ಸುದ್ದಿಲೈವ್/ಶಿವಮೊಗ್ಗ
ಈ ಹಿಂದೆ ನ್ಯೂ ಮಂಡ್ಲಿಯ 2 ನೇ ತಿರುವಿನಲ್ಲಿ ಹೆಣ್ಣುಮಕ್ಕಳನ್ನ ಚುಡಾಯಿಸುವುದು, ಕಿರಿಕ್ ಮಾಡುವುದು ಮೊದಲಾದ ಕೃತ್ಯಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ದೂರನ್ನ ವಾಪಾಸ್ ಪಡೆಯುವಂತೆ 10 ಜನ ಹುಡುಗರು ನ್ಯೂಮಂಡ್ಲಿ 2 ನೇ ತಿರುವಿನಲ್ಲಿದ್ದ ದೂರು ದಾಖಲಿಸಿದ್ದ ಕುಟುಂಬಸ್ಥರನ್ನ ಆಯುಧಗಳನ್ನ ಹಿಡಿದು ಕೊಂಡು ಬೆದರಿಸಲು ಆರಂಭಿಸಿದ್ದಾರೆ. ಖಿಲ್ಜಿ ದಾವೂದ್ ಮತ್ತು ಅವರ ಸ್ನೇಹಿತರಿಗೆ ತಲ್ವಾರ್ ಗಳನ್ನ ತೋರಿಸಿ ನಿಮ್ಮ ಹೆಣ ಬೀಳಲಿದೆ ಎಂದು ಬೆದರಿಕೆ ಹಾಕಿದ್ದರು.
ಇದನ್ನ ಕಂಡು ಜನ ಸೇರಲು ಆರಂಭಿಸಿದಾಗ ಇವರೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ರಿಯಾಜ್, ಫಸಿ, ನಯಾಜ್, ಉಸ್ಮಾನ್, ಮುಬಾರಕ್, ಲುಕ್ಮಾನ್ ಮತ್ತು ಮುಸದ್ದಿಖ್ ರವರು ತಮ್ಮ ನಾಲ್ಕು ಚಕ್ರಗಳ ಟೌವಿಂಗ್ ಗಾಡಿಗಳನ್ನು ತಂದು 02ನೇ ಕ್ರಾಸ್ ಬಳಿ ಬಂದು ಯಾರು ನಮ್ಮ ವಿರುದ್ದ ಈ ಹಿಂದೆ ಠಾಣೆಗೆ ದೂರು ನೀಡಿದವರು ಅವರನ್ನ ಜೀವ ಸಹಿತ ಬಿಡುವುದಿಲ್ಲವೆಂದು ತಲ್ವಾರ್ ತೋರಿಸಿದ್ದಾರೆ.
ಇವರೆಲ್ಲಾ ಕ್ರಿಮಿನಲ್ ಬ್ಯಾಕ್ ರೌಂಡ್ ಉಳ್ಳವರು ಮತ್ತು ಗಾಂಜಾ, ಕೊಲೆ ಪ್ರಕರಣಗಳಲ್ಲಿ ಬೇಕಾದವರು ಎಂದು ಇವರ ವಿರುದ್ಧ ದಾವೂದ್ ದೂರು ದಾಖಲಿಸಿದ್ದಾರೆ. ಆದರೆ ಇವರುಗಳಲ್ಲಿ ರಿಯಾಜ್ ಎಂಬುವನು ತಲ್ವಾರ್ ತೋರಿಸಿ ಎಸ್ಕೇಪ್ ಆಗುವ ವೇಳೆ ನ್ಯೂಮಂಡ್ಲಿಯ ಪತ್ರಿಕಾ ಕಚೇರಿ ಮುಂದೆ ಸಿಕ್ಕಿ ಬಿದ್ದಿದ್ದಾನೆ.
ಆತನನ್ನ ರಿಯಾಜ್ ಎಂದು ಗುರುತಿಸಾಗಿದೆ. ಈತನಿಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.