ಸುದ್ದಿಲೈವ್ /ಶಿವಮೊಗ್ಗ
ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿನಿಗೆ ಪ್ರೀತಿ, ಪ್ರೇಮ ಎಂದು ನಂಬಿಸಿ ವಂಚಿಸಿದ್ದು, ಅಷ್ಟು ಸಾಲದೆಂದು ಮನೆಯವರಿಗೆಲ್ಲಾ ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಈಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೂಳೆಬೈಲಿನ ನಿವಾಸಿಯ ವಿದ್ಯಾರ್ಥಿನಿಗೆ ಸಾಗರ ತಾಲೂಕಿನಲ್ಲಿ ಕುರಿ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿ ಕುರಿ ಮಾರಾಟ ಮಾಡಲು ಮನೆಗೆ ಬಂದಾಗ ಪರಿಚಯವಾಗಿದೆ. ಪರಿಚಯ ಪ್ರೀತಿ, ಪ್ರಣಯಕ್ಕೆ ತಿರುಗಿದೆ. ಯಾವಾಗ ವಿದ್ಯಾರ್ಥಿನಿಗೆ ಪ್ರಿಯಕರ ಮದುವೆಯಾಗಿ ಮಕ್ಕಳಿರುವುದು ಗೊತ್ತಾಯಿತೋ ಆಗ ಆತನ ಜತೆಸಲುಗೆಯಿಂದ ಇರುವುದರಿಂದ ಹಿಂದೆ ಸರಿದಿದ್ದಾಳೆ.
ಹಿಂದೆ ಸರಿದರೂ ಸುಹೇಲ್ ಖಾನ್ ನೀನು ಒಬ್ವಳೇ ಸಿಗು ಮಾತನಾಡೋಣ ಎಂದು ಕರೆಯಲು ಪ್ರಯತ್ನಿಸಿದ್ದಾನೆ. ಆದರೆ ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದಾಳೆ. ಮತ್ತೆ ಸಂಪರ್ಕಕ್ಕೆ ಬಂದ ಸುಹೇಲ್ ಸಿಗದಿದ್ದರೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಹೆದರಿದ ವಿದ್ಯಾರ್ಥಿನಿ ಸುಹೇಲ್ ಖಾನ್ ನ ನಾದಿನಿಗೆ ಕರೆ ಮಾಡಿ ಹಿಂಸೆ ನೀಡುತ್ತಿರುವ ಬಗ್ಗೆ ಹೇಳಿದ್ದಾಳೆ. ಇಷ್ಟಕ್ಕೆ ಸುಹೇಲ್ ನ ಕುಟುಂಬಸ್ಥರು ಮನೆ ಹತ್ತಿರ ಬಂದು ತಾಯಿ ಮತ್ತು ಮಗಳನ್ನ ಬೈದು ಅವಮಾನಗೊಳಿಸಿದ್ದಾರೆ. ಇಷ್ಟಕ್ಕೆ ಸಾಲದು ಎಂಬಂತೆ ವಿದ್ಯಾರ್ಥಿನಿ ಸುಹೇಲ್ ಜೊತೆ ಪ್ರೀತಿಯಲ್ಲಿದ್ದಾಗ ಖಾಸಗಿ ಫೊಟೊಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.