ಏರ್ ಪೋರ್ಟ್ ರಸ್ತೆಯ ಜಾಗವನ್ನ ಖಾಸಗಿಯವರಿಗೆ ಖಾತೆ ಏರಿಸಿದ ಪ್ರಕರಣ-ವರದಿ ನಂತರ ಸೂಕ್ತ ಕ್ರಮ-ಸಚಿವ ಭೈರೇಗೌಡ

 


ಸುದ್ದಿಲೈವ್/ಶಿವಮೊಗ್ಗ


ಜೂನ್ ಜುಲೈ ತಿಂಗಳಲ್ಲಿ ಶೇ.25% ಮಳೆಯಾಗಿದೆ. ರಾಜ್ಯದಲ್ಲಿ ಹೆಚ್ಚು ಮಳೆಯಾದರೂ ಕೋಲಾರ, ಬೆಂಗಳೂರು ಗ್ರಾಮಾಂತ ಭಾಗದಲ್ಲಿ ಮಳೆ ಕಡಿಮೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.


ಭದ್ರ ಜಲಾಶಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ 32% ಮಳೆಯಾಗಿದೆ. ಬಾಗಲಕೋಟೆ, ಕೊಡಗು ಹಾಸನ ಮೊದಲಾದ ಕಡೆ ಹೆಚ್ಚು ಮಳೆ ಆಗಿದೆ. ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಕ್ರಮ ಕೈಕೊಳ್ಳಲಾಗಿದೆ ಶೇ.65 ಸಾವಿರ ಹೆಕ್ಟೇರ್ ನಲ್ಲಿ ಮಳೆ ಹಾನಿಯಾಗಿದೆ ಎಂದರು.


2019 ರಲ್ಲಿ ಹಾನಿಯಾದ ಬೆಳೆಗೆ ಹೋಲಿಸಿದರೆ ಕಡಿಮೆಯಾಗಿದೆ.  ಶಿರೂರುಭೂಕುಸಿತ ಪ್ರಕರಣವೂ ಸೇರಿದಂತೆ 58 ಜನ ಸಾವನ್ನಪ್ಪಿದ್ದಾರೆ ಸಿಡಲಿಗೆ ಮರ ಬಿದ್ದು, ಹಳ್ಳ ಕೆರೆಗಳಿಗೆ ಇಳಿದು ಜೀವ ಕಳಿದುಕೊಂಡಿದ್ದಾರೆ. ಅಪಘಾತದಲ್ಲಿ ನದಿಗೆ ಬಿದ್ದು ಸಾವನ್ನಪ್ಪಿರುವುದು ಸೇರಿ ಸಾವನ್ನಪ್ಪಿರುವ ಸಂಖ್ಯೆ 58 ಜನರಾಗಿದ್ದಾರೆ. 2019 ರಲ್ಲಿ 270 ಜನ ಸಾವನ್ನಪ್ಪಿದ್ದರು ಎಂದರು.


ಸಿಎಂ ಸಹ ಕೊಡಗು, ಹಾಸನ, ಸಕಲೇಶಪುರ ಮೊದಲಾದ ಕಡೆ ಭೇಟಿ ನೀಡಿದ್ದಾರೆ. ಒಂದು ವಾರದ ಅವಧಿಗೆ ಮಳೆ ಕಡಿಯಾಗಲಿದೆ ಆ. 15 ರಿಂದ ಮತ್ತೆ ಮಳೆ ಚುರುಕಾಗುವ ಸಂಭವನೀಯತೆಯಿದೆ. ಜಲಾಶಯದ ನೀರು ಹೆಚ್ಚು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದರು.


