ವಿಹಂಗಮ ರೆಸಾರ್ಟ್ ವಿರುದ್ಧ ಎಫ್ಐಆರ್-ಎಫ್ಐಆರ್ ಬೆನ್ನಲ್ಲೇ ಆರ್ ಎಫ್ ಒ ವರ್ಗಾವಣೆ ನಿಜನಾ?



ಸುದ್ದಿಲೈವ್/ಶಿವಮೊಗ್ಗ


ಕಳೆದ ವರ್ಷ ತೀರ್ಥಹಳ್ಳಿ ವಿಹಂಗಮ ರೆಸಾರ್ಟ್ ನಲ್ಲಿ ವನ್ಯಜೀವಿಗಳ ಕೊಂಬು, ಮುಖವಾಡ, ಜೀವಂತ ಗುಂಡು, ವಿದೇಶಿ ಮದ್ಯ ಮೊದಲಾದ ವಸ್ತುಗಳ ಸಂಗ್ರಹ ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡ ಆರೋಪದ ಅಡಿಯಲ್ಲಿ ತೋಟವನ್ನ ವಶಪಡಿಸಿಕೊಳ್ಳಲಾಗಿದೆ.


ವಿಹಂಗಮ ರೆಸಾರ್ಟ್ ತೀರ್ಥಹಳ್ಳಿಯ ಭಾರತೀಪುರದ ತುಂಗ ನದಿಯ ದಂಡೆಯ ಮೇಲೆ ನಿರ್ಮಾಣ ಮಾಡಲಾಗಿದೆ. ಈ ನದಿಯ ದಡದಲ್ಲಿರುವ ರೆಸಾರ್ಟ್ ಈಗ ಒತ್ತುವರಿಯ ಆರೋಪ ಎದುರಿಸುತ್ತಿದೆ. ವಿಹಂಗಮ ರೆಸಾರ್ಟ್ ಸುಮಾರು 13.5 ಎಕರೆ ರೆಸಾರ್ಟ್ ನಿರ್ಮಾಣವಾಗಿದೆ. 



ಇದರಲ್ಲಿ ಮನೆಗಳು ಮತ್ತು ತೋಟಗಳಿವೆ. ಸಧ್ಯಕ್ಕೆ ತೋಟಗಳನ್ನ ವಶಪಡಿಸಿಕೊಳ್ಳಲಾಗಿದೆ. ಎಫ್ಐಆರ್ ಸಹ ದಾಖಲಾಗಿದೆ. ಇದರಲ್ಲಿ ರೆವೆನ್ಯೂ ಮಾಡಿಕೊಡಲಾಗಿದೆ. ದಾಖಲೆ ತಂದುಕೊಡಲು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದೆ. 


ವಿಹಂಗಮ ರೆಸಾರ್ಟ್ ವಿರುದ್ಧ ಎಫ್ಐಆರ್ ಮಾಡಿದ ಬೆನ್ನಲ್ಲೇ ಆರ್ ಎಫ್ ಒ ಡಾ.ಲೋಕೇಶ್ ಕೋಲಾರ ಜಿಲ್ಲೆಗೆ ವರ್ಗಾವಣೆ ಆದ ದಿನಾಂಕವೂ ಸಹ ಒಂದೇ ಆಗಿದೆ. ಆದರೆ ಡಾ. ಲೋಕೇಶ್ ವರ್ಗಾವಣೆಯನ್ನ ಪ್ರಶ್ನಿಸಿ ಕೆಎಟಿಗೆ ಹೋಗಿದ್ದಾರೆ. 


ಮೂರು ತಿಂಗಳು ಬಾಕಿ ಇರುವ ಕಾರಣ ಈ ವರ್ಗಾವಣೆಯನ್ನ ಪ್ರಶ್ನಿಸಿ ಡಾ.ಲೋಕೇಶ್ ಕೆಎಟಿಗೆ ಹೋಗಿದ್ದಾರೆ. ವರ್ಗಾವಣೆ ಮತ್ತು ಎಫ್ಐಆರ್ ಆದ  ದಿನ ಒಂದೇ ಆಗಿರುವ ಕಾರಣ  ವಿಹಂಗಮದ ವಿರುದ್ಧದ ಎಫ್ಐಆರ್ ದಾಖಲಾದ ಕಾರಣ ಅನುಮಾನ ವ್ಯಕ್ತವಾಗಿದೆ. 


ಈ ವರ್ಗಾವಣೆ ಬಗ್ಗೆ ಡಾ.ಲೋಕೇಶ್ ಕಡಾಖಂಡಿತವಾಗಿ ಇದೇ ಕಾರಣಕ್ಕೆ ವರ್ಗಾವಣೆ ಆಗಿದೆ ಎಂದು ಹೇಳಲಾರೆ. ಆದರೆ ಒಂದೇ ದಿನ ಆಗಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಡಿಎಫ್ ಒ ಅವರು ಇದು ಆ ಕಾರಣವಲ್ಲ ಆದರೆ ಅವರ ವೈಯುಕ್ತಿಕ ಕಾರಣಕ್ಕೆ ವರ್ಗಾ ಆಗಿದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close