ಸುದ್ದಿಲೈವ್/ಶಿವಮೊಗ್ಗ
ಪಿ ಓ ಪಿ ಯಿಂದ ತಯಾರಿಸಿದ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನ ನಿಷೇಧಿಸುವಂತೆ ಒತ್ತಾಯಿಸಿ ಇಂದು ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಪ್ರದೇಶ ಕುಂಬಾರ ಸಂಘ ಯುವ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಗರದಲ್ಲಿ ಪಿಒಪಿಯಿಂದ ತಯಾರಿಸಿದ ಗಣಪತಿ ಮೂರ್ತಿಯನ್ನ ಇತರೆ ಊರುಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಈ ಗಣಪತಿ ಮೂರ್ತಿಯನ್ನ ತುಂಗ ನದಿಗೆ ವಿಸರ್ಜಿಸುವ ಮೂಲಕ ನದಿಯ ಜಲಚರ ಜೀವಿರಾಶಿಗಳಿಗೆ ಮಾರಕವಾಗಲಿದೆ. ಹಾಗಾಗಿ ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನ ನಿಷೇಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ, ಮಣ್ಣಿನ ಗಣಪತಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಇದರಿಂದ ಕುಂಬಾರಿಕೆಗೆ ಹೆಚ್ಚು ಶಕ್ತಿ ನೀಡಿದಂತಾಗುತ್ತದೆ. ಈ ಬಾರಿ ಮಳೆ ಹೆಚ್ಚಿರುವುದರಿಂದ ಮಣ್ಣಿನ ಗಣಪತಿಗಳಿಗೆ ಹಾನಿಯಾಗದಂತೆ ಮಳಿಗೆಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುಂಬಾರ ಸಂಘ ಯುವ ಘಟಕದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರರವರು ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಆಕಾಶ ಕುಂಬಾರ್, ಸದಸ್ಯರುಗಳಾದ ಮಂಜುನಾಥರವರು, ಮಹೇಶ್ ರವರು, ಭಾಸ್ಕರರವರು, ರಾಜಣ್ಣಪವರು, ನಾಗರಾಜ್, ಗಣೇಶಣ್ಣನವರು, ಪಂಚಣ್ಣನವರು, ಉಪಸ್ಥಿತರಿದ್ದರು.
ಇದನ್ನೂ ಓದಿ-https://www.suddilive.in/2024/08/blog-post_50.html
ಧನ್ಯವಾದಗಳು ಸರ್, ಪರಿಸರ ಪ್ರೇಮಿ ಮಣ್ಣಿನ ಗಣಪತಿಗೆ ಮಾತ್ರ ಅವಕಾಶ ನೀಡಬೇಕು, ಹಾಗೂ ಸ್ಥಳೀಯ ಕಲಾವಿದರಿಗೆ ಬೆಂಬಲಿಸಬೇಕು ಎಂಬ ಆಶಯದೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆವು.
ಪ್ರತ್ಯುತ್ತರಅಳಿಸಿ