ನದಿಯಲ್ಲಿ ಹೆಚ್ಚು ನೀರು ಹರಿಯುವಾಗ ಮತ್ತೆ ಜಲಾಶಾಯದಲ್ಲಿ ನೀರು ಬಿಡುವುದರಿಂದ ಕೃತಕ ಪ್ರವಾಹ ಆಗಲಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸೂಕ್ಷಮ ಜರುಗಿಸಬೇಕು. ಮಳೆ  ಪರಿಹಾರವಾಗಬೇಕು. ರಸ್ತೆಗಳು ಮಲೆನಾಡಲಿನಲ್ಲಿ ಹಾಳಾಗಿವೆ ಸಿಎಂಗೆ ಮನವಿ ಮಾಡಿರುವೆ. ಸಂಪೂರ್ಣವಾಗಿ ಹಾಳಾದ ರಸ್ತೆ ಪಟ್ಟಿ ಮಾಡಿ ಕೊಡಲು ಡಿಸಿಗಳಿಗೆ ಸೂಚಿಸಿರುವೆ. ಕುಸಿತಕ್ಕೆ ಒಳಗಾದ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ರಾಜ್ಯದ 765 ಕೋಟಿ ಹಣ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.


ಭೂ ಕುಸಿತವಾಗಿರುವ ಬಗ್ಗೆ 300 ಕೊಟಿಗೂ ವೆಚ್ಚದಲ್ಲಿ  ಗಣಿ ಮತ್ತು ಭೂವಿಜ್ಞಾನದವರಿಗೆ ಸರ್ವೆ ಮಾಡಲು ಸೂಚಿಸಿದ್ದೇವೆ.  ಭೂಕುಸಿತ ವಿಚಾರದಲ್ಲಿ ತಡೆಗಟ್ಟಲು ಪ್ರಯತ್ನಕ್ಕೆ ಈ ಹಣ ವ್ಯಯವಾಗಲಿದೆ ಎಂದ ಅವರು, ಭದ್ರಾವತಿಯಲ್ಲಿ 35 ಮನೆಗಳಿಗೆ ಪರ್ಯಾಯ ನಿವೇಶನ ನೀಡಿದ್ದಾರೆ. ಇವರು ಶಿಫ್ಟ್ ಆಗಬೇಕು. ಸಹಕಾರ ನೀಡಬೇಕು ಎಂದರು.


ಕೆಲ ಸ್ಥಳಾಂತರಗೊಳ್ಳದ ಕಂದಾಯ ನಿವಾಶನ. ಜೀವಹಾನಿಯಾದ 58 ಜನರಿಗೆ ಪರಿಹಾರ ನೀಡಲಾಗಿದೆ. ಬೆಳೆಪರಿಹಾರ ನೀಡಲಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಸಿಎಂ ಮೂಲಕ ಕೇಂದ್ರದ ಮೊರೆಹೋಗುತ್ತೇವೆ ಎಂದರು.


ಅನಧಿಕೃತ ಮನೆಗೆ ಕಾನೂನು ಪ್ರಕಾರ ಅವಕಾಶವಿಲ್ಲ. ದಾಖಲೆ ಇದ್ದವರಿಗೆ ಪರಿಹಾರ ನೀಡಲಾಗುತ್ತಿದೆ. ಅನಧಿಕೃತ ಮನೆಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಸಗುವುದು. ನಿವೇಶನಿದ್ದರೆ ಮನೆಯನ್ನ ನೀಡಲಾಗುತ್ತಿದೆ. ಅಧಿಕೃತವಿದ್ದರೆ 1.2 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ. ನಿವೇಶನ ಇದ್ದರೆ ಮನೆ ನಿರ್ಮಾಣ ಎಂದರು.


ಐದು ವರ್ಷ ಮನೆಕಟ್ಟಲು ಆರಂಭವಾಗದಿದ್ದರೆ ಮನೆ ಅವಶ್ಯಕತೆಯಿಲ್ಲದಂತೆ ಪರಿಹರಿಸಲಾಗುವುದು. ಬೆಳೆ ಪರಿಹಾರಹೆಚ್ಚಳಕ್ಕೆ ಈಗಾಗಲೇ ಪರಿಷ್ಕರಿಸಲಾಇದೆ. ಎಂದರು.


ಏರ್ ಪೋರ್ಟ್ ರಸ್ತೆಯನ್ನ ಖಾಸಗಿಯವರಿಗೆ ಏರಿಸಲಾಗಿದೆ. ಡಿಎಲ್ ಆರ್ ತಹಶೀಲ್ದಾರ್ ಸರ್ವೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಜಾಗ ಭದ್ರ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ-https://www.suddilive.in/2024/08/blog-post_16.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close