ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಸಾಲು ಸಾಲು ಆತ್ಮಹತ್ಯೆ ಮುಂದುವರೆದಿದೆ. ಮೊನ್ನೆ ಅಪ್ಪ ಮಾಡಿದ ಸಾಲಕ್ಕೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಸಿದ ಬೆನ್ನಲ್ಲೇ ಪೇಪರ್ ಟೌನ್ ನಡೆದಿದೆ.
ಪೇಪರ್ ಟೌನ್ 6 ನೇ ನಿವಾಸಿ ಪ್ರದೀಪ್ ಸುಮಾರು 27 ವರ್ಷ ಯುವಕ ಆನ್ ಲೈನ್ ನಲ್ಲಿ ಹಣತೊಡಗಿಸಿ ಕೈಸುಟ್ಟಿಕೊಂಡ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಆನ್ ಲೈನ್ ಇನ್ ವೆಸ್ಟ್ ಮೆಂಟ್ ಗಾಗಿ ಸುಮಾರು 1.5 ಲಕ್ಷ ರೂ. ಇನ್‌ವೆಸ್ಟ್ ಮೆಂಟ್ ಮಾಡಿದ್ದ ಪ್ರದೀಪ್ ಇಷ್ಟು ಹಣವನ್ನ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದನು. ಮಾಚೇನಹಳ್ಳಿಯ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಪ್ರದೀಪ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೊನ್ನೆ ಸ್ಟೀವನ್ ಎಂಬ ಯುವಕ ಅಪ್ಪ ಮಾಡಿಕೊಂಡ ಸಾಲಕ್ಕೆ ಉತ್ತರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆ ಪ್ರದೀಪ್ ಕನಸುಕಟ್ಟಿಕೊಂಡು ಇನ್ ವೆಸ್ಟ್ ಮೆಂಟ್ ಮಾಡಿದ್ದ. ಕನಸು ಕೈಕೊಟ್ಟ ಪರಿಣಾಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.