ಮಂಜಿನ ಕಣ್ಣಮುಚ್ಚಾಲೆಯ ಆಟದಲ್ಲಿ ಜೋಗ ಜಲಪಾತ ಕಣ್ಮರೆ

 


ಸುದ್ದಿಲೈವ್/ಶಿವಮೊಗ್ಗ


ಮಂಜಿನ ಮರೆಯಲ್ಲಿ ವಿಶ್ವ ವಿಖ್ಯಾತ  ಜೋಗ ಜಲಪಾತ ಕಣ್ಮರೆಯಾಗಿದೆ.‌ ಕೆಂಪು ಮಿಶ್ರಿತ ಕೆಮ್ಮಣ್ಣಿನ ಬಣ್ಣದಲ್ಲಿ ಜೋಗದಲ್ಲಿ ರಾಜಾ ರಾಣಿ ರೋರಲ್ ರಾಕೆಟ್ ಧುಮ್ಮಿಕ್ಕುತ್ತಿವೆ. ಈ ಜೋಗ ನೋಡಲು ಕಾತುರದಿಂದ ಕಾದಿದ್ದ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. 


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತಕ್ಕೆ ಲಿಂಗನಮಕ್ಕಿಯಿಂದ 16,000 ಕ್ಯುಸೆಕ್ ಗೂ ಹೆಚ್ಚು ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗುತ್ತಿದೆ.‌ ಈ ಹಿನ್ನೆಲೆಯಲ್ಲಿ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿದೆ.  


ನೋಡಲು ಆಗಮಿಸಿದ ನೂರಾರು ಪ್ರವಾಸಿಗರು ಮೋಡದ ಮರೆಯಲ್ಲಿ ಜೋಗದ ರಾಜಾ ರಾಣಿ, ರೋರಲ್, ರಾಕೆಟ್  ಮಾಯವಾಗಿದೆ. 


ಮೂರ್ನಾಲ್ಕು ಗಂಟೆ ಕಳೆದರೂ ಕೂಡ ಸಂಪೂರ್ಣವಾಗಿ ಕಾಣದ ಜೋಗ ಜಲಪಾತದಲ್ಲಿ ಕಾದು ಕಾದು  ಪ್ರವಾಸಿಗರು ವಾಪಾಸಾಗುತ್ತಿದ್ದಾರೆ. ಆದರೆ ನೀರು ಧುಮ್ಮಿಕ್ಕುವ ಮನಮೋಹಕ ದೃಶ್ಯ ಮಂಜಿನ ಮರೆಯಲ್ಲಿ ಕಾಣೆಯಾಗಿದೆ. 


ಲಿಂಗನ ಮಕ್ಕಿಯಲ್ಲಿ ನದಿಗೆ ನೀರು ಬಿಟ್ಟ ಕಾರಣ ಎಲ್ಲೆಲ್ಲೂ ಝರಿಗಳು ನಿರ್ಮಾಣವಾಗಿದೆ. ಜಲಪಾತದಿಂದ ರಾಜಾ ರಾಣಿ ರೋರಲ್ ರಾಕೆಟ್ ಮಾತ್ರ ಧುಮ್ಮುಕ್ಕುತ್ತಿಲ್ಲ ಹಲವು ಝರಿಗಳಾಗಿ ಧುಮ್ಮುಕ್ಕುತ್ತಿವೆ. ಇದು ಸಹ ನೋಡಲು ರಮಣೀಯವಾಗಿದೆ. 

ಇದನ್ನೂ ಓದಿ-https://www.suddilive.in/2024/08/blog-post_61.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು