ನಡೆಸಿ, ಶಿಕ್ಷೆ ಕೊಡುವ ಅಧಿಕಾರ ನಿಮಗಿದೆ ಎಂದರು. 


ರಾಜ್ಯಪಾಲರು ತನಿಖೆ ಮಾಡಲು ಅನುಮತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡದಿದ್ದರೆ ತನಿಖೆ ಆಗಲಿ. ಹೈಕೋರ್ಟ್ ಮೇಲೆ ಒತ್ತಡ ಹಾಕುವ ಕೆಲಸ ಮಾಡ್ತಿದ್ದಾರೆ. ಐವಾನ್ ಡಿಸೋಜಾ ಅವರು ಬಾಂಗ್ಲಾದೇಶಕ್ಕೆ ಬಂದ ಗತಿ ನಮಗೂ ಬರುತ್ತದೆ ಅಂದಿದ್ದಾರೆ. ಕಾಂಗ್ರೆಸ್ ನವರು ರಾಜಭವನಕ್ಕೆ ನುಗ್ಗಿ ತಮ್ಮನ್ನು ಓಡಿಸುವ ಕೆಲಸ ಮಾಡ್ತೀವಿ ಅಂತಾ ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ. ನೀವು ಒತ್ತಡ ಹಾಕಿದರೆ ಹೆದರಿಕೊಂಡು ಬಿಡ್ತಾರಾ ಎಂದು ಪ್ರಶ್ನಿಸಿದರು. 


ಇದು ಸಿದ್ದರಾಮಯ್ಯ ಆಡಳಿತದ ಗೂಂಡಾ ಪ್ರವೃತ್ತಿಯಾಗಿದೆ. ಇದೊಂದು ದೇಶ ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಐವಾನ್ ಡಿಸೋಜಾ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಬಾಂಗ್ಲಾದೇಶದಲ್ಲಿ ನಡೆದ ಘಟನೆ ಭಾರತದಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು. 


ಭಾರತ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾತೃಸ್ಥಾನ ಪಡೆದಿದೆ. ನಮ್ಮ ದೇಶದಲ್ಲಿ ಏನಾದರೂ ಅಂತಹ ಘಟನೆ ನಡೆದಿದ್ದರೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಮೋದಿ ಅವರ 10 ವರ್ಷದ ಆಡಳಿತಾವಧಿಯಲ್ಲಿ ಇಂತಹ ಒಂದೇ ಒಂದು ಘಟನೆ ನಡೆದಿಲ್ಲ. ಐವಾನ್ ಡಿಸೋಜಾ ಅವರ ವಿರುದ್ದ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಬಂಧಿಸಬೇಕಿತ್ತು ಎಂದು ಆಗ್ರಹಿಸಿದರು. 


ಸಚಿವ ಜಮೀರ್ ಅಹಮದ್ ಹೇಳ್ತಾರೆ ರಾಜ್ಯದಲ್ಲಿ ಕಾನೊನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಹೊಣೆ ಅಂತಾರೆ. ಕಾನೂನು ಸುವ್ಯವಸ್ಥೆ ಹದಗೆಡಿಸುತ್ತೇವೆ ನಿಮ್ಮ ಆದೇಶ ಹಿಂಪಡೆಯಿರಿ ಎಂಬ ಒತ್ತಡವಿದೆ. ಅನೇಕ ಸಚಿವರು, ಶಾಸಕರು ಬೆದರಿಕೆಯೊಡ್ಡುವ ಹೇಳಿಕೆ ನೀಡ್ತಿದ್ದಾರೆ. ರಾಜ್ಯಪಾಲರು ದಲಿತರು ಎನ್ನುವ ಕಾರಣಕ್ಕೆ ಈ ರೀತಿ ಮಾತನಾಡ್ತಿದ್ದಾರೆ ಅನಿಸುತ್ತಿದೆ.ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ ಎಂದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