ಬಿಜೆಪಿ ಪಾದಯಾತ್ರೆಗೆ ಶಿವಮೊಗ್ಗದಿಂದ ಎಷ್ಟು ಜನ ಪಾಲ್ಗೊಳ್ಳಲಿದ್ದಾರೆ ಗೊತ್ತಾ?



ಸುದ್ದಿಲೈವ್/ಶಿವಮೊಗ್ಗ


ನಗರದ ದೈವನಜ್ಞ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಗರ ಕಾರ್ಯಕಾರಣಿ ಸಬೆ ನಡೆದಿದೆ. 


ಸಭೆಯಲ್ಲಿ ವಾಲ್ಮೀಕಿ ಮತ್ತು ಮೂಡಾ ಹಗರಣದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿಯನ್ನ‌ ಖಂಡಿಸಲಾಯಿತು. ಅಲ್ಲದೆ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬ ನೇರ ಪಾಲ್ಗೊಳ್ಳುವಿಕೆ ಹಾಗೂ ವಾಲ್ಮೀಕಿ ಹಗರದಲ್ಲಿಯೂ ಪಾಲುಗಾರಿಕೆ ಹೊಂದಿರುವುದರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಖಂಡನಾನಿರ್ಣಯ ತೆಗೆದುಕೊಳ್ಳಲಾಯಿತು. 


ಶನಿವಾರ  ಬಿಜೆಪಿಯು ಮೈಸೂರಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಗೆ ಸಿದ್ದತೆ ನೋಡಿಕೊಳ್ಳಲು ನಾಳೆ 160 ಜನ‌ ಮೈಸೂರಿಗೆ ತೆರಳಲಿದ್ದಾರೆ. 


ಶನಿವಾರ ನಡೆಯಲಿರುವ ಈ ಪಾದಯಾತ್ರೆಗೆ ಬಿಜೆಪಿ ಶಿವಮೊಗ್ಗ ಜಿಲ್ಲೆಯ 3 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಶಿವಮೊಗ್ಗ ನಗರದಿಂದ ಒಂದು ಸಾವಿರ ಉಳಿದ ತಾಲೂಕಿನಿಂದ 2 ಸಾವಿರ ಜನ  ಕಾರ್ಯಕರ್ತರು ಭಾಗಿಯಾಗಲಿದ್ದಾರೆ. 


ಸಭೆಯಲ್ಲಿ ನಗರ ಶಾಸಕ ಚೆನ್ನಬಸಪ್ಪ, ಬಿಜೆಪಿ ಮುಖಂಡರಾದ ಹರಿಕೃಷ್ಣ, ಜಗದೀಶ್, ಸುರೇಖ ಮುರಳೀಧರ್ ಮಹಾಶಕ್ತಿಕೇಂದ್ರದ ಐದು ಜನರ ತಂಡ, ವಾರ್ಡ್ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಬೂತ್ ಅಧ್ಯಕ್ಷರು,ಕಾರ್ಯದರ್ಶಿಗಳು, ಶಕ್ತಿಕೇಂದ್ರದ ಪ್ರಮುಖರು ಭಾಗಿಯಾಗಿದ್ದರು. 

ಇದನ್ನೂ ಓದಿ-https://www.suddilive.in/2024/08/43.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close